ಚಿಕ್ಕೋಡಿ: ಇಂದು ಕನ್ನಡ ರಾಜ್ಯೋತ್ಸವ (Kannada Rajyotsava) ನಿಮಿತ್ತ ರಾಜ್ಯ ಸರ್ಕಾರ ದಿ.ಪುನೀತ್ ರಾಜ್‍ಕುಮಾರ್ (Puneeth Rajkumar) ಅವರಿಗೆ ಮರಣೋತ್ತರ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ನೀಡಿದ ಹಿನ್ನೆಲೆ ಅವರ ಅಭಿಮಾನಿ ಹಾಗೂ ಬೀದಿ ಬದಿಯ ಬಡ ವ್ಯಾಪಾರಿಯೋರ್ವ (Muslim Trader) ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಉಪಹಾರ ವ್ಯವಸ್ಥೆ ಕಲ್ಪಿಸಿ ಪವರ್ ಸ್ಟಾರ್ ಪುನೀತ್‍ಗೆ ಗೌರವ ಸಲ್ಲಿಸಿದ್ದಾರೆ.
Advertisement
ಬೆಳಗಾವಿ (Belgavi) ಜಿಲ್ಲೆ ಹುಕ್ಕೇರಿ (Hukkeri) ಪಟ್ಟಣದ ಕೋರ್ಟ್ ವೃತ್ತದಲ್ಲಿ ಅಪ್ಪು ಅಭಿಮಾನಿ ಗೌಸ್ ಮುಲ್ಲಾ ಎಂಬ ಬೀದಿ ಬದಿ ಬಾಳೆಹಣ್ಣು ವ್ಯಾಪಾರಿಯಾಗಿದ್ದು, ಇವರು ರಾಜರತ್ನ ಪುನೀತ್ ಅಪ್ಪಟ ಅಭಿಮಾನಿಯಾಗಿದ್ದಾರೆ. ಕನ್ನಡ ರಾಜ್ಯೋತ್ಸವ ದಿನವೇ ಕೋಟ್ಯಂತರ ಅಭಿಮಾನಿಗಳ ಹೃದಯ ಸಾಮ್ರಾಟ್ ಅಪ್ಪುಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ ಹಿನ್ನೆಲೆ ತಮ್ಮ ಅಂಗಡಿ ಬದಿ ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನೆರೆದಿದ್ದ ಜನರಿಗೆ ಉಪಹಾರ ನೀಡುವ ಮೂಲಕ ತನ್ನ ಅಭಿಮಾನ ಮೆರೆದಿದ್ದಾರೆ. ಇದನ್ನೂ ಓದಿ: ಖಾಲಿಯಿರುವ 1 ಲಕ್ಷ ಸರ್ಕಾರಿ ಹುದ್ದೆಗಳು ಈ ವರ್ಷ ಭರ್ತಿ: ಬೊಮ್ಮಾಯಿ
Advertisement
Advertisement
ಅಪ್ಪು ಅಂದರೆ ನನಗೆ ಮೊದಲಿನಿಂದಲೂ ತುಂಬಾ ಇಷ್ಟ ಅವರ ಎಲ್ಲ ಚಿತ್ರಗಳನ್ನೂ ನೋಡಿದ್ದೇನೆ. ಅವರ ಸಾಮಾಜಿಕ ಕಾರ್ಯಗಳು ನನಗೂ ಸ್ಫೂರ್ತಿ ತಂದಿದೆ. ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಲಭಿಸಿದ್ದು ಸಂತಸ ತಂದಿದೆ ಎಂದು ಅಭಿಮಾನಿ ಗೌಸ್ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉದ್ಯೋಗಾಕಾಂಕ್ಷಿ ಮೇಲೆ DYSP ದರ್ಪ – ಕೆನ್ನೆಗೆ ಬಾರಿಸಿದ ಪೊಲೀಸ್ ಅಧಿಕಾರಿ