ಹಾವೇರಿ: ಕೆಲವೊಂದು ಕೋಮುವಾದಿ ಸಂಘಟನೆಗಳು ನಿರಂತರವಾಗಿ ಸಮಾಜ ಒಡೆಯುವ ಕೆಲಸ ಮಾಡುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಕೋಮು ಸಾಮರಸ್ಯದ ನಾಡಿನಿಂದ ಬಂದಿದ್ದಾರೆ. ಕೂಡಲೇ ಸಿಎಂ ಅವರು ಸಮಾಜ ಒಡೆಯುವ ಕೆಲಸ ಮಾಡುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆಗ್ರಹಿಸಿದರು.
ಹಾವೇರಿಯಲ್ಲಿ ಕೋಮು ಗಲಭೆ ಕುರಿತು ಮಾತನಾಡಿದ ಅವರು, ಸಮಾಜ ಒಡೆಯುವ ಸಂಘಟನೆಗಳನ್ನು ನಿಷೇಧ ಮಾಡಬೇಕು. ಅಂತಹ ಸಂಘಟನೆಗಳ ವ್ಯಕ್ತಿಗಳನ್ನು ಬಂಧಿಸಬೇಕು. ಸರ್ಕಾರ RSS ಹಿಡಿತದಲ್ಲಿದೆ. ಪ್ರತಿದಿನ ಗಲಭೆ ಮಾಡುವ ಕೆಲಸವನ್ನು ಕೆಲವರು ನಿರಂತರವಾಗಿ ಮಾಡುತ್ತಿದ್ದಾರೆ. ಈ ಸರ್ಕಾರ ಜನರ ದಾರಿ ತಪ್ಪಿಸಲು ಇಂತಹ ಕೆಲಸ ಮಾಡುತ್ತಿದೆ. ಅರ್ಕಾವತಿ ಕುರಿತು ಕಾಂಗ್ರೆಸ್ ವಿರುದ್ಧ ಯಾವುದೇ ತನಿಖೆಗೂ ಸಿದ್ಧರಿದ್ದೇವೆ. ಮೊದಲು 40% ಕಮೀಷನ್ ನಿಲ್ಲಿಸಿ. ಈಗ ನಿಮಗೆ ಅರ್ಕಾವತಿ ನೆನಪಿಗೆ ಬಂದಿತಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ವರ ಧೋತಿ-ಕುರ್ತಾ ಬದಲು ಶೇರ್ವಾನಿ ಧರಿಸಿದ್ದಕ್ಕೆ ಮದುವೆ ಮನೆಯಾಯ್ತು ರಣರಂಗ
Advertisement
Advertisement
ಪ್ರತಿದಿನ ಭ್ರಷ್ಟಾಚಾರ, ಮಂತ್ರಿಮಂಡಲ ಬಿಟ್ಟರೆ ನಿಮಗೆ ಬೇರೆ ಕೆಲಸವೇ ಇಲ್ಲದಂತೆ ಆಗಿದೆ. ಬಿಜೆಪಿ ಸರ್ಕಾರ ಲೂಟಿಕೋರರ ಸರ್ಕಾರ. ಪ್ರತಿದಿನ ರಾಜಕಾರಣಿಗಳು, ಅಧಿಕಾರಿಗಳ ಭ್ರಷ್ಟಾಚಾರ ಬರ್ತಿದೆ. ದೇಶದಲ್ಲಿ ತಲೆತಗ್ಗಿಸುವ ಕೆಲಸ ಆಗುತ್ತಿದೆ. ಕರ್ನಾಟಕ ಭ್ರಷ್ಟಾಚಾರದ ರಾಜಧಾನಿ ಆಗಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಈ ಸರ್ಕಾರ ಕಳೆದುಕೊಂಡಿದೆ ಎಂದು ಆರೋಪಿಸಿದರು.
Advertisement
ಸಿಎಂ ಸ್ಥಾನಕ್ಕೆ 2,500 ಕೋಟಿ ಕೊಡಬೇಕು ಎಂದು ಬಿಜೆಪಿ ಶಾಸಕ ಯತ್ನಾಳ್ ಹೇಳುತ್ತಿದ್ದಾರೆ. ಭ್ರಷ್ಟಾಚಾರದ ಮೂಲಕ ಉದಯಿಸಿದ ಈ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿದೆ. ಜನರು ಬಿಜೆಪಿ ಸರ್ಕಾರದ ಬಗ್ಗೆ ನೊಂದಿದ್ದಾರೆ. ಈಗಾಗಲೇ ಬಿಜೆಪಿ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಬಿಜೆಪಿಯ 40% ಕಮೀಷನ್ ಸರ್ಕಾರದ ವಿರುದ್ಧ ಜನಜಾಗೃತಿ ಮಾಡುವ ಕೆಲಸ ನಾವು ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಗಲಭೆ ಸೃಷ್ಟಿಸಲು ಪೆಟ್ರೋಲ್ ಬಾಂಬ್ ಸಂಗ್ರಹಿಸಿದ್ದ ಮೂವರು ಅರೆಸ್ಟ್
Advertisement
ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡುತ್ತೇವೆ. ಭ್ರಷ್ಟ ಸರ್ಕಾರವನ್ನು ತೆಗೆಯುವುದು ನಮ್ಮ ಉದ್ದೇಶವಾಗಿದೆ. ಯಾರು ಸಿಎಂ ಆಗುತ್ತಾರೆ ಎಂಬುದು ಮುಂದಿನ ವಿಚಾರ. ಶಾಸಕರು ಹಾಗೂ ಹೈಕಮಾಂಡ್ ಸೇರಿಕೊಂಡು ಯಾರು ಸಿಎಂ ಆಗಬೇಕು ಎಂಬುದನ್ನು ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.