ಆರೋಗ್ಯಕರ ಜೀವನ ಶೈಲಿಯನ್ನು ಕಾಪಾಡಿಕೊಳ್ಳಲು ಪ್ರೋಟೀನ್ ಒಳಗೊಂಡ ಆಹಾರ ಪದಾರ್ಥಗಳು ತುಂಬಾ ಉಪಯುಕ್ತವಾಗುತ್ತವೆ. ಅದೇ ರೀತಿ ನಮ್ಮ ಆರೋಗ್ಯದ ಮೇಲೆ ಕೆಲ ಋಣಾತ್ಮಕ ಅಂಶಗಳು ಕೂಡ ಬಹಳ ಪರಿಣಾಮವನ್ನು ಬೀರುತ್ತವೆ. ನಾವು ಆರೋಗ್ಯವಂತರಾಗಿರಬೇಕೆಂದು ಯೋಚಿಸದೆ ಅದಕ್ಕೆ ಪೂರಕವಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಅವಲಂಬಿಸಬೇಕಾಗುತ್ತದೆ. ಒಂದು ಸಣ್ಣ ತೊಡಕಿನಿಂದ ಅಥವಾ ಒಂದು ಆಹಾರ ಪದಾರ್ಥದಿಂದ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುವ ಸಾಧ್ಯತೆಯೂ ಹೆಚ್ಚಿರುತ್ತದೆ.
ಇದನ್ನ ಹೊರತು ಪಡಿಸಿ ನಮ್ಮ ಅಡುಗೆ ಮನೆಗಳಲ್ಲಿ ಸಾಕಷ್ಟು ಉತ್ತಮ ಆಹಾರ ಪದಾರ್ಥಗಳು ಲಭ್ಯವಿರುತ್ತದೆ. ಅವುಗಳಲ್ಲಿ ಕೆಲವು ಫೈಬರ್ ಮತ್ತು ಸೂಕ್ಷ್ಮ ಪೋಷಕಾಂಶಗಳಿಂದಲೂ ಸಮೃದ್ಧವಾಗಿರುತ್ತವೆ. ಆ ಆರೋಗ್ಯಯುತ ಆಹಾರ ಪದಾರ್ಥಗಳಾವುವು? ಮತ್ತು ಅವನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ….
Advertisement
Advertisement
ಪಾಲಾಕ್ ಸೊಪ್ಪು: ಆರೋಗ್ಯಕರ ಆಹಾರ ಪದಾರ್ಥದ ಪಟ್ಟಿಯಲ್ಲಿ ಪಾಲಕ್ ಸೊಪ್ಪು ಅಗ್ರಸ್ಥಾನದಲ್ಲಿದೆ. ಈ ಪದಾರ್ಥ ಫೈಬರ್ ನಲ್ಲಿ ಮಾತ್ರವಲ್ಲ, ಬೀಟಾ ಕ್ಯಾರೋಟಿನ್, ವಿಟಮಿನ್ ಕೆ, ಮ್ಯಾಂಗನೀಸ್, ಫೋಲೇಟ್, ಕಬ್ಬಿಣ, ಕಾಪರ್, ಕ್ಯಾಲ್ಸಿಯಂ, ಪೋಟ್ಯಾಷಿಯಮ್ ಮತ್ತು ವಿಟಮಿನ್ ಸಿಯಂತಹ ಸೂಕ್ಷ್ಮ ಪೋಷಕಾಂಶಗಳನ್ನೂ ಸಹ ಹೊಂದಿದೆ. ಇವೆಲ್ಲವೂ ದೇಹದ ಚಯಾಪಚಯ ಪ್ರಕ್ರಿಯೆ, ಪ್ರತಿರಕ್ಷಣಾ ವ್ಯವಸ್ಥೆ ಮತ್ತು ತೂಕ ನಿರ್ವಹಣೆ ಮಾಡುವಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಜೊತೆಗೆ ಪಾಲಾಕ್ ಸೊಪ್ಪನ್ನು ನಿಂಬೆ ಅಥವಾ ಕಿತ್ತಳೆ ರಸದ ಜೊತೆಗೆ ಸೇವಿಸಿದರೆ ವಿಟಮಿನ್ ಸಿಯ ಅನುಕೂಲವನ್ನೂ ಪಡೆಯಬಹುದು.
