ನಟ/ನಿರ್ಮಾಪಕ ಸೊಹೈಲ್ ಖಾನ್ (Sohail Khan) ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. ಇತ್ತೀಚೆಗೆ ಸೊಹೈಲ್ ಖಾನ್ ಮುಂಬೈನ ಬಾಂದ್ರಾದಲ್ಲಿ ಹೆಲ್ಮೆಟ್ (Helmet) ಧರಿಸದೇ ಬೈಕ್ ರೈಡ್ ಮಾಡ್ತಿದ್ದ ವಿಡಿಯೋ ವೈಲರ್ ಆಗಿತ್ತು.
ಸೊಹೈಲ್ ಖಾನ್ ನಡೆಗೆ ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕಿದ್ರು. ದೊಡ್ಡವರಿಗೊಂದು ನ್ಯಾಯ, ಶ್ರೀಸಾಮಾನ್ಯರಿಗೆ ಇನ್ನೊಂದು ನ್ಯಾಯಾನಾ ಅಂತ ಪ್ರಶ್ನೆ ಮಾಡಿದ್ದರು. ಹೀಗಾಗಿ ಸೊಹೈಲ್ ಖಾನ್ ಕ್ಷಮೆ ಕೇಳಿದ್ದಾರೆ.
View this post on Instagram
ಹೆಲ್ಮೆಟ್ ಧರಿಸದೇ ಬೈಕ್ ರೈಡ್ ಮಾಡೋದು ತಪ್ಪು ಅನ್ನೋದು ತಿಳಿದಿಲ್ಲವೇ? ಸೆಲೆಬ್ರಿಟಿ ಆದ ಮಾತ್ರಕ್ಕೆ ಕಾನೂನು ಅನ್ವಯ ಆಗೋದಿಲ್ಲವೇ? ಅಂತ ನೆಟ್ಟಿಗರು ಪ್ರಶ್ನೆ ಎತ್ತಿದ್ದರು.
ಈ ಬೆನ್ನಲ್ಲೇ ಸೊಹೈಲ್ ಖಾನ್ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ಕ್ಷಮೆ ಕೇಳಿದ್ದಾರೆ. ʻಮುಂಬೈನ ಸಂಚಾರ ಅಧಿಕಾರಿಗಳಿಗೆ ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ. ನನಗೆ ಹೆಲ್ಮೆಟ್ ಧರಿಸಿದಾಗ ಕ್ಲಾಸ್ಟ್ರೋಫೋಬಿಯಾ (ಅತಿಯಾದ ಭಯ ಅಥವಾ ಆತಂಕದಿಂದ ಅಸ್ವಸ್ಥತೆ ಉಂಟಾಗುವುದು) ಆಗುವುದರಿಂದ ಕೆಲವೊಮ್ಮೆ ಧರಿಸುವುದಿಲ್ಲ. ಇದು ನೆಪವಲ್ಲ, ಈ ಬಾರಿ ಸಹಿಸಿಕೊಳ್ಳಿ ಮುಂದೆ ನಿಯಮ ಅನುಸರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತೇನೆ. ದಯಮಾಡಿ ಎಲ್ಲಾ ಬೈಕ್ ಸವಾರರು ಹೆಲ್ಮೆಟ್ ಧರಿಸಬೇಕು ಎಂದು ಮನವಿ ಮಾಡಿದ್ದಾರೆ.

