ಮುಂಬೈ: ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ನನ್ನನ್ನು ಮೊದಲ ಬಾರಿಗೆ ಭೇಟಿ ಮಾಡಿದ ವೇಳೆಯೇ ಕಿಸ್ ಮಾಡಿದ್ದರು ಎಂದು ಬಿಗ್‍ಬಾಸ್ ಸ್ಪರ್ಧಿ ಸೋಫಿಯಾ ಹಯಾಟ್ ಹೇಳಿದ್ದಾರೆ.
ರೋಹಿತ್ ಜೊತೆಗಿನ ಡೇಟಿಂಗ್ ವಿಚಾರವಾಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸೋಫಿಯಾ, 2012 ರಲ್ಲಿ ಲಂಡನ್ನಿನ ಕ್ಲಬ್ ಒಂದರಲ್ಲಿ ರೋಹಿತ್ ನಾನು ಮೊದಲ ಬಾರಿಗೆ ಭೇಟಿ ಆಗಿದ್ದು, ಮೊದಲ ಭೇಟಿಯಲ್ಲೇ ರೋಹಿತ್ ನನಗೆ ಕಿಸ್ ಮಾಡಿದ್ದರು ಎಂದು ತಿಳಿಸಿದ್ದಾರೆ.
ಬರೋಬ್ಬರಿ 7 ವರ್ಷದ ಬಳಿಕ ಸೋಫಿಯಾ ರೋಹಿತ್‍ರೊಂದಿನ ಡೇಟಿಂಗ್ ಬಗ್ಗೆ ಮಾತನಾಡಿದ್ದು, ನನ್ನ ಸಿನಿಮಾ ಒಂದರ ಸಂಭ್ರಮಾಚರಣೆಗೆ ಎಂದು ಕ್ಲಬ್‍ಗೆ ತೆರಳಿದ್ದೆ. ಆಗ ನನ್ನ ಸ್ನೇಹಿತ ರೋಹಿತ್‍ರನ್ನು ಪರಿಚಯ ಮಾಡಿಕೊಟ್ಟ. ಆದರೆ ಆಗ ರೋಹಿತ್ ಕ್ರಿಕೆಟ್ ಆಟಗಾರ ಎಂದು ನನಗೆ ತಿಳಿದಿರಲಿಲ್ಲ. ಸ್ವಲ್ಪ ಸಮಯ ಮಾತನಾಡಿದ ಬಳಿಕ ಇಬ್ಬರು ಕ್ಲಬ್‍ನ ಸ್ಥಳವೊಂದಕ್ಕೆ ತೆರಳಿದ್ದೇವು. ಆ ವೇಳೆ ರೋಹಿತ್ ನನಗ ಕಿಸ್ ಮಾಡಿದ್ರು, ಅದು ನನಗೆ ಒಳ್ಳೆಯ ಅನುಭವ ಆಗಿತ್ತು. ಇದಾದ 4 ದಿನಗಳ ಬಳಿಕ ರೋಹಿತ್ ನಮ್ಮ ಮನೆಗೆ ಬಂದಿದ್ದರು ಎಂದು ಸೋಫಿಯಾ ಹೇಳಿದ್ದಾರೆ.
ನಮ್ಮ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ನಿರ್ಮಾಣವಾಗಿತ್ತು. ಬಿಡುವಿನ ವೇಳೆಯಲ್ಲಿ ಇಬ್ಬರು ಒಟ್ಟಿಗೆ ಇರಲು ಬಯಸುತ್ತಿದ್ದೇವು. ಆದರೆ ನಮ್ಮ ಬಗ್ಗೆ ಮಾಧ್ಯಮಗಳು ಕೆಟ್ಟದಾಗಿ ವರದಿ ಮಾಡುತ್ತಿದ್ದವು. ಈ ಬಗ್ಗೆ ನಾನು ರೋಹಿತ್‍ಗೆ ಹೇಳಿದ್ದೆ. ಇದನ್ನು ನಾನು ಪಬ್ಲಿಕ್ ಮಾಡಲು ಇಷ್ಟವಿರಲಿಲ್ಲ ಎಂದಿದ್ದಾರೆ.
ರೋಹಿತ್ ಇದಾದ ಬಳಿಕ ಮಾಧ್ಯಮಗಳ ಮುಂದೆ ನಮ್ಮ ಬಗ್ಗೆ ಮಾತನಾಡಿದ್ದರು, ಅದು ನನಗೆ ಇಷ್ಟ ಆಗಲಿಲ್ಲ. ನನ್ನನ್ನು ಅಭಿಮಾನಿ ಅಷ್ಟೇ ಎಂದು ಆಗ ಹೇಳಿದ್ದು ನನಗೆ ನೋವುಂಟು ಮಾಡಿತ್ತು. ಆದ್ದರಿಂದಲೇ ನಾನು ಬ್ರೇಕ್ ಅಪ್ ಮಾಡಿಕೊಳ್ಳಲು ತೀರ್ಮಾನ ಮಾಡಿದೆ ಎಂದು ತಮ್ಮ ಸಂಬಂಧ ಮುರಿದು ಬಿದ್ದ ಬಗ್ಗೆಯೂ ವಿವರಿಸಿದ್ದಾರೆ.
ಅಂದಹಾಗೇ ರೋಹಿತ್ ಶರ್ಮಾ 2015 ರಲ್ಲಿ ರಿತಿಕಾ ರನ್ನು ಮದುವೆಯಾಗಿದ್ದು, ಕೆಲ ದಿನಗಳ ಹಿಂದೆ ರಿತಿಕಾ ಹೆಣ್ಣು ಮಗುವನ್ನು ಹೆತ್ತಿದ್ದರು. ಇತ್ತ ಸೋಫಿಯಾ ಕೂಡ ವ್ಲಾಡ್ ಸ್ಟೇನ್ಸ್ಕು ಎಂಬಾತನ್ನು ಕಳೆದ ವರ್ಷವಷ್ಟೇ ಮದುವೆಯಾಗಿದ್ದರು. ಆದರೆ ಇಬ್ಬರ ಮದುವೆ ಕೆಲ ದಿನಗಳಲ್ಲೇ ಮುರಿದುಬಿದ್ದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv