ಮಂಗಳೂರು: ತೈಲ ಬೆಲೆ ಏರಿಕೆಯಾಗಿದಕ್ಕೆ ಕಡಿಮೆ ಖರ್ಚಿನಲ್ಲಿ ಓಡೋ ಸೋಲಾರ್ ವಾಹನವನ್ನು ಆಳ್ವಾಸ್ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಭೈರೇಗೌಡ ಆವಿಷ್ಕರಿಸಿ ಪಬ್ಲಿಕ್ ಹೀರೋ ಆಗಿದ್ದಾರೆ.
ತುಮಕೂರಿನ ದೊಡ್ಡಮಸ್ಕಲ್ ನಿವಾಸಿಯಾಗಿರೋ ಭೈರೇಗೌಡ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮುಗಿಸಿದ್ದಾರೆ. ಪ್ರಾಜೆಕ್ಟ್ ವರ್ಕ್‍ನಿಂದ ದೇಶಕ್ಕೇನಾದರೂ ಕೊಡುಗೆ ನೀಡಬೇಕೆನ್ನುವ ಆಲೋಚನೆಯಿಂದ ಸೌರಶಕ್ತಿ ಚಾಲಿತ ವಾಹನ ನಿರ್ಮಿಸಿದ್ದಾರೆ. `ಗೋ ಗ್ರೀನ್-ಗ್ಲೋ ಗ್ರೀನ್ ಸೆಟ್ 3′ ಎನ್ನುವ ಸೋಲಾರ್ ಇಲೆಕ್ಟ್ರಿಕ್ ತ್ರಿವೀಲರ್ ವಾಹನವನ್ನು ಆವಿಷ್ಕರಿಸಿದ್ದಾರೆ. ಈ ಹೊಸ ಪ್ರಯತ್ನಕ್ಕೆ ಭೈರೇಗೌಡರಿಗೆ ಸಹಪಾಠಿಗಳಾದ ದರ್ಶನ್, ರೋಹನ್, ಶರತ್ ನಾಯ್ಕ ಕೈ ಜೋಡಿಸಿದ್ದಾರೆ.
Advertisement
Advertisement
ಸಂಪೂರ್ಣ ಅಲ್ಯೂಮಿನಿಯಂ ಅಲಾಯ್ 6063 ಮೆಟಲ್‍ನಲ್ಲಿ ರೆಡಿಯಾಗಿರೋ ವಾಹನದ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ. 48 ವೋಲ್ಟ್ ಸಾಮಥ್ರ್ಯದ ಲಿಥಿಯಂ ಬ್ಯಾಟರಿಯಲ್ಲಿ ವಿದ್ಯುತ್ ಸಂಗ್ರಹವಾಗುತ್ತದೆ. ಚಾಲಕನ ಸುರಕ್ಷತೆಯ ದೃಷ್ಟಿಯಿಂದ ಎರಡು ಚಕ್ರ ವಾಹನದ ಮುಂಭಾಗದಲ್ಲಿದೆ ಹಾಗೂ ಒಂದು ಹಿಂಭಾಗದಲ್ಲಿದ್ದು, ಇಬ್ಬರು ವ್ಯಕ್ತಿಗಳು ಸುಲಭವಾಗಿ ಸಂಚರಿಸಬಹುದು.
Advertisement
Advertisement
ಇನ್ನೂ ಎದುರಿನ ಎರಡೂ ಚಕ್ರಗಳಿಗೆ ಡ್ರಮ್ ಬ್ರೇಕ್ ಹಾಗೂ ಹಿಂದಿನ ಒಂದು ಚಕ್ರಕ್ಕೆ ಡಿಸ್ಕ್ ಬ್ರೇಕ್ ಕೊಡಲಾಗಿದೆ. ಅಲ್ಲದೆ 1,200 ವ್ಯಾಟ್ ಸಾಮರ್ಥ್ಯ ದ ಬಿಎಲ್ ಡಿಸಿ ಹಬ್ ಮೋಟಾರ್ ಅಳವಡಿಸಲಾಗಿದ್ದು, ಒಬ್ಬ ವ್ಯಕ್ತಿ ಚಲಾಯಿಸಿದರೆ 70 ರಿಂದ 80 ಕಿ.ಮೀ. ವರೆಗೂ ಈ ಸೋಲಾರ್ ವಾಹನ ಮೈಲೇಜ್ ಕೊಡುತ್ತದೆ. ಅದೇ ಇಬ್ಬರು ಪ್ರಯಾಣಿಸಿದರೆ 65 ರಿಂದ 70 ಕಿ.ಮೀ. ಮೈಲೇಜ್ ಕೊಡುತ್ತದೆ. ಈ ವಾಹನದ ಗರಿಷ್ಠ ವೇಗ ಸುಮಾರು 45 ಕಿಲೋ ಮೀಟರ್ ಇದೆ.
ವಿದ್ಯಾರ್ಥಿಯ ಈ ಹೊಸ ಆವಿಷ್ಕಾರವನ್ನು ಕಂಡು ಆಳ್ವಾಸ್‍ನ ಅಧ್ಯಾಪಕರು ಹಾಗೂ ಪ್ರಾಂಶುಪಾಲರು ಮೆಚ್ಚುಗೆ ಪಟ್ಟಿದ್ದಾರೆ. ಪರಿಸರ ಸ್ನೇಹಿಯಾಗಿರೋ ಈ ವಾಹನಕ್ಕೆ ಒಂದೂವರೆ ಲಕ್ಷ ಖರ್ಚಾಗಿದ್ದು, ಏಕಕಾಲದಲ್ಲಿ ಹಲವು ವಾಹನಗಳನ್ನು ನಿರ್ಮಿಸಿದರೆ 75 ರಿಂದ 80 ಸಾವಿರ ತಗಲುಬಹುದು ಎಂದು ಅಂದಾಜಿಸಲಾಗಿದೆ. ಸೌರಶಕ್ತಿಯಲ್ಲೇ ಈ ವಾಹನ ಸಂಚರಿಸೋದರಿಂದ ವಾತಾವರಣಕ್ಕೆ ಯಾವುದೇ ಹಾನಿಯಿಲ್ಲ. ಜೊತೆಗೆ ಹಳ್ಳ ದಿಣ್ಣೆಗಳಿರುವ ರಸ್ತೆಯಲ್ಲೂ ಸಲೀಸಾಗಿ ಈ ವಾಹನ ಸಂಚರಿಸುತ್ತದೆ. ಇಂಧನದ ದರ ಏರಿಕೆ ಸಂಕಟದ ನಡುವೆ ಭೈರೇಗೌಡರ ಈ ಆವಿಷ್ಕಾರ ಎಲ್ಲರ ಗಮನ ಸೆಳೆದಿದೆ.
https://www.youtube.com/watch?v=kLkEjTjAYgk
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv