ಬೆಂಗಳೂರು: ರಾಜ್ಯಾದ್ಯಂತ ದೀಪಾವಳಿ (Deepavali) ಸಂಭ್ರಮ ಮನೆ ಮಾಡ್ತಿದೆ. ಕೊರೋನಾ (Corona Virus) ಬಳಿಕ ಅದ್ಧೂರಿಯಾಗಿ ಹಬ್ಬ ಆಚರಿಸಲು ಜನ ಸಜ್ಜಾಗಿದೆ. ಆದರೆ ದೀಪಾವಳಿ ಅಮಾವಾಸ್ಯೆಯ ಅಕ್ಟೋಬರ್ 25ರಂದೇ ಸೂರ್ಯ ಗ್ರಹಣ ಸಂಭವಿಸ್ತಿದೆ.
Advertisement
ಮಂಗಳವಾರ ಸಂಜೆ ಭಾಗಶಃ ಸೂರ್ಯಗ್ರಹಣ (Solar Eclipse) ಗೋಚರವಾಗಲಿದೆ. 3 ವರ್ಷಗಳ ಬಳಿಕ ಗೋಚರವಾಗುವ ಈ ಪಾರ್ಶ್ವ ಸೂರ್ಯಗ್ರಹಣದ ಕೌತುಕವನ್ನ ಕಣ್ತುಂಬಿಕೊಳ್ಳಲು ಇಡೀ ದೇಶದ ಜನ ಕಾತುರದಿಂದ ಕಾಯುತ್ತಿದ್ದಾರೆ. ಕಾರ್ತಿಕ ಅಮಾವಾಸೆಯಂದೇ ಸೂರ್ಯಗ್ರಹಣ ಸಂಭವಿಸುತ್ತಿದ್ದು, ಇದರಿಂದ ದೀಪಾವಳಿ ಹಬ್ಬದ ವಿಶೇಷ ದಿನಗಳಲ್ಲಿ ದೇವಸ್ಥಾನಗಳು ಬಾಗಿಲು ಹಾಕಬೇಕಾದ ಪರಿಸ್ಥಿತಿ ಬಂದಿದೆ.
Advertisement
Advertisement
ಬೆಂಗಳೂರಿನ ಪ್ರಮುಖ ದೇವಾಲಯಗಳು ಗ್ರಹಣ ಸಂದರ್ಭದಲ್ಲಿ ಬಂದ್ ಆಗಲಿದ್ದು, ದರ್ಶನದ ಅವಧಿಯಲ್ಲೂ ಬದಲಾವಣೆಯಾಗಲಿದೆ. ಶನೇಶ್ವರ ದೇಗುಲ ಮಾತ್ರ ಗ್ರಹಣದ ಸಂದರ್ಭದಲ್ಲಿ ತೆರೆದಿರಲಿದ್ದು, ನಿರಂತರ ಪೂಜೆ ಪುನಸ್ಕಾರ ನಡೆಯಲಿದೆ. ಬರೋಬ್ಬರಿ 27 ವರ್ಷದ ಬಳಿಕ ಅಂದ್ರೆ 1995ರ ಬಳಿಕ ಮತ್ತೆ ದೀಪಾವಳಿ ಹಬ್ಬದಂದೂ ಸೂರ್ಯನಿಗೆ ಗ್ರಹಣ ಹಿಡಿಯುತ್ತಿದೆ. ಹಬ್ಬದ ಸಂಭ್ರಮದಲ್ಲೇ ಗ್ರಹಣದ ಕಾರ್ಮೋಡ ಆವರಿಸಿರೋದ್ರಿಂದ ಜನರಿಗೂ ಕೊಂಚ ಭಯ. ಶುಭ-ಅಶುಭದ ಲೆಕ್ಕಾಚಾರ ಶುರುವಾಗಿದ್ದು, ಜನ ದೇಗುಲಗಳಲ್ಲಿ ಶಾಂತಿ ಹೋಮಕ್ಕಾಗಿ ಮುಗಿಬಿದ್ದಿದ್ದಾರೆ. ಗ್ರಹಣ ಮೋಕ್ಷವಾದ ಬಳಿಕ ಮಂಗಳವಾರವೇ ಹಲವಾರು ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹೋಮ ಇದ್ರೆ, ಕೆಲವು ದೇಗುಲದಲ್ಲಿ ಬುಧವಾರ ಇರಲಿದೆ. ದೇಗುಲಗಳಲ್ಲಿ ಶಾಂತಿಹೋಮದ ಪೂಜೆಗಳಿಗೆ ಬುಕ್ಕಿಂಗ್ ಜೋರಾಗಿದೆ.
Advertisement
ವೈಜ್ಞಾನಿಕವಾಗಿ ಗ್ರಹಣ ವೀಕ್ಷಣೆಗೂ ಜನ ಕಾಯ್ತಿದ್ದಾರೆ. ಬೆಂಗಳೂರಿನ ನೆಹರು ತಾರಾಲಯದಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. 3 ವರ್ಷಗಳ ಬಳಿಕ ಅಕ್ಟೋಬರ್ 25ರ ಸಂಜೆ ಪಾಶ್ರ್ವ ಸೂರ್ಯಗ್ರಹಣ ಗೋಚರವಾಗ್ತಿದೆ. ದೇಶದ ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ಸೂರ್ಯಗ್ರಹಣ ಉತ್ತಮ ರೀತಿಯಲ್ಲಿ ಗೋಚರಿಸಲಿದ್ರೆ, ಪೂರ್ವ ಭಾಗಗಳಲ್ಲಿ ಸೂರ್ಯಾಸ್ತದ ವೇಳೆ, ಈಶಾನ್ಯ ಭಾಗಗಳಲ್ಲಿ ಸೂರ್ಯಾಸ್ತದ ಬಳಿಕ ಗ್ರಹಣ ಸಂಭವಿಸುತ್ತದೆ. ಇದನ್ನೂ ಓದಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ನಾಣ್ಯದಿಂದ ತುಲಾಭಾರ
ಗ್ರಹಣದ ವೇಳೆ ಸೂರ್ಯಕಿರಣಗಳು ಕಣ್ಣುಗಳಿಗೆ ಅಪಾಯಕಾರಿ ಆಗಿರೋದ್ರಿಂದ ಗ್ರಹಣ ನೋಡಲು ಇಚ್ಛಿಸುವವರು ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂದು ಖಗೋಳ ಶಾಸ್ತ್ರಜ್ಞರು ಸಲಹೆ ನೀಡಿದ್ದಾರೆ. ನೆಹರು ತಾರಾಲಯ ನಗರದ ಮಧ್ಯ ಭಾಗದಲ್ಲಿರುವುದರಿಂದ ಗ್ರಹಣ ವೀಕ್ಷಣೆ ಸ್ವಲ್ಪ ಕಷ್ಟಸಾಧ್ಯ. ಹೀಗಾಗಿ ಯೂಟ್ಯೂಬ್ ಮೂಲಕ ವೀಕ್ಷಣೆ ಮಾಡಬಹುದು. ಬೆಂಗಳೂರು ಹೊರತು ಪಡಿಸಿ ಜಮ್ಮು ಕಾಶ್ಮೀರದಲ್ಲಿ 55%, ಲೇಹ್ ಲಡಾಖ್‍ನಲ್ಲಿ 54%ರಷ್ಟು ಸೂರ್ಯ ಗ್ರಹಣ ಗೋಚರವಾಗಲಿದೆ. ಭಾರತ ಮಾತ್ರ ಅಲ್ಲದೆ, ಯುರೋಪ್, ಉತ್ತರ ಆಫ್ರಿಕಾ, ಮಧ್ಯ ಪ್ರಾಚ್ಯ ಮತ್ತು ಏಷ್ಯಾದ ಇತರ ಭಾಗಗಳಲ್ಲಿ ಸಹ ಗ್ರಹಣ ಗೋಚರಿಸಲಿದೆ. ರಷ್ಯಾದ ಉಗಾರದಲ್ಲಿ ಶೇಕಡಾ 85% ರಷ್ಟು ಅಂದ್ರೆ ಅತಿ ಹೆಚ್ಚು ಪ್ರಮಾಣದಲ್ಲಿ ಸೂರ್ಯ ಗ್ರಹಣ ಗೋಚರವಾಗಲಿದೆ.