ಬೆಂಗಳೂರು: ಹಣ ಸುಲಿಗೆ ಮಾಡುವುದಕ್ಕೆ ಜನ ಏನ್ ಬೇಕಾದರೂ ಮಾಡುತ್ತಾರೆ ಅನ್ನೋದಕ್ಕೆ ಈ ಸ