– ಕುಮಾರಸ್ವಾಮಿ, ಡಾ.ಮಂಜುನಾಥ್ ಗೆಲ್ಲುವುದು ಕಷ್ಟ
ಬೆಂಗಳೂರು: ಜೆಡಿಎಸ್‌ನಲ್ಲಿ (JDS) ಉಳಿದಿರೋ ನಿಷ್ಠಾವಂತರು ಇಂಡಿಯಾ (INDIA) ಕೂಟಕ್ಕೆ ಬೆಂಬಲ ಕೊಡ್ತೀವಿ. ನಾವೇ ಇಂಡಿಯಾ ಕೂಟದ ಪರ ಪ್ರಚಾರ ಮಾಡ್ತೀವಿ ಎಂದು ಜೆಡಿಎಸ್ ಉಚ್ಚಾಟಿತ ನಾಯಕ ಸಿಎಂ ಇಬ್ರಾಹಿಂ (CM Ibrahim) ಇಂಡಿಯಾ ಒಕ್ಕೂಟಕ್ಕೆ ಬೆಂಬಲ ಘೋಷಿಸಿದ್ದಾರೆ.
Advertisement
ಈ ಕುರಿತು ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಬಗ್ಗೆ ನಾನೇನು ಹೇಳಿದ್ದೆನೋ ಅದು ಸತ್ಯವಾಗಿದೆ. ಕಾಂಗ್ರೆಸ್ ಅವರು 2-3 ಸೀಟು ಆದರೂ ಮುಸ್ಲಿಮರಿಗೆ ಕೊಡಬೇಕಿತ್ತು. 21% ಮತ ಇರೋರಿಗೆ ಕಡಿಮೆ ಸೀಟು ಕೊಟ್ಟಿದ್ದೀರಾ. 5% ಇರೋರಿಗೆ ಹೆಚ್ಚು ಸೀಟು ಕೊಡುತ್ತಿದ್ದೀರಾ. ವಿಧಿ ಇಲ್ಲದೆ ಕಾಂಗ್ರೆಸ್‌ಗೆ ಬೆಂಬಲ ಕೊಡುತ್ತಿದ್ದೇವೆ. ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ದರೆ 6 ಸ್ಥಾನ ಗೆಲ್ಲುತ್ತಿದ್ದೆವು. ಮೈಸೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ, ಬಿಜಾಪುರ, ತುಮಕೂರು ಗೆಲ್ಲುತ್ತಿದ್ದೆವು. ಮಂಡ್ಯಕೋಸ್ಕರ ಕಿತ್ತಾಟ ಮಾಡಿದ್ರಿ. ಸುಮಲತಾ ಏನು ಮಾಡುತ್ತಾರೋ ಗೊತ್ತಿಲ್ಲ. ಬಿಜೆಪಿಗೂ ಜೆಡಿಎಸ್‌ಗೂ ಸಂಬಂಧವೇ ಬರಲ್ಲ. ಮಂಡ್ಯದಲ್ಲಿ 2 ಲಕ್ಷ ವೋಟ್ ಜೆಡಿಎಸ್ ಕಳೆದುಕೊಂಡಿದೆ. ಒಕ್ಕಲಿಗರು ಬಿಜೆಪಿಗೆ ವೋಟ್ ಹಾಕಲ್ಲ. ಕುಮಾರಸ್ವಾಮಿಗೆ ಆರೋಗ್ಯ ಕೊಡಲಿ ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ. ದೇವೇಗೌಡರಿಗೆ ಈ ವಯಸ್ಸಿನಲ್ಲಿ ಇಂತಹ ಸ್ಥಿತಿ ಆಗಬಾರದು ಎಂದರು. ಇದನ್ನೂ ಓದಿ: ಹಾಸನ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Advertisement
