ಚಿಕ್ಕೋಡಿ: ಅನಾರೋಗ್ಯ ಕಾರಣದಿಂದ ರಜೆಗೆ ಬಂದಿದ್ದ ಯೋಧ ಸಾವನ್ನಪ್ಪಿದ್ದಾರೆ. ಪರಿಣಾಮ ಸರ್ಕಾರಿ ಸಕಲ ಗೌರದೊಂದಿಗೆ ಸಂಜೆ ಅಂತಿಮ ನಮನ ಸಲ್ಲಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದಲ್ಲಿ ನಡೆದಿದೆ.
ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕಲಗೌಡ ಹಡಗಿನಾಳ. ಕಳೆದ ಮಾರ್ಚ 20 ರಂದು ಎರಡು ತಿಂಗಳ ರಜೆಯ ಮೇಲೆ ಸ್ವಗ್ರಾಮ ಬೆಳಗಾವಿ ಗ್ರಾಮಕ್ಕೆ ಬಂದಿದ್ದರು. ಭಾನುವಾರ ರಾತ್ರಿ ಮನೆಯಲ್ಲಿದ್ದ ಕಲಗೌಡರಿಗೆ ರಕ್ತದೊತ್ತಡ ಕಡಿಮೆಯಾಗಿದ್ದರಿಂದ ಬೆಳವಿ ಸೇನೆ ಆಸ್ಪತ್ರೆಗೆ ಚಿಕಿತ್ಸೆಗೆಂದು ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಲಗೌಡ ಮೃತಪಟ್ಟಿದ್ದಾರೆ. ಇದನ್ನೂ ಓದಿ: ತಮ್ಮ ವೇಯ್ಟ್ ಲಾಸ್ ಜರ್ನಿ ಬಗ್ಗೆ ಹೇಳಿದ ಕಾಶ್ಮೀರಿ ಪಂಡಿತಾ
Advertisement
Advertisement
ಅಣ್ಣ-ತಮ್ಮ ಇಬ್ಬರು ಯೋಧರು
ರೈತ ಕುಟುಂಬದಿಂದ ಬೆಳೆದ ಯೋಧ ಕಲಗೌಡ ಭೀಮಪ್ಪ ಹಡಗಿನಾಳ ಕಳೆದ(2014) ಎಂಟು ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರಿ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹಿರಿಯ ಸಹೋದರ ಮಲ್ಲಪ್ಪ ಕೂಡ ಭಾರತೀಯ ಸೇನೆಯ ಆಸ್ಸಾಂನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಕಲಗೌಡ ತಂದೆ, ತಾಯಿ, ಪತ್ನಿಯನ್ನು ಅಗಲಿದ್ದಾರೆ.
Advertisement
ಬೆಳವಿ ಗ್ರಾಮ ಪಂಚಾಯತಿ ಆವರಣದಲ್ಲಿ ವೀರಯೋಧನ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಅನುಕೂಲ ಮಾಡಿದ್ದರಿಂದ ಸಾರ್ವಜನಿಕರು ದರ್ಶನ ಮಾಡಿ ಅಂತಿಮ ನಮನ ಸಲ್ಲಿಸಿದರು.
Advertisement
ಪುಷ್ಪ ನಮನ ಸಲ್ಲಿಸಿದ ಗಣ್ಯರು
ಅಲಂಕೃತಗೊಂಡ ವಾಹನದಲ್ಲಿ ಯೋಧ ಕಲಗೌಡ ಪಾರ್ಥಿವ ಶರೀರದ ಮೆರವಣಿಗೆ ನಡೆಸಿದರು. ಕಲಗೌಡ ‘ಅಮರ್ ರಹೇ’ ಎಂಬ ಘೋಷಣೆಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಗ್ರಾಮ ಪಂಚಾಯತಿ ಚೇರಮನ್ ಜಯಶ್ರೀ ಸತ್ಯಾಯಿಗೋಳ ಹಿರಿಯ ಸದಸ್ಯರಾದ ರಮೇಶ್ ಕುಲಕರ್ಣಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಸತ್ಯಪ್ಪ ನಾಯಿಕ, ಪಿಡಿಓ ಶೋಭಾ, ತಳವಾರ ಗ್ರಾಮ ಲೆಕ್ಕಾಧಿಕಾರಿ ಶಾನೂರ ಮುಲ್ತಾನಿ, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹಾದೇವ ಬನ್ನಕಗೋಳ ಗ್ರಾಮದ ಪರವಾಗಿ ಪುಷ್ಪ ನಮನ ಸಲ್ಲಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಇಂದು 53 ಸೋಂಕು – ಶೂನ್ಯ ಮರಣ ಪ್ರಮಾ
ಯೋಧನ ಸ್ವತೋಟದಲ್ಲಿ ಅಂತಿಮ ಗೌರವ ನಮನ ನಡೆಯಿತು. ಗ್ರಾಮದ ಜನರು, ಹಾಲಿ, ಮಾಜಿ ಸೈನಿಕರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸೈನಿಕರು ಪಾಲ್ಗೊಂಡಿದ್ದರು.