ವಿಜಯಪುರ: ಕೇತುಗ್ರಸ್ಥ ಸೂರ್ಯ ಗ್ರಹಣ ಹಿನ್ನಲೆ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.
ಬ್ರೆಕ್ ಥ್ರೂ ಸೈನ್ಸ್ ಸೊಸೈಟಿ ವತಿಯಿಂದ ಇದನ್ನ ಆಯೋಜನೆ ಮಾಡಲಾಗಿತ್ತು. ದೂರದ ಊರಿಗೆ ತೆರಳುತ್ತಿದ್ದ ನೂರಾರು ಪ್ರಯಾಣಿಕರು ಸನ್ ಫಿಲ್ಟರ್ ಮೂಲಕ ಗ್ರಹಣ ವೀಕ್ಷಣೆ ಮಾಡಿ ಗ್ರಹಣದ ರೋಮಾಂಚಕ ಚಿತ್ರವನ್ನ ಕಣ್ತುಂಬಿಸಿಕೊಂಡು ಸಂತೋಷ ಪಟ್ಟರು.
Advertisement
Advertisement
ಆದರೆ ನಗರದಲ್ಲಿ ಮೋಡ ಕವಿದ ವಾತಾವರಣವಿರುವ ಕಾರಣ ಜನರಿಗೆ ಸೂರ್ಯ ಗ್ರಹಣದ ವೀಕ್ಷಣೆಗೆ ಕೊಂಚ ತೊಂದರೆ ಆಯ್ತು. ಇದೆ ವೇಳೆ ಸಂಸ್ಥೆ ಕಾರ್ಯಕರ್ತರು ಗ್ರಹಣದ ವೇಳೆ ಬಾಳೇಹಣ್ಣು ತಿನ್ನುವ ಮೂಖಾಂತರ ಮೂಢನಂಬಿಕೆ ಹೋಗಲಾಡಿ ಜಾಗೃತಿ ಮೂಡಿಸಿದರು.