ಬೆಂಗಳೂರು: ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ (MB Patil) ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ಗೆ (Thawar Chand Gehlot) ದೂರು ಸಲ್ಲಿಕೆಯಾಗಿದೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ (Dinesh Kallahalli) ಅವರು ಇಂದು ರಾಜಭವನಕ್ಕೆ ತೆರಳಿ ದೂರು ನೀಡಿದ್ದಾರೆ.
Advertisement
Advertisement
ಆರೋಪ ಏನು?
ಎಂಬಿ ಪಾಟೀಲ್ ಅವರು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (KIADB) ಭೂಮಿಯನ್ನು ಕಾನೂನು ಬಾಹಿರವಾಗಿ ಹಂಚಿಕೆ ಮಾಡಿದ್ದಾರೆ. ನಿಯಮದ ಪ್ರಕಾರ ಆನ್‌ಲೈನ್‌ನಲ್ಲಿ ಪ್ರಕ್ರಿಯೆ ನಡೆಸಬೇಕಿತ್ತು. ಆದರೆ ಇವರು ಕೈಗಾರಿಕೆ ನಡೆಸದ ಕಂಪನಿಗಳಿಗೆ ಹಂಚಿಕೆ ಮಾಡಿದ್ದಾರೆ. ಬಿಡದಿ, ವಸಂತನರಸಾಪುರ, ಕೋಲಾರ ನರಸಾಪುರ, ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶಗಳಲ್ಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ಎಸಗಲಾಗಿದೆ. ಕಾನೂನು ಬಾಹಿರವಾಗಿ ನಿಯಮಗಳನ್ನು ಗಾಳಿಗೆ ತೂರಿ ನಿವೇಶನ ಹಂಚಿಕೆ ಮಾಡಲಾಗಿದೆ . ಇವರ ಕೆಲಸಗಳಿಗೆ ಕೆಲ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಈ ಅಕ್ರಮ ಹಂಚಿಕೆಯಿಂದ ಕೆಐಎಡಿಬಿಗೆ ಕೋಟ್ಯಂತರ ರೂ. ನಷ್ಟವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
Advertisement
ಎಂ.ಬಿ ಪಾಟೀಲ್ ಮೇಲಿನ ದೂರಿನ ಪ್ರಮುಖ ಆರೋಪಗಳೆನು…?
Advertisement
* ಕಂಪನಿಗಳಿಗೆ ಸಿ.ಎ ಜಮೀನು ಹಂಚಿಕೆಯಾಗಿದೆ. ಕೈಗಾರಿಕೆ ನಡೆಸದ ಕಂಪನಿಗಳಿಗೂ ಕೆಐಎಡಿಬಿಯು ತನ್ನ ನಿಯಮ 7ನ್ನು ಉಲ್ಲಂಘಿಸಿ ಸಿ.ಎ ನಿವೇಶನಗಳನ್ನು ಮಂಜೂರಾತಿ ಮಾಡಲಾಗಿದೆ. ಕೆಐಎಡಿಬಿಯ ಈ ಅಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರುಪಾಯಿ ನಷ್ಟ ಉಂಟಾಗಿದೆ
* ಭೂಮಿಗೆ ಹೆಚ್ಚಿನ ಬೇಡಿಕೆ ಇರುವ ಕೈಗಾರಿಕಾ ಪ್ರದೇಶಗಳಲ್ಲಿ ಇರುವ ಸಿಎ ನಿವೇಶನಗಳನ್ನು ಹಂಚಿಕೆ ಮಾಡಿದ್ದು, ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಭೂಮಿ ಹಂಚಿಕೆ ಮಾಡುವ ನಕ್ಷೆಯನ್ನು ಬದಲಾಯಿಸಿ ಸಿಎ ಜಮೀನು ಹಂಚಿಕೆ ಮಾಡಲಾಗಿದೆ.
* ಮಂಡಳಿಯಲ್ಲಿ ಖಾಲಿ ಇರುವ ಸಿ.ಎ/ಅಮಿನಿಟಿ ನಿವೇಶನಗಳನ್ನು ವಿಲೇವಾರಿ ಮಾಡುವ ಕುರಿತು ದಿನಾಂಕ: 05-02-2024 ಮತ್ತು ದಿನಾಂಕ: 07-02 2024 ರಂದು ಸಾರ್ವಜನಿಕ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿರುತ್ತದೆ. ನಂತರ ಸದರಿ ಪತ್ರಿಕಾ ಪ್ರಕಟಣೆಗೆ ಅರ್ಜಿ ಸಲ್ಲಿಸಲಾದ ಉದ್ದಿಮೆದಾರ ಪ್ರಸ್ತಾವನೆಗಳನ್ನು ದಿನಾಂಕ:05-03-2024 ರಂದು ನಡೆದ ರಾಜ್ಯಮಟ್ಟದ ಏಕಗಾವಾಕ್ಷಿ ಸಮಿತಿ ಸಭೆಯ ಮುಂದೆ ಮಂಡಿಸಿ ಅರ್ಹ ಉದ್ದಿಮೆದಾರರ ಅರ್ಜಿಗಳನ್ನು ಪರಿಗಣಿಸದೇ ತಮಗೆ ಬೇಕಾದ ಉದ್ದಿಮೆದಾರರಿಗೆ ಸಭೆಯಲ್ಲಿ ಅನುಮೋದನೆ ಮಾಡಿ ಅವರಿಗೆ ಬಾರಿ ಅನುಕೂಲ ಮಾಡಿಕೊಟ್ಟಿದ್ದಾರೆ.
* ಸಂಪೂರ್ಣ ಪ್ರಕ್ರಿಯೆಯನ್ನು ಆನ್‌ಲೈನ್ ಮುಖಾಂತರ ಮಾಡಬೇಕಾಗಿತ್ತು, ಆದರೆ ಆಫ್ ಲೈನ್ ಮುಖೇನ ಮಾಡಿರುವುದು ಭಾರಿ ಅಕ್ರಮಕ್ಕೆ ಕಾರಣವಾಗಿದೆ.
* ಸಚಿವರಾದ ಎಂ.ಬಿ ಪಾಟೀಲ್ ಅವರು ಅಧಿಕಾರಿಗಳಿಗೆ ಕರ್ತವ್ಯದಲ್ಲಿ ಅಕ್ರಮ ಎಸಗುವಂತೆ ಒತ್ತಡ ಸೃಷ್ಟಿ ಮಾಡಿರುವುದರಿಂದ ಸಚಿವರ ಪ್ರಭಾವಪ್ರಭಾವಕ್ಕೆ ಒಳಗಾಗಿ 1) ಡಾ. ಎಸ್. ಸೆಲ್ವಕುಮಾರ್, (IAS) ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಸರ್ಕಾರ, 2) ಡಾ.ಮಹೇಶ್ ಎಂ. (IAS) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕಾರ್ಯನಿರ್ವಾಹಕ ಸದಸ್ಯರು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (KIADB) 3) ಶ್ರೀಮತಿ ಗುಂಜನ್ ಕೃಷ್ಣ, (IAS) ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರು ಮತ್ತು ಸದಸ್ಯ ಕಾರ್ಯದರ್ಶಿ, (SLSSWCC) ಈ ಅಧಿಕಾರಿಗಳು ಅಕ್ರಮಕ್ಕೆ ಸಹಕಾರ ನೀಡಿದ್ದಾರೆ.
* ಅತ್ಯಂತ ಬೆಲೆಬಾಳುವ ಸಿ.ಎ ಪ್ರದೇಶಗಳನ್ನು ಬಹಿರಂಗ ಹರಾಜು ಮೂಲಕ ಹಂಚಿಕೆ ಮಾಡಬೇಕಾಗಿತ್ತು. ಆದರೆ ತಮಗೆ ಬೇಕಾದವರಿಗೆ ಮಾರ್ಗಸೂಚಿ ಅನುಸರಿಸದೇ ಮನಸೋ ಇಚ್ಛೆ ಹಂಚಿಕೆ ಮಾಡಿದ್ದಾರೆ. ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದಿಲ್ಲ ಇದಕ್ಕೆ ಸಮರ್ಥನೀಯ ಕಾರಣಗಳನ್ನು ಒದಗಿಸಿಲ್ಲ ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ಆದಾಯ ನಷ್ಟ ಉಂಟಾಗಿದೆ.
* ಸಾರ್ವಜನಿಕ ಹಿತಾಸಕ್ತಿಯ ಹೊರತಾಗಿ ಅಕ್ರಮವಾಗಿ ಜಮೀನು ಸಿಎ ನಿವೇಶನ ಹಂಚಿಕೆ ಮಾಡಿದ್ದು ಕಾನೂನುಬಾಹಿರವಾಗಿದೆ. ಈ ಮೂಲಕ ತಮ್ಮ ಸಾರ್ವಜನಿಕ ಕಚೇರಿಯನ್ನು ಸಾರ್ವಜನಿಕ ಹಿತಾಸಕ್ತಿ ವಿರುದ್ಧವಾಗಿ ದುರುಪಯೋಗ ಪಡಿಸಿಕೊಂಡು ಸರ್ಕಾರದ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿ ತಾನು ಮಾಡುತ್ತಿರುವ ಅಕ್ರಮದಿಂದ ಖಾಸಗಿ ವ್ಯಕ್ತಿಗಳಿಗೆ ಲಾಭವಾಗುತ್ತದೆ ಎಂದು ಗೊತ್ತಿದ್ದರು ಸಹ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿಗಳ ನಷ್ಟ ಉಂಟು ಮಾಡಿ ಖಾಸಗಿ ವ್ಯಕ್ತಿಗಳಿಗೆ ಲಾಭ ಮಾಡಿಕೊಟ್ಟಿದ್ದಾರೆ.
* ರಾಜ್ಯದ ಹಲವು ಕೈಗಾರಿಕೆ ಪ್ರದೇಶದಲ್ಲಿ ನಾಗರಿಕ ಸೇವೆ (ಸಿಎ)ಗೆ ಮೀಸಲಿದ್ದ ಭೂಮಿಯಲ್ಲಿ ನಕಲಿ, ಅಪ್ರಾಮಾಣಿಕ ಮತ್ತು ದೋಷಪೂರಿತ ವಿವರಣೆಗಳನ್ನು ಆಧರಿಸಿ ಅವರು ಸಿ.ಎ ಭೂಮಿಯನ್ನು ಕಡಿಮೆ ದರಕ್ಕೆ ಹಲವು ಉದ್ಯಮಿಗಳಿಗೆ ಹಂಚಿಕೆ ಮಾಡಿ ನಿಯಮ ಉಲ್ಲಂಘಿಸಿದ್ದಾರೆ
* ಕೆಐಎಡಿಬಿ ಮಂಡಳಿ ಈ ಹಿಂದಿನ ನಿಯಮದಂತೆ ಸಿಎ ಜಮೀನುಗಳನ್ನು ಹರಾಜು ಪ್ರಕ್ರಿಯೆ ಕೈಗೊಳ್ಳಬೇಕಿತ್ತು. ಆದರೆ ಈ ನಿಯಮ ಉಲ್ಲಂಘಿಸಿ ಕಡಿಮೆ ದರಕ್ಕೆ ಸಿಎ ಜಮೀನುಗಳನ್ನು ಹಂಚಿಕೆ ಮಾಡಲಾಗಿದೆ. ಈಗ ಸಿಎ ಜಮೀನು ಪಡೆದ ಕೆಲವರು ನೈಜ ಕೈಗಾರಿಕೋದ್ಯಮಿಗಳು ಆಗದೇ ಇರುವುದರಿಂದ ಮುಂದಿನ 10 ವರ್ಷದಲ್ಲಿ ಸಿಎ ಜಮೀನು ಮತ್ತೆ ಮಾರಾಟವಾಗುತ್ತೆ ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತೆ.
* ಈಗ ಹಂಚಿಕೆ ಮಾಡಿರುವ ಸಿಎ ಜಮೀನಿಗೆ ಹಲವು ಕೈಗಾರಿಕೋದ್ಯಮಿಗಳು ಮುಂಗಡ ಅರ್ಜಿಸಲ್ಲಿಸಿದ್ದರು ಅವರಿಗೆ ಸಿಗದ ಈ ಭೂಮಿ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಮೇಲೆ ತಿಳಿಸಲಾದ ಕಂಪನಿಗಳಿಗೆ ದೊರೆಯುವಂತೆ ಸಂಚು ಮಾಡಲಾಗಿದೆ.
* ಕೆಐಎಡಿಬಿಯಲ್ಲಿ ಸಿಎ ನಿವೇಶನ ಕೈಗಾರಿಕೋದ್ಯಮಕ್ಕೆ ಮಂಜೂರು ಮಾಡುವಂತಿಲ್ಲ ಎಂಬ ಹಿಂದಿನ ಕಾನೂನುನ್ನು ರದ್ದು ಪಡಿಸಿ ಸಿಎ ಭೂಮಿ ಮಂಜೂರಿಗೆ (SLSWCC) ಸಭೆ ಶಿಫಾರಸು ಮಾಡಿದ್ದಾರೆ.
* ಕೈಗಾರಿಕಾ ಪ್ರದೇಶಗಳಲ್ಲಿ ನಿಯಮಾನುಸಾರ ಒದಗಿಸಬೇಕಾದ ಚಟುವಟಿಕೆಗಳು, ಮೂಲ ಸೌಕರ್ಯಗಳಿಗಾಗಿ ಸಿಎ/ ಅಮೆನಿಟಿ ನಿವೇಶನಗಳನ್ನು ಮೀಸಲಿಡಬೇಕು. ಹೊಸ ಆದೇಶದನ್ವಯ ಸಿ.ಎ ಮೀಸಲಿಟ್ಟ ನಿವೇಶನಗಳನ್ನು ಸ್ಥಳ, ಉದ್ದೇಶ ಸಹಿತ ಜಾಹೀರಾತು ನೀಡಿ ನಿವೇಶನಗಳ ಹಂಚಿಕೆಗೆ ಅರ್ಜಿ ಸ್ವೀಕರಿಸಬೇಕು. ಸ್ವೀಕರಿಸಿದ ಅರ್ಜಿಗಳನ್ನು ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಕಾರ್ಯಕಾರಿ ಸದಸ್ಯರ ಅಧ್ಯಕ್ಷತೆಯಲ್ಲಿ ಮಂಡಳಿ ಅಧಿಕಾರಿಗಳೊಂದಿಗೆ ಉಪ ಸಮಿತಿ ರಚಿಸಿ ಮಾನದಂಡಗಳ ಅನುಸಾರ ಅರ್ಜಿ ಪರಿಶೀಲಿಸಿ ರಾಜ್ಯಮಟ್ಟದ ಏಕ ಗವಾಕ್ಷಿ ಸಮಿತಿ ಸಭೆಯ ಮುಂದೆ ಚರ್ಚಿಸಿ ಅನುಮೋದನೆ ಪಡೆಯಬೇಕು ನಂತರ ಈ ನಿವೇಶನಗಳನ್ನು ಹಂಚಿಕೆದಾರರಿಗೆ ಶುದ್ಧ ಕ್ರಯ ಮಾಡಿಕೊಡಬೇಕು ಎಂದು ಸರ್ಕಾರ ಆದೇಶಿಸಿದೆ ಈ ಆದೇಶದ ಹಿಂದೆ ಬಹು ದೊಡ್ಡ ಒಳ ಸಂಚು ನಡೆದಿದ್ದು ಇದರಲ್ಲಿ ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಂಶಯ ಇದೆ
* ಕೈಗಾರಿಕೆ ಉದ್ದೇಶಕ್ಕಾಗಿ ನಿವೇಶನ ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸುವಾಗ ಕನಿಷ್ಠ 30 ದಿನ ಸಮಯ ಕೊಡಬೇಕು ಎಂಬ ನಿಯಮ ಇದೆ. ಈ ವಸಾಹುತಗಳಲ್ಲಿನ ನಾಗರಿಕ ಸೌಲಭ್ಯ (ಸಿ.ಎ) ಹಾಗೂ ಇತರ ಸೌಲಭ್ಯಗಳಿಗೆ (ಅಮೆನಿಟಿ) ಮೀಸಲಿಟ್ಟ ಜಾಗಗಳ ಹಂಚಿಕೆಗೆ ಕಳೆದ ಫೆಬ್ರುವರಿ 5ರಂದು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಫೆ.23ರಂದೇ ಕೊನೆ ದಿನ. ಹಂಚಿಕೆಗೆ ಪ್ರಸ್ತಾಪಿಸಲಾದ ಸಿಎ/ಅಮೆನಿಟಿ ನಿವೇಶನಗಳ ಪಟ್ಟಿಯನ್ನು ಫೆ.8ರಂದು ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಕೆಗೆ ರಜೆ ದಿನ ಸೇರಿ 18 ದಿನಗಳ ಕಾಲಾವಕಾಶವನ್ನು ಕೊಡಲಾಗಿತ್ತು. ರಜೆ ದಿನಗಳಲ್ಲಿ ಕಳೆದರೆ 15 ದಿನ ಮಾತ್ರ ಅರ್ಜಿದಾರರಿಗೆ ಅವಕಾಶ ಸಿಕ್ಕಿದ್ದು ಇದರಿಂದ ಅರ್ಹ ಕೈಗಾರಿಕೋದ್ಯಮಿಗಳು ಅರ್ಜಿ ಸಲ್ಲಿಸುವುದನ್ನು ತಪ್ಪಿಸಲು ಈ ನಿಯಮ ರೂಪಿಸಲಾಗಿದೆ.
* 1991ರಲ್ಲಿ ಕೆಐಎಡಿಬಿ ಹೊರಡಿಸಿದ್ದ ಅಧಿಸೂಚನೆಯಲ್ಲಿ ಕೆಲವು ಚಟುವಟಿಕೆಗಳನ್ನು ಅಮೆನಿಟಿ ಎಂದು ನಿಗದಿಪಡಿಸಲಾಗಿತ್ತು. 2023 ನವೆಂಬರ್ 11ರಂದು ಹೊರಡಿಸಲಾದ ಅಧಿಸೂಚನೆ (ಸಿಐ78 ಎಸ್‌ಪಿಕ್ಯೂ 2021)ಯಲ್ಲಿ ನಿಗದಿಪಡಿಸಲಾದ ಅಮೆನಿಟಿ ಚಟುವಟಿಕೆಗಳನ್ನು ಪಟ್ಟಿಯಿಂದ ಹಿಂಪಡೆಯಲಾಗಿತ್ತು. ಆ ಮೂಲಕ ನಿರ್ದಿಷ್ಟ ಸೌಲಭ್ಯ ಕಲ್ಪಿಸಲು ಮೀಸಲಾಗಿದ್ದ ನಿವೇಶನ/ಆಸ್ತಿಗಳನ್ನು ಬೇರೆ ಉದ್ದೇಶಕ್ಕೆ ಬಳಸಲು ಅವಕಾಶ ಕಲ್ಪಿಸಿ ವ್ಯಾಪಕ ಭ್ರಷ್ಟಚಾರ ಎಸಗಲಾಗಿದೆ ‘ಅನರ್ಹ ಕೈಗಾರಿಕೋದ್ಯಮಿಗಳಿಗೆ ಹಂಚಿಕೆ ಮಾಡುವ ಉದ್ದೇಶದಿಂದಷ್ಟೇ ಈ ರೀತಿಯ ವಾಮಮಾರ್ಗ ಹಿಡಿಯಲಾಗಿದೆ.
* KIADB ಅಭಿವೃದ್ಧಿ ಅಧಿಕಾರಿಗಳು ಕೆಲವು ಪ್ರಕರಣಗಳಲ್ಲಿ ಮೂಲೆ ನಿವೇಶನಗಳನ್ನು ನೋಟಿಫಿಕೇಷನ್ ಮಾಡಿ ಹರಾಜು ಪ್ರಕ್ರಿಯೆಯಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಅದೇ ಸಿ.ಎ ಜಮೀನು ಹಂಚಿಕೆ ಪ್ರಸ್ತಾವನೆಯನ್ನು ಪರಿಗಣಿಸಲು ಸಾಧ್ಯವಿಲ್ಲವೆಂದು ತಿರಸ್ಕರಿಸಿ ದ್ವಿಮುಖ ನೀತಿ ಅನುಸರಿಸಿದ್ದಾರೆ ಮಾರ್ಗಸೂಚಿ ದರದ ಶೇ. 1.14 ವಿಧಿಸಿ ಹಂಚಿಕೆ ಮಾಡಿದ್ದರೇ ಮಂಡಳಿಗೆ ಕೋಟ್ಯಂತರ ರೂ. ಲಾಭ ಬರುತ್ತಿತ್ತು. ಆದ್ರೆ ಹಂಚಿಕೆ ದರದಲ್ಲಿ ಹಂಚಿಕೆ ಮಾಡಿರುವುದರಿಂದ ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ಆರ್ಥಿಕ ನಷ್ಟವಾಗಿದೆ.
* ನಿವೇಶನಗಳನ್ನು ಹಂಚಿಕೆ ಮಾಡುವ ಮುನ್ನ ಅರ್ಜಿ ಸಲ್ಲಿಸಿದ ಸಂಸ್ಥೆಗಳಿಗೆ ನಿರ್ದಿಷ್ಟ ಕೇತ್ರದಲ್ಲಿ ಎಷ್ಟು ವರ್ಷ ಅನುಭವ ಇದೆ? ಯೋಜನೆ ಜಾರಿ ಮಾಡುವ ಸಾಮರ್ಥ್ಯ ಇದೆಯೇ ಎಂದು ಪರಿಶೀಲಿಸಿಲ್ಲ ಎಂದು ದೂರಿನಲ್ಲಿ ನಮೂದಿಸಲಾಗಿದೆ.