Advertisement
ಸೇಬು: ಸೇಬು ಹಣ್ಣಿನಲ್ಲಿ ಫೈಬರ್, ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್‍ಗಳು ಅಧಿಕವಾಗಿದ್ದು, ಇದು ಅತ್ಯಂತ ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ದಿನಕ್ಕೆ ಒಂದು ಸೇಬು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಸುಧಾರಿಸುವ ಪಾತ್ರವನ್ನು ವಹಿಸುತ್ತದೆ. ಸೇಬುಗಳನ್ನು ಸೇವಿಸಲು ಉತ್ತಮ ಸಮಯವೆಂದರೆ ಲಘು ಆಹಾರ, ಉಪಾಹಾರದ ನಂತರ ಮತ್ತು ಊಟದ ಮೊದಲು.
Advertisement
ಬೆಳ್ಳುಳ್ಳಿ: ಬೆಳ್ಳುಳ್ಳಿ ಅನೇಕ ನಿತ್ಯ ಜೀವನದಲ್ಲಿ ಉತ್ತಮವಾದ ಆರೋಗ್ಯ ಕಾಪಾಡುವ ಮೂಲಕ ನಾವು ಅದರಿಂದ ಹೆಚ್ಚಿನ ಪ್ರಮಾಣದ ಸೂಕ್ಷ್ಮ ಪೋಷಕಾಂಶಗಳನ್ನು ಕಾಣಬಹುದು. ಬೆಳ್ಳುಳ್ಳಿಯಲ್ಲಿ ಕಂಡುಬರುವ ಆ್ಯಂಟಿಆಕ್ಸಿಡೆಂಟ್ ಆಲಿಸಿನ್ ಉರಿಯೂತವನ್ನು ಕಡಿಮೆ ಮಾಡುವುದಲ್ಲದೆ ಹೃದಯ ಕಾಯಿಲೆ ಮತ್ತು ಕ್ಯಾನ್ಸರ್ ಮುಂತಾದ ಪರಿಸ್ಥಿತಿಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಅರಿಶಿಣ: ಅರಿಶಿಣ ಮತ್ತೊಂದು ಆರೋಗ್ಯಕರ ಆಹಾರ ಪದಾರ್ಥವಾಗಿದ್ದು, ಇದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅರಿಶಿಣದಲ್ಲಿ ಆ್ಯಂಟಿಆಕ್ಸಿಡೆಂಟ್‍ನ ಹೆಸರಿನ ಕರ್ಕ್ಯುಮಿನ್ ಕಂಡುಬರುತ್ತದೆ. ಇದರಿಂದ ಕ್ಯಾನ್ಸರ್, ಹೃದ್ರೋಗ, ಸಂಧಿವಾತ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ.
ಆವಕಾಡೊ: ಕೀಟೋ ಡಯಟ್‍ಗೋಸ್ಕರ ಜನರು ವ್ಯಾಪಕವಾಗಿ ಸೇವಿಸುವ ಆವಕಾಡೊವನ್ನು ದೇಹಕ್ಕೆ ಉತ್ತಮ ಕೊಬ್ಬಿನಿಂದ ತುಂಬಿದೆ. ಈ ಹಣ್ಣಿನಲ್ಲಿರುವ ಕಡಿಮೆ ಸಕ್ಕರೆ ಅಂಶವು ಪ್ರಕೃತಿಯಲ್ಲಿ ವಿಶಿಷ್ಟತೆಯನ್ನುಂಟು ಮಾಡುತ್ತದೆ. ಇದನ್ನು ಫ್ರೂಟ್ ಸಲಾಡ್‍ಗಳು ಅಥವಾ ಇತರ ಸುಲಭ ಆಹಾರ ಪದಾರ್ಥಗಳಲ್ಲಿ ಬಳಸಬಹುದು.
