ವಿಜಯ್ ದೇವರಕೊಂಡ ಮತ್ತು ಸಮಂತಾ ನಟನೆಯ `ಖುಷಿ’ ಚಿತ್ರದ ಫಸ್ಟ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಈಗ ವಿಜಯ್ ನಟನೆಯ `ಖುಷಿ’ ಚಿತ್ರದ ವಿಚಾರವಾಗಿ ಪವನ್ ಕಲ್ಯಾಣ ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ.
Advertisement
ಟಾಲಿವುಡ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿರೋ ವಿಜಯ್ ದೇವರಕೊಂಡ ಮತ್ತು ಸಮಂತಾ ನಟನೆಯ `ಖುಷಿ’ ಸಿನಿಮಾ ಮೇಲೆ ಪವನ್ ಕಲ್ಯಾಣ್ ಫ್ಯಾನ್ಸ್ ಮುನಿಸಿಕೊಂಡಿದ್ದಾರೆ. ವಿಜಯ್ ಅಭಿನಯದ `ಖುಷಿ’ ಟೈಟಲ್ ಅನೌನ್ಸ್ ಆಗುತ್ತಿದ್ದಂತೆ ಪವನ್ ಕಲ್ಯಾಣ ಫ್ಯಾನ್ಸ್ ಮುನಿಸಿಕೊಂಡಿದ್ದಾರೆ.
Advertisement
Advertisement
ಪವರ್‌ಸ್ಟಾರ್ ಪವನ್ ಕಲ್ಯಾಣ್ ಮತ್ತು ಭೂಮಿಕಾ ಜೋಡಿಯಾಗಿ ನಟಿಸಿದ ಚಿತ್ರ `ಖುಷಿ’ ಚಿತ್ರ ಮತ್ತೆ 20 ವರ್ಷಗಳ ನಂತರ ತೆರೆಗೆ ಬರುತ್ತಿದೆ. ಹಳೆಯ ಚಿತ್ರದ ಫೀಲ್ ಅನ್ನು ಈಗೀನ ವಿಜಯ್ ನಟನೆಯ ಚಿತ್ರ ಹಾಳು ಮಾಡುತ್ತಿದೆ ಎಂದು ಪವರ್ ಸ್ಟಾರ್ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ. `ಖುಷಿ’ ಚಿತ್ರದಲ್ಲಿ ಪವನ್ ಮತ್ತು ಭೂಮಿಕಾ ಜೋಡಿ ಫ್ಯಾನ್ಸ್‌ಗೆ ಸಖತ್ ಮೋಡಿ ಮಾಡಿತ್ತು. ಪವನ್ ಕಲ್ಯಾಣ್ ಅಂದ್ರೆ ಖುಷಿ, ಖುಷಿ ಅಂದ್ರೆ ಪವನ್ ಕಲ್ಯಾಣ್ ಹೀಗಿರುವಾಗ ಈ ಚಿತ್ರದ ಟೈಟಲ್ ಅನ್ನು ವಿಜಯ್ ದೇವರಕೊಂಡ ಚಿತ್ರದಲ್ಲಿ ಮರುಬಳಕೆ ಮಾಡಿಕೊಂಡಿರುವುದರ ಬಗ್ಗೆ ಪವನ್ ಕಲ್ಯಾಣ್ ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ನಡೆದ ಹಿಂಸಾಚಾರಕ್ಕೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವೇ ಕಾರಣ: ಮೆಹಬೂಬಾ ಮುಫ್ತಿ
Advertisement
ಪವನ್ ಕಲ್ಯಾಣ್ ತಿರುಗಿ ಬೀಳುತ್ತಿದ್ದಂತೆ ವಿಜಯ್ ಪರವಾಗಿ ದೇವರಕೊಂಡ ಫ್ಯಾನ್ಸ್ ಮಾತನಾಡಿದ್ದಾರೆ. ಟೈಟಲ್ ಅನ್ನು ಮರುಬಳಕೆ ಮಾಡುವುದರಲ್ಲಿ ತಪ್ಪೇನಿಲ್ಲ. ಈ ರೀತಿ ಹಲವು ಬಾರಿ ನಡೆದಿದೆ ಅಂತಾ ನೆಚ್ಚಿನ ನಟನಿಗೆ ಫ್ಯಾನ್ಸ್ ಸಾಥ್ ನೀಡಿದ್ದಾರೆ. ಇನ್ನು ಪವನ್ ಕಲ್ಯಾಣ್ ನಟನೆಯ `ಖುಷಿ’ ಚಿತ್ರದ ಮುಂದೆ ವಿಜಯ್ ನಟನೆಯ `ಖುಷಿ’ ಸಿನಿಮಾ ಹೇಗೆ ಮೋಡಿ ಮಾಡಬಹುದು ಅಂತಾ ಕಾದುನೋಡಬೇಕಿದೆ.