Advertisement
ಮೋದಿ (Narendra Modi) ಬಾರಿ ಬುದ್ದಿವಂತರು. ಎಲ್ಲಾ ವಿಷಯಕ್ಕೆ ಕೈ ಹಾಕಲ್ಲ. ಸೆಲೆಕ್ಟ್ ಸೀಟುಗಳಲ್ಲಿ ಮಾತ್ರ ಹ್ಯಾಕ್ ಮಾಡುತ್ತಾರೆ. 2004 ರಿಂದಲೂ ಇವಿಎಂ ಹ್ಯಾಕ್ ಆಗುತ್ತಿತ್ತು. ಕಾಂಗ್ರೆಸ್ ಗೆಲ್ಲುತ್ತಿತ್ತು. ಅದಕ್ಕೆ ಅವರು ಮಾತನಾಡುತ್ತಿರಲಿಲ್ಲ. ಇವಿಎಂ ಹ್ಯಾಕ್ ಮಾಡಬಹುದು. ಅದಕ್ಕೆ ಇವಿಎಂ ಬೇಡ. ಬ್ಯಾಲೆಟ್ ಪೇಪರ್ ಬೇಕು ಅಂತ ಕಾಂಗ್ರೆಸ್ ಧ್ವನಿ ಎತ್ತಬೇಕು. ಮೋದಿ ಅಹಂ ಬ್ರಹ್ಮಾಸ್ಮಿ ಆಗಿದ್ದಾರೆ. ಆರ್‌ಎಸ್‌ಎಸ್ ಮೀರಿ ಅವರು ಹೋಗುತ್ತಿದ್ದಾರೆ. ಹೀಗಾಗಿಯೇ ಆರ್‌ಎಸ್‌ಎಸ್ ಅವರು ಚುನಾವಣೆ ಬಾಂಡ್ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಆರ್‌ಎಸ್‌ಎಸ್‌ನಲ್ಲೂ ಒಳ್ಳೆಯವರು ಇದ್ದಾರೆ. ಮೋದಿ ಇವತ್ತು ಆರ್‌ಎಸ್‌ಎಸ್ ಮೀರಿ ಬೆಳೆದಿದ್ದೇನೆ ಎಂದು ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಭಾರತ ಸಮನ್ಸ್ ನೀಡಿದರೂ ಕೇಜ್ರಿವಾಲ್ ಬಂಧನ ಬಗ್ಗೆ ಅಮೆರಿಕ ಮತ್ತೆ ಪ್ರತಿಕ್ರಿಯೆ
Advertisement
ಮಂಡ್ಯದಲ್ಲಿ ಕುಮಾರಸ್ವಾಮಿ (HD Kumaraswamy) ಗೆಲ್ಲೋದು ಕಷ್ಟ ಇದೆ. ಅದಕ್ಕೆ ನಾನು ಕುಮಾರಸ್ವಾಮಿ ನಿಲ್ಲೋದು ಬೇಡ ಎಂದು ಹೇಳಿದೆ. ಅವರ ಆರೋಗ್ಯ ಸರಿಯಿಲ್ಲ. ಸೀಟು ಹಂಚಿಕೆಯ ವಿಚಾರದಲ್ಲಿ ನೀವು ಹೇಳಿದ್ದೇ ನಿಜ ಅಂತ ನನ್ನ ಬಳಿ ಜೆಡಿಎಸ್ ಅವರೇ ಮಾತನಾಡಿದ್ದಾರೆ. ಯಾರು ಮಾತಾಡಿದ್ದಾರೆ ಎಂದು ನಾನು ಹೇಳಲ್ಲ. ಕುಮಾರಸ್ವಾಮಿ ಮಾತಾಡಿಲ್ಲ. ಬೇರೆಯವರು ಮಾತಾಡಿದ್ದಾರೆ. ಚುನಾವಣೆ ಆದ ಮೇಲೆ ಎಲ್ಲವೂ ಬದಲಾವಣೆ ಆಗಲಿದೆ. ಜೆಡಿಎಸ್ ಸಭೆಯಲ್ಲೂ ನಾನು ಹೇಳಿದ್ದು ಸತ್ಯ ಅಂತ ಚರ್ಚೆ ಆಗಿದೆ ಎಂದು ಹೇಳಿದರು. ಇದನ್ನೂ ಓದಿ: ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ನಿಧನ
ಡಾ.ಮಂಜುನಾಥ್ (Dr Manjunath) ಅವರನ್ನು ಯಾಕೆ ಜೆಡಿಎಸ್‌ನಿಂದ ನಿಲ್ಲಿಸಿಲ್ಲ? ಜೆಡಿಎಸ್‌ನಿಂದ ನಿಲ್ಲಿಸಬಹುದಿತ್ತು. ಯಾಕೆ ಬಿಜೆಪಿಯಿಂದ ನಿಲ್ಲಿಸಿದ್ರಿ? ಈಗ ಅವರಿಗೆ ಆಪರೇಷನ್ ಮಾಡಿದಂತೆ ಇದೆ. ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಮಂಜುನಾಥ್ ಗೆಲ್ಲೋದು ಕಷ್ಟ ಇದೆ. ಜನರು ಬುದ್ಧಿವಂತರು. ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ. ಇಂಡಿಯಾ ಕೂಟದಲ್ಲಿ ಇನ್ನು ಸರಿ ಆಗಬೇಕು. ಬಿಜೆಪಿಯಲ್ಲಿ ಒನ್‌ಮ್ಯಾನ್ ಆರ್ಮಿ ಆಗಿದೆ. ಪ್ರಜಾಪ್ರಭುತ್ವ ಉಳಿಸಲು ಇಂಡಿಯಾ ಕೂಟಕ್ಕೆ ಬೆಂಬಲ ಕೊಡಿ ಎಂದು ಪ್ರಚಾರ ಮಾಡುತ್ತೇವೆ. ಏಪ್ರಿಲ್ ಆದ ಮೇಲೆ ಏನೇನು ಆಗುತ್ತೋ ನೋಡಿ. ಯಾರ‍್ಯಾರು ಎಲ್ಲಿ ಹೋಗುತ್ತಾರೆ ನೋಡಿ. ಸಿದ್ದರಾಮಯ್ಯ ಅವರನ್ನು ನಾನು ಹೊರಗಡೆ ಬಂದಾಗಿನಿಂದ ಮಾತನಾಡಿಸಿಲ್ಲ. ಅವರ ಮೇಲೆ ಗೌರವ ಇದೆ. ನಾನು ಅವರ ಜೊತೆ ಮಾತಾಡಿಲ್ಲ. ಸಿದ್ದರಾಮಯ್ಯ ಅವರಿಗೂ ಪಕ್ಷದಲ್ಲಿ ಅವರದ್ದೇ ಆದ ಗೊಂದಲ ಇವೆ. ಕೋಲಾರದಲ್ಲಿ ಗೊಂದಲ ಆಗ್ತಿದೆ ಎಂದರು. ಇದನ್ನೂ ಓದಿ: KSRTC ನೌಕರರಿಗೆ ಗುಡ್‌ನ್ಯೂಸ್ – ಡಬಲ್ ಡ್ಯೂಟಿಯಿಂದ ಮುಕ್ತಿ
ಅಧ್ಯಕ್ಷ ಸ್ಥಾನದ ಕೇಸ್ ವಿಚಾರವಾಗಿ ಮಾತನಾಡಿ, ಸಿಟಿ ಕೋರ್ಟ್‌ನಲ್ಲಿ ವಿಚಾರಣೆ ಆಗದೇ ತೀರ್ಪು ಕೊಟ್ಟರು. ಇದು ವಿಚಿತ್ರವಾಗಿದೆ. ಹೈಕೋರ್ಟ್‌ಗೆ ಮೇಲ್ಮನವಿ ಹಾಕಿದ್ದೇನೆ. ನನಗೆ ಕೋರ್ಟ್ ಮೇಲೆ ನಂಬಿಕೆ ಇದೆ. ಏಪ್ರಿಲ್ 12ರ ಬಳಿಕ ಜಿಲ್ಲಾ ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನಲ್ಲಿ ಸಾಕಷ್ಟು ಹಣವಿಲ್ಲ.. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ: ಕೇಂದ್ರ ಹಣಕಾಸು ಸಚಿವೆ