ಸೌತ್ ನಟಿ ಸಮಂತಾ(Samantha) ವೃತ್ತಿರಂಗದಲ್ಲಿ ಅಗ್ರಸ್ಥಾನದಲ್ಲಿದ್ದರು. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನ ಕಂಡಿರುವ ಸಮಂತಾ ಇದೀಗ ಮೈಯೋಸಿಟೀಸ್ (Myosities) ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಈ ನಡುವೆ ಸಮಂತಾ ಹೆಸರನ್ನ ಕೆಡಿಸಲು ಹುನ್ನಾರ ನಡೆಯುತ್ತಿದೆ. ಯಾರು ರೀತಿ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ: ಆಗ ಭಾಯ್, ಈಗ ಪತಿ: ಟ್ರೋಲ್ ಆಯ್ತು ನಟಿ ಸ್ವರಾ ಭಾಸ್ಕರ್ ಪೋಸ್ಟ್
ನಾಗಚೈತನ್ಯ (Nagachaitanya) ಜೊತೆಗಿನ ಡಿವೋರ್ಸ್ ನಂತರ ವೈಯಕ್ತಿಕವಾಗಿ ಸಾಕಷ್ಟು ನೋವು ಕಂಡಿರುವ ನಟಿ ಕಳೆದ ವರ್ಷ `ಪುಷ್ಪ’ (Pushpa) ಸಿನಿಮಾದ ಹಾಡಿನಲ್ಲಿ ಹೆಜ್ಜೆ ಹಾಕಿದ್ದರು. ಈ ಸಾಂಗ್ ಮತ್ತು ಸಿನಿಮಾ ಎರಡು ಸೂಪರ್ ಹಿಟ್ ಆಗಿದ್ದರು. ಅಲ್ಲು ಅರ್ಜುನ್ (Allu Arjun) ಜೊತೆ ಸ್ಯಾಮ್ ಸೊಂಟ ಬಳುಕಿಸಿದ್ದೇ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.
ಸದ್ಯ ಬಾಲಿವುಡ್ನ (Bollywood) ಸಿಟಾಡೆಲ್ (Citadel) ಸಿನಿಮಾದಲ್ಲಿ ಸಮಂತಾ ಬ್ಯುಸಿಯಿರುವ ಬೆನ್ನಲ್ಲೇ ನಟಿಯ ಬಗ್ಗೆ ಇಲ್ಲ ಸಲ್ಲದ ವಿಚಾರಗಳನ್ನ ಸೃಷ್ಟಿಮಾಡಲಾಗುತ್ತಿದೆ. `ಪುಷ್ಪ 2′ (Pushpa 2) ಸಿನಿಮಾದಲ್ಲಿ ಸಮಂತಾಗೆ ಆಫರ್ ನೀಡಿದ್ದರು. ಅದರೆ ಅವರು ರಿಜೆಕ್ಟ್ ಮಾಡಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಬಳಿಕ ವಿಜಯ್ ದೇವರಕೊಂಡ (Vijay Devarakonda) ನಟನೆಯ ಖುಷಿ ಚಿತ್ರಕ್ಕೆ ಸ್ಯಾಮ್ ಶೂಟಿಂಗ್ಗೆ ಡೇಟ್ ಕೊಡುತ್ತಿಲ್ಲ ಎಂದು ಸುದ್ದಿಯಾಗಿತ್ತು. ಈ ಎಲ್ಲಾ ವದಂತಿಗೆ ಸಮಂತಾ ತಂಡ ಸ್ಪಷ್ಟನೆ ನೀಡಿದ್ದಾರೆ.
ಸಮಂತಾಗೆ `ಪುಷ್ಪ 2’ಯಿಂದ ಯಾವುದೇ ಆಫರ್ ಬಂದಿಲ್ಲ. ಯಾರೋ ಸಮಂತಾಗೆ ಆಗದೇ ಇರೋರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದೆಲ್ಲಾ ಸುದ್ದಿ ಶುದ್ಧ ಸುಳ್ಳು ಎಂದು ಸಮಂತಾ ಟೀಂ ಪ್ರತಿಕ್ರಿಯೆ ನೀಡಿದ್ದಾರೆ.