ಚಿಕನ್ ಬ್ರೆಸ್ಟ್: ಮೂಳೆಗಳಿಲ್ಲದ ಚಿಕನ್ ಎದೆಯು 31 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದು ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಪ್ರಮುಖವಾದ ಪದಾರ್ಥಗಳಲ್ಲಿ ಒಂದಾಗಿದೆ. ಇದರಿಂದ ದೊರೆಯುವ ಪೋಷಕಾಂಶ ಉತ್ತಮ ಗುಣಮಟ್ಟದ್ದಾಗಿದೆ. ಇದು ನಮ್ಮ ದೈನಂದಿನ ಪೋಷಕಾಂಶದ ಶೇ. 50 ರಷ್ಟು ಪೂರೈಸಲು ಸಹಾಯ ಮಾಡುತ್ತದೆ. ಬೇಯಿಸಿದ ಅಥವಾ ಹುರಿದ ಚಿಕನ್ ಬ್ರೆಸ್ಟ್ ಊಟದ ಒಂದು ಭಾಗವಾಗಿ ಸೇವಿಸಬಹುದು. ಜೊತೆಗೆ ಸಣ್ಣ ಸಣ್ಣ ಪೀಸ್ ರೂಪದಲ್ಲಿ ಸೂಪ್ ಮತ್ತು ಸಲಾಡ್‍ಗಳ ರೂಪದಲ್ಲಿಯೂ ಸೇವಿಸಬಹುದು.
ಮೊಟ್ಟೆ: ಮೊಟ್ಟೆ ನಮ್ಮ ನಿತ್ಯ ಆಹಾರ ಪದ್ಧತಿಯಲ್ಲಿ ದೇಹಕ್ಕೆ ಉತ್ತಮ ಪೋಷಕಾಂಶವನ್ನು ಒದಗಿಸುವ ಒಂದು ಪದಾರ್ಥವಾಗಿದೆ. ಇದು ನಮ್ಮ ದೇಹಕ್ಕೆ ಬೇಕಾದ ಎಲ್ಲ ಅಗತ್ಯ ಅಮೈನೋ ಆಮ್ಲಗಳು, ಜೀವಸತ್ವಗಳು ಮತ್ತು ಮಿನರಲ್‍ಗಳನ್ನು ಪರಿಪೂರ್ಣ ಪ್ರಮಾಣದಲ್ಲಿ ಒದಗಿಸುತ್ತದೆ. ಮೊಟ್ಟೆಯ ಹಳದಿ ಲೊಳೆಯಲ್ಲಿರುವ ಕೊಲೆಸ್ಟ್ರಾಲ್ ರಕ್ತದ ಕೊಲೆಸ್ಟ್ರಾಲ್ ಹೆಚ್ಚಿಸಲು ಕಾರಣವಲ್ಲ ಎಂದು ಇತ್ತೀಚಿನ ಅಧ್ಯಯನಗಳು ತೋರಿಸಿವೆ. ಆದ್ದರಿಂದ ಸಂಪೂರ್ಣ ಮೊಟ್ಟೆಯನ್ನು ಸೇವಿಸುವುದು ದೇಹಕ್ಕೆ ಸುರಕ್ಷಿತವಾಗಿದೆ. ಬೆಳಗಿನ ಉಪಹಾರದ ಜೊತೆ ಮೊಟ್ಟೆಯನ್ನು ಸೇವಿಸುವುದು ಉತ್ತಮ.
ಕ್ಯಾರೆಟ್: ಕ್ಯಾರೆಟ್ ಸಲಾಡ್‍ಗಳಲ್ಲಿ ಮತ್ತು ಊಟದಲ್ಲೂ ಸಾಮಾನ್ಯ ಪದಾರ್ಥವಾಗಿದೆ. ಇದು ಹೆಚ್ಚು ರುಚಿಕರ ಮಾತ್ರವಲ್ಲ, ವಿಟಮಿನ್ ಎಯ ಬೀಟಾ ಕ್ಯಾರೋಟಿನ್ ಅನ್ನು ಒಳಗೊಂಡಿದೆ. ಅಲ್ಲದೆ ಇದು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದ್ದು ಇದು ಅತ್ಯಂತ ಆರೋಗ್ಯಕರವಾಗಿದೆ. ಕ್ಯಾರೆಟ್‍ನ್ನು ಹಸಿಯಾಗಿ ಅಥವಾ ಅರ್ಧ ಬೇಯಿಸಿ ತಿನ್ನಲು ಯೋಗ್ಯವಾಗಿರುತ್ತದೆ.
ಕೋಸುಗಡ್ಡೆ: ಹಸಿಯಾಗಿ ಮತ್ತು ಬೇಯಿಸಿದ ಎರಡೂ ಶೈಲಿಯಲ್ಲೂ ಕೋಸುಗಡ್ಡೆ ಹೆಚ್ಚು ರುಚಿಯಾಗಿರುತ್ತದೆ. ಇದು ಫೈಬರ್, ವಿಟಮಿನ್ ಕೆ ಮತ್ತು ವಿಟಮಿನ್ ಸಿಯ ಅತ್ಯುತ್ತಮ ಮೂಲವಾಗಿದೆ ಮತ್ತು ಇತರ ತರಕಾರಿಗಳಿಗೆ ಹೋಲಿಸಿದರೆ ಯೋಗ್ಯ ಪ್ರಮಾಣದ ಪ್ರೋಟೀನ್ ಅನ್ನು ಹೊಂದಿದೆ.
ನೆಲ್ಲಿಕಾಯಿ: ನೆಲ್ಲಿಕಾಯಿ ಸೇವನೆಯಿಂದ ಉತ್ತಮ ಆರೋಗ್ಯ ಮಾತ್ರವಲ್ಲದೆ, ದೇಹಕ್ಕೆ ಉತ್ತಮವಾದ ಪೋಷಕಾಂಶವನ್ನು ಒದಗಿಸುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ನೆಲ್ಲಿಕಾಯಿ ಎಲ್ಲಾ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಇರುವ ವಿಟಮಿನ್ ‘ಸಿ’ಗಿಂತ ಅತಿ ಹೆಚ್ಚು ಪ್ರಮಾಣದ ವಿಟಮಿನ್ ‘ಸಿ’ಯನ್ನು ಹೊಂದಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬೆಳಗಿನ ಜಾವ ನೆಲ್ಲಿಕಾಯಿಯನ್ನು ಸೇವಿಸುವುದು ಉತ್ತಮ.
ಮೊಸರು: ಹಾಲಿನಂತೆ ಮೊಸರು ಕೂಡ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಮೊಸರು ಹಾಲಿಗೆ ಹೋಲಿಸಿದರೆ ಸುಲಭವಾಗಿ ದೇಹದಲ್ಲಿ ಜೀರ್ಣವಾಗುತ್ತದೆ. ಮೊಸರಿನಲ್ಲಿರುವ ಪ್ರೋಬಯಾಟಿಕ್‍ಗಳು ದೇಹದ ಜೀರ್ಣಕ್ರಿಯೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆಯುರ್ವೇದದ ಪ್ರಕಾರ ಮೊಸರನ್ನು ರಾತ್ರಿಯ ಸಮಯದಲ್ಲಿ ಸೇವಿಸುವುದು ಒಳ್ಳೆಯದಲ್ಲ, ಬದಲಿಗೆ ರಾತ್ರಿ ಸಮಯವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಸೇವಿಸಬಹುದು.
ನಟ್ಸ್ (ಬೀಜಗಳು): ನಟ್ಸ್ ಗಳು ಹಲವಾರು ಸೂಕ್ಷ್ಮ ಪೋಷಕಾಂಶಗಳಿಂದ ಕೂಡಿರುತ್ತವೆ. ಹಗಲಿನಲ್ಲಿ ಸಣ್ಣ ಹಸಿವಿನ ನೋವನ್ನು ನಿಗ್ರಹಿಸಲು ನೀವು ಬಾದಾಮಿ, ವಾಲ್ ನಟ್ಸ್, ಪಿಸ್ತಾ, ಗೋಡಂಬಿ ಮುಂತಾದ ನಟ್ಸ್ ಗಳನ್ನು ಸೇವಿಸಹುದು.
ಫ್ಲಾಕ್ಸ್ ಸೀಡ್ಸ್ (ಅಗಸೆಬೀಜ): ಫ್ಲಾಕ್ಸ್ ಸೀಡ್ಸ್ ಮಾನವನ ದೇಹಕ್ಕೆ ಅತ್ಯಂತ ಆರೋಗ್ಯಕರವಾಗಿರುವ ಪದಾರ್ಥ. ಒಮೆಗಾ-3 ಕೊಬ್ಬಿನ ಆಮ್ಲಗಳನ್ನು ಹೆಚ್ಚಾಗಿ ಒಳಗೊಂಡಿದೆ. ಇದು ಹೃದಯಕ್ಕೆ ಅತ್ಯಂತ ಪೋಷಕಾಂಶವನ್ನು ಒದಗಿಸುವ ಆಹಾರದಲ್ಲಿ ಒಂದಾಗಿದೆ. ಹುರಿದ ಫ್ಲಾಕ್‍ಸೀಡ್‍ನ ಪುಡಿ ರುಚಿಯಲ್ಲಿ ಉತ್ತಮವಾಗಿರುತ್ತದೆ. ಆದನ್ನು ದಾಲ್, ಸೂಪ್, ಸಲಾಡ್ ಮತ್ತು ಮಜ್ಜಿಗೆ ಜೊತೆ ಸೇರಿಸಿ ಸವಿಯಬಹುದು.
ತೆಂಗಿನ ಎಣ್ಣೆ: ತೆಂಗಿನ ಎಣ್ಣೆಯಲ್ಲಿ ಆರೋಗ್ಯಕರ ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿದೆ. ತೆಂಗಿನ ಎಣ್ಣೆಯಲ್ಲಿ ಕೊಬ್ಬು ಕರಗಿಸುವ ಗುಣವಿದೆ ಎಂದು ಅಧ್ಯಯನಗಳು ತೋರಿಸಿವೆ. ಜೊತೆಗೆ ರಕ್ತದಲ್ಲಿ ಎಚ್‍ಡಿಎಲ್ ಮಟ್ಟವನ್ನು ಹೆಚ್ಚಿಸಲು ಸಹ ಇದು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆ ಚರ್ಮದ ಆರೋಗ್ಯಕ್ಕೂ ಸಹಕಾರಿಯಾಗಿದೆ.
ಡೇಟ್ಸ್ (ಕರ್ಜೂರ): ಮಾನವನ ತ್ವರಿತ ಶಕ್ತಿಗಾಗಿ ಡೇಟ್ಸ್ ಅತ್ಯುತ್ತಮ ಆಹಾರವಾಗಿದೆ. ಈ ಸಣ್ಣ ನೈಸರ್ಗಿಕ ಪದಾರ್ಥ ಕಬ್ಬಿಣದ ಅಂಶದಿಂದ ಕೂಡಿದೆ. ಶುಗರ್ ಲೆವೆಲ್ ಏರಿಳಿತವನ್ನು ಸರಿಪಡಿಸಲು ಈ ಪದಾರ್ಥವನ್ನು ಸೇವಿಸಲು ಹೆಚ್ಚಾಗಿ ಎಲ್ಲರೂ ಸಲಹೆ ನೀಡುತ್ತಾರೆ. ಡೇಟ್ಸ್ ನ್ನು ವರ್ಕ್ಔಟ್ ಪೂರ್ವ ಆಹಾರವಾಗಿಯೂ ಸೇವಿಸಬಹುದು.
ಕ್ವಿನೋವಾ (ನವಣೆ ಅಕ್ಕಿ): ಕ್ವಿನೋವಾ ಅಂಟು ರಹಿತವಾದ ಒಂದು ಆರೋಗ್ಯಕರ ಆಹಾರ ಪದಾರ್ಥ. ಹೆಚ್ಚಿನ ಪ್ರೋಟೀನ್ ಮತ್ತು ಹೆಚ್ಚಿನ ಫೈಬರ್ ಧಾನ್ಯವನ್ನು ನಮ್ಮ ದೈನಂದಿನ ಪೋಷಕಾಂಶ ಅಗತ್ಯತೆಗಳನ್ನು ಪೂರೈಸಲು ದಿನದಲ್ಲಿ ಯಾವುದೇ ಸಮಯದಲ್ಲಿ ಇದನ್ನು ತಿನ್ನಬಹುದು. ಕ್ವಿನೋವಾ ಗಂಜಿ, ಪಲಾವ್, ಸಲಾಡ್ ಮಾಡಿಕೊಂಡು ಸೇವಿಸಬಹುದು. ಜೊತೆಗೆ ಇದು ಅತ್ಯಂತ ರುಚಿಕರ ಮತ್ತು ಆರೋಗ್ಯಕರ.
ನಮ್ಮ ಆರೋಗ್ಯ ಮತ್ತು ಫಿಟ್ನೆಸ್ ಮಟ್ಟವನ್ನು ಕಾಪಾಡಿಕೊಳ್ಳಲು ಬೇಡದಿರುವಆಹಾರ ಪದಾರ್ಥಗಳನ್ನು ನಿತ್ಯ ಜೀವದಿಂದ ಹೊರತೆಗೆಯಿರಿ. ಈ ಆರೋಗ್ಯಕರ ಆಹಾರಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಿ.