BidarDistrictsLatestMain Post

ಅನಾವರಣವಾಗಿರುವ ಪುತ್ಥಳಿಗಳಿಗೆ ಕೆಲವರು ಅವಮಾನ ಮಾಡುತ್ತಿದ್ದಾರೆ: ಮುರುಘಾ ಶ್ರೀ

ಬೀದರ್: ಅನಾವರಣವಾಗಿರುವ ಪುತ್ಥಳಿಗಳಿಗೆ ಕೆಲವರು ಅವಮಾನ ಮಾಡುತ್ತಿದ್ದಾರೆ ಎಂದು ಪೂಜ್ಯ ಶ್ರೀ ಡಾ. ಶಿವಮೂರ್ತಿ ಮುರುಘಾ ಶರಣರು ಬೇಸರ ವ್ಯಕ್ತಪಡಿಸಿದ್ದಾರೆ.

ಕಿಡಿಗೇಡಿಗಳಿಂದ ಸಂಗೊಳ್ಳಿ ರಾಯಣ್ಣ, ಬಸವೇಶ್ವರ ಹಾಗೂ ಶಿವಾಜಿ ಮೂರ್ತಿಗೆ ಅವಮಾನ ವಿಚಾರವಾಗಿ ಬೀದರ್ ನಲ್ಲಿ ಬಸವ ತತ್ವ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು,  ಅನಾವರಣವಾಗಿರುವ ಪುತ್ಥಳಿಗಳಿಗೆ ಕೆಲವರು ಅವಮಾನ ಮಾಡುತ್ತಿದ್ದಾರೆ. ಒಂದು ಕಡೆ ಅನಾವರಣ ಮೊತ್ತೊಂದು ಕಡೆ ಅವಮಾನ ಎಂದರು. ಇದನ್ನೂ ಓದಿ: ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಜಾರಿಗೆ ತರಲಿ: ಸಿ.ಎಂ ಇಬ್ರಾಹಿಂ

ಸತ್ಪುರುಷರ ಮೂರ್ತಿಗಳಿಗೆ ಅವಮಾನ ಮಾಡಬೇಡಿ ಎಂದು ನಾನು ಕೇಳಿಕೊಳ್ಳುತ್ತೆನೆ. ಅವಮಾನ ಮಾಡೋದು ಅದು ಕಿಡಿಗೇಡಿತನ. ಭಾವನೆಗಳ ಜೊತೆಗೆ ಭಾವನಾತ್ಮಕ ಸಂಗತಿಗಳ ಜೊತೆ ನಾವು ಚೆಲ್ಲಾಟವಾಡಬಾರದು ಎಂದು ಪುಂಡರಿಗೆ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.

ಶಿವಾಜಿ, ಸಂಗೊಳ್ಳಿ ರಾಯಣ್ಣ ಹಾಗೂ ಬಸವೇಶ್ವರ ಮೂರ್ತಿಗಳಿಗೆ ಅವಮಾನವಾಗಿದೆ. ಮುಂದೆ ಯಾರಿಗೆ ಅವಮಾನ ಆಗುತ್ತೋ ಗೋತ್ತಿಲ್ಲ. ಹೀಗಾಗಿ ಇಂಥಾ ಶಕ್ತಿಗಳಿಗೆ ಕೇಳಿಕೊಳ್ಳುತ್ತೆನೆ ಭಾವನೆಗಳ ಜೊತೆ ಚೆಲ್ಲಾಟ ಆಡಬೇಡಿ. ಹೋರಾಟ ಮಾಡೋಕೆ, ವಿಚಾರಗಳನ್ನು ಮಂಡನೆ ಮಾಡೋಕೆ ಸಂದರ್ಭಗಳು ಇವೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅವಶ್ಯಕತೆ ಏನಿದೆ?: ಎಚ್.ಡಿ ರೇವಣ್ಣ

ಸತ್ಪುರುಷರ ಪುತ್ಥಳಿ ಅವಮಾನ ಮಾಡೋದು ತುಂಬಾ ಸಂಕೀರ್ಣವಾದ ವಿಚಾರ. ತುಂಬಾ ಭಾವೋದ್ರೇಕ ವಿಚಾರವಾಗಿದೆ. ಪ್ರಜ್ಞಾವಂತರು ಯಾರು ಭಾವೋದ್ರೇಕದ ಜೊತೆ ಚೆಲ್ಲಾಟವಾಡಬಾರದು. ಇಂತಹ ಸಮಯದಲ್ಲಿ ಸಾಮಾಜಿಕ ಸಾಮರಸ್ಯ ಕಾಪಾಡಬೇಕು ಎಂದು ನುಡಿದರು.

Leave a Reply

Your email address will not be published.

Back to top button