ಮೈಸೂರು: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ದೂರು ನೀಡಿರುವ ದೂರದಾರ ಸ್ನೇಹಮಯಿ ಕೃಷ್ಣ (Snehamayi Krisna) ವಿರುದ್ಧವೇ ನಿನ್ನೆ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ನಕಲಿ ದಾಖಲೆ ಸೃಷ್ಟಿ ಎಂಬ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ.
ಈ ಬಗ್ಗೆ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯಿಸಿದ್ದು, ನನ್ನ ವಿರುದ್ಧ ಕಾಂಗ್ರೆಸ್ ವಕ್ತಾರ ಸಲ್ಲಿಸಿರುವ ದೂರಿನಲ್ಲಿ ಹುರುಳಿಲ್ಲ. ನನಗೆ ಆ ಎಫ್‌ಐಆರ್‌ನಿಂದ ಸಂತೋಷವಾಗಿದೆ. ಸಿಎಂ ಹಾಗೂ ಸಿಎಂ ಪತ್ನಿ ಈಗ ದೇವರಾಜ ಪೊಲೀಸ್ ಠಾಣೆಗೂ ಬರಬೇಕಾಗುತ್ತದೆ. ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಖುದ್ದು ಸಿಎಂಗೆ ಸಂಕಷ್ಟ ಜಾಸ್ತಿ ಮಾಡ್ತಿದ್ದಾರೆ ಎಂದರು. ಇದನ್ನೂ ಓದಿ: ನಾನಾಗಿದ್ರೆ ಸಿದ್ದರಾಮಯ್ಯನ ಕಪಾಳಕ್ಕೆ ಹೊಡಿತಿದ್ದೆ : ಸಿಎಂ ವಿರುದ್ಧ ಅಭಿನವ ಸಂಗನಬಸವ ಶ್ರೀ ಕಿಡಿ
ನನ್ನ ದಾಖಲೆ ನಕಲಿ ಎಂಬುದಾದರೆ, ಸಿಎಂ ನನ್ನ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಿ. ಇದನ್ನು ಬಿಟ್ಟು ಜನರಿಗೆ ಪ್ರಚೋದನೆ ಕೊಡುವುದು ಸರಿಯಲ್ಲ ಎಂದಿದ್ದಾರೆ.
ನಾನು ಆರೋಪ ಮಾಡಿರುವುದು ಸಿಎಂ ಮತ್ತು ಅವರ ಪತ್ನಿ ವಿರುದ್ಧ. ಆದರೆ, ಅವರು ನನ್ನ ವಿರುದ್ಧ ದೂರು ಕೊಡುತ್ತಿಲ್ಲ. ಲಕ್ಷ್ಮಣ್ ಅವರು ಮಾಡ್ತಿದ್ದಾರೆ. ಇವರ ದೂರಿನ ಮೇಲೆ ನನಗೆ ಅನುಮಾನವಿದೆ. ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ನಿಲ್ಲಿಸಿ ಸಿದ್ದರಾಮಯ್ಯ ಅವರು ಸೋಲಿಸಿದ್ದಾರೆಂಬ ಬೇಸರಕ್ಕೆ ಈ ರೀತಿ ಮಾಡಿದ್ದಾರೆ. ಸ್ವತಃ ಸಿಎಂ ಅವರನ್ನೇ ಸಿಕ್ಕಿಹಾಕಿಸುವ ಪ್ಲ್ಯಾನ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆಗೆ ಕರಿಯ ಎಂದಿದ್ದ ಜಮೀರ್‌ಗೆ ಜೀವ ಬೆದರಿಕೆ – ಪುನೀತ್ ಕೆರೆಹಳ್ಳಿಗೆ 14 ದಿನ ನ್ಯಾಯಾಂಗ ಬಂಧನ
ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ವಿರುದ್ಧ ಸಿದ್ದರಾಮಯ್ಯ ಅವರು ಕ್ರಮ ತೆಗೆದುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚಿನ ಅಪಾಯ ಆಗಬಹುದು ಎಂದು ಎಚ್ಚರಿಸಿದ್ದಾರೆ.