Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪಹಲ್ಗಾಮ್‌ ನರಹಂತಕರಿಗೆ ತರಬೇತಿ ನೀಡಿದ್ದು ಐಎಸ್‌ಐನ `S1′ ಘಟಕ – ಸ್ಫೋಟಕ ರಹಸ್ಯ ಬಯಲು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | World | ಪಹಲ್ಗಾಮ್‌ ನರಹಂತಕರಿಗೆ ತರಬೇತಿ ನೀಡಿದ್ದು ಐಎಸ್‌ಐನ `S1′ ಘಟಕ – ಸ್ಫೋಟಕ ರಹಸ್ಯ ಬಯಲು

World

ಪಹಲ್ಗಾಮ್‌ ನರಹಂತಕರಿಗೆ ತರಬೇತಿ ನೀಡಿದ್ದು ಐಎಸ್‌ಐನ `S1′ ಘಟಕ – ಸ್ಫೋಟಕ ರಹಸ್ಯ ಬಯಲು

Public TV
Last updated: November 9, 2025 7:47 pm
Public TV
Share
2 Min Read
Pahalgam Terror Attack 2 1
SHARE

– ಕಳೆದ 20 ವರ್ಷಗಳಲ್ಲಿ ಸಾವಿರಾರು ಉಗ್ರರಿಗೆ ಟ್ರೈನಿಂಗ್
– ಭಾರತ‌ದ ಎಲ್ಲಾ ಪ್ರಮುಖ ಸ್ಥಳಗಳ ನಕ್ಷೆ ಸಂಗ್ರಹ

ಶ್ರೀನಗರ: ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ ರಕ್ತದೋಕುಳಿ ಹರಿಸಿದ (Pahalgam Terrorist Attack) ಉಗ್ರರ ಬಗ್ಗೆ ಹಾಗೂ ಉಗ್ರ ಸಂಘಟನೆಯ ಬಗ್ಗೆ ಮತ್ತಷ್ಟು ಸ್ಫೋಟಕ ರಹಸ್ಯಗಳು ಹೊರಬಿದ್ದಿವೆ.

ಹೌದು. ಅಂದು ಬೈಸರನ್‌ ಕಣಿವೆ ತೀರದಲ್ಲಿರುವ ಪಹಲ್ಗಾಮ್‌ಗೆ (Pahalgam) ಶಸ್ತ್ರಸಜ್ಜಿತ ಉಗ್ರರು ದಾಳಿ ನಡೆಸುವುದಕ್ಕಾಗಿಯೇ AK-47 ಮತ್ತು M4 ಅಸಾಲ್ಟ್ ರೈಫಲ್‌ಗಳನ್ನ ಹೊತ್ತು ದಟ್ಟ ಕಾಡುಗಳ ಮಧ್ಯೆ 22 ಗಂಟೆಗಳ ಕಾಲ ನಡೆದುಕೊಂಡು ಬಂದಿದ್ದರು. ಇದಕ್ಕೆಲ್ಲ ತರಬೇತಿ ನೀಡಿದ್ದು, ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ನಲ್ಲಿರುವ ʻS1ʼ ಘಟಕ. ಇದಿಷ್ಟೇ ಅಲ್ಲ ಮುಂಬೈ ದಾಳಿಯಿಂದ (Mumbai) ಹಿಡಿದು ಪಹಲ್ಗಾಮ್‌ ಭಯೋತ್ಪಾದಕ ದಾಳಿವರೆಗೂ ಭಾರತಕ್ಕೆ ಭಯೋತ್ಪಾದನೆ ರಫ್ತು ಮಾಡುವಲ್ಲಿ ದೊಡ್ಡ ಪಾತ್ರ ವಹಿಸಿರೋದು ಈ `S1′ ಘಟಕ ಅನ್ನೋದು ಈಗ ಬೆಳಕಿಗೆ ಬಂದಿದೆ.

Pahalgam Terrorist Attack 1

ʻS1ʼ ಅಂದ್ರೆ ಸಬ್ವರ್ಷನ್‌-1 ಅಂತ. ಈ ಘಟಕವು ಪಾಕಿಸ್ತಾನದಲ್ಲಿ (Pakistan) ಗಡಿಯಾಚೆಗಿನ ಭಯೋತ್ಪಾದನೆ ಪಡೆಗಳ ಹಿಂದೆ ಕಾರ್ಯನಿರ್ವಹಿಸುವ ದೊಡ್ಡ ಜಾಲವಾಗಿದೆ. ಪಾಕಿಸ್ತಾನಿ ಸೇನೆಯ ಕರ್ನಲ್‌ ಇದರ ಮುಖ್ಯಸ್ಥರಾಗಿರುತ್ತಾರೆ. ‘ಗಾಜಿ 1’ ಮತ್ತು ‘ಗಾಜಿ 2’ ಕೋಡ್‌ನಿಂದ ಕರೆಯಲ್ಪಡುವ ಇಬ್ಬರು ರ‍್ಯಾಂಕ್‌ ಆಫೀಸರ್‌ಗಳು ಇದರ ಕಾರ್ಯಾಚರಣೆ ಜವಾಬ್ದಾರಿ ಹೊತ್ತಿರುತ್ತಾರೆ. ಇಸ್ಲಾಮಾಬಾದ್‌ನಲ್ಲಿ ಇದರ ಕಚೇರಿ ಇದ್ದು, ಇಲ್ಲಿಂದಲೇ ಶಸ್ತ್ರಾಸ್ತ್ರಗಳು, ಹಣ ಪೂರೈಕೆಯಾಗುತ್ತದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

pahalgam Terror 4

ʻS1ʼ ಘಟಕದ ಸಿಬ್ಬಂದಿ ಮತ್ತು ತರಬೇತುದಾರರು ಎಲ್ಲಾ ರೀತಿ ಬಾಂಬ್‌ ಮತ್ತು ಸುಧಾರಿತ ಸ್ಫೋಟಕ ಸಾಧನ (IED) ತಯಾರಿಸುವಲ್ಲಿ ಪರಿಣಿತರಾಗಿರ್ತಾರೆ. ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ನಿರ್ವಹಣೆ ಮಾಡೋದ್ರಲ್ಲಿ ಎತ್ತಿದ ಕೈ ಆಗಿರ್ತಾರೆ. ಭಾರತದ ಬಹುತೇಕ ಸ್ಥಳಗಳ ನಕ್ಷೆಗಳನ್ನ ಈ ಘಟಕ ಹೊಂದಿದ್ದು, ಆಗಾಗ್ಗೆ ಉಗ್ರ ಕೃತ್ಯ ಎಸಗಲು ಸಂಚು ರೂಪಿಸುತ್ತಲೇ ಇರುತ್ತದೆ. ಅದಕ್ಕೆ ಬೇಕಾದ ರೀತಿಯಲ್ಲಿ ತರಬೇತಿ ನೀಡಿ ಭಯೋತ್ಪಾದಕರನ್ನ ತಯಾರಿಸುವಲ್ಲಿ ಈ ಘಟಕ ಸಕ್ರಿಯವಾಗಿದೆ. ಕಳೆದ 2 ದಶಕಗಳಲ್ಲಿ ಈ ಘಟಕವು ಸಾವಿರಾರು ಭಯೋತ್ಪಾದಕರಿಗೆ ತರಬೇತಿ ನೀಡಿದ್ದು, ಭಾರತಕ್ಕೂ ಕಳುಹಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಯಾವ್ಯಾವ ಉಗ್ರ ಸಂಘಟನೆಗಳು ಸಕ್ರೀಯ?
ಜಮ್ಮುವಿನ ವಿಸ್ತಾರ ಪ್ರದೇಶವನ್ನು ಪಾಕ್‌ ಮೂಲದ ಉಗ್ರರು ಈ ಹಿಂದೆಯೂ ಭಯೋತ್ಪಾದನಾ ಕೃತ್ಯಗಳಿಗೆ ಬಳಸಿದ್ದಾರೆ. ಸುರಂಗಗಳ ಮೂಲಕ ಉಗ್ರರು ದೇಶಕ್ಕೆ ನುಸುಳುತ್ತಿದ್ದು, ಡ್ರೋನ್‌ ಮೂಲಕ ಶಸ್ತ್ರಾಸ್ತ್ರಗಳನ್ನೂ ಸರಬರಾಜು ಮಾಡಿಕೊಳ್ಳುತ್ತಿದ್ದರು. ಅಲ್ಲದೇ ದೇಶದ ಗಡಿ ಭಾಗದಲ್ಲಿ ಹಿಂಸಾಚಾರ ಹೆಚ್ಚಿಸಲು ನಿಗೂಢ ಹತ್ಯೆ ಮಾಡುತ್ತಿದ್ದರು. ಈಗಲೂ ಅನೇಕ ಭಯೋತ್ಪಾದಕ ಗುಂಪುಗಳು ಗಡಿಯಾಚೆಗೆ ಸಕ್ರಿಯವಾಗಿವೆ. ಅದರಲ್ಲಿ ಟಿಆರ್‌ಎಫ್ ಪ್ರಮುಖವಾಗಿದೆ, ಇದನ್ನ ಜೈಶ್-ಎ-ಮೊಹಮ್ಮದ್‌ನ ಪ್ರಾಕ್ಸಿ ಎಂದು ಕರೆಯಲಾಗುತ್ತದೆ. ಇದರ ಹೊರತಾಗಿ ಜಮ್ಮು ಮತ್ತು ಕಾಶ್ಮೀರ ಘಜ್ವಾನಿ ಫೋರ್ಸ್, ಕಾಶ್ಮೀರ ಟೈಗರ್ಸ್ ಮತ್ತು ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ ಉಗ್ರ ಸಂಘಟನೆಗಳು ಸಕ್ರೀಯವಾಗಿವೆ. ಇವು ಆರ್ಟಿಕಲ್‌ 370 ರದ್ದಾದ ಬಳಿಕ ಅಸ್ತಿತ್ವಕ್ಕೆ ಬಂದಿವೆ.

TAGGED:Pahalgam Terrorist AttackpakistanS1 UnitTerror Attack In Indiaterroristsಪಹಲ್ಗಾಮ್‌ ಭಯೋತ್ಪಾದಕ ದಾಳಿಪಾಕಿಸ್ತಾನಭಾರತ
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

Commercial LPG Cylinder 19kg
Latest

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 993 ರೂ. ಏರಿಕೆ

Public TV
By Public TV
12 minutes ago
TUMBAIL 00000 00000
Latest

ಇಂದಿನಿಂದ ದೇಶದಲ್ಲಿ ಹೊಸ ಆನ್‌ಲೈನ್ ಗೇಮಿಂಗ್ ಕಾಯ್ದೆ ಜಾರಿ – ಏನಿದು ಹೊಸ ರೂಲ್ಸ್‌?

Public TV
By Public TV
20 minutes ago
RCB vs GT
Cricket

ಕೈಕೊಟ್ಟ ಬ್ಯಾಟರ್ಸ್‌, ಆರ್‌ಸಿಬಿಗೆ ಹೀನಾಯ ಸೋಲು – ಗುಜರಾತ್‌ಗೆ 4 ವಿಕೆಟ್‌ಗಳ ಅಮೋಘ ಜಯ

Public TV
By Public TV
8 hours ago
Heavy rains in Bengaluru Bowring Hospital wall collapses 6 dead
Bengaluru City

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ದುರಂತ – ಸಿಎಂ ಸೂಚನೆ ಬೆನ್ನಲ್ಲೇ ಇಬ್ಬರು ಇಂಜಿನಿಯರ್‌ ಅಮಾನತು

Public TV
By Public TV
8 hours ago
Cabinet Meet
Bengaluru City

ಬಿಡದಿ ಟೌನ್‌ಶಿಪ್‌ಗೆ 18,000 ಕೋಟಿ; ಬೆಂಗಳೂರು-ಬೀದರ್ ಮಧ್ಯೆ ಮತ್ತೆ ವಿಮಾನ ಯಾನಕ್ಕೆ ಸಂಪುಟ ಒಪ್ಪಿಗೆ

Public TV
By Public TV
9 hours ago
India GDP
Latest

ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶದ ಜಿಡಿಪಿ ಬೆಳವಣಿಗೆ ಅಪಾಯದಲ್ಲಿದೆ – ಕೇಂದ್ರ ಕಳವಳ

Public TV
By Public TV
10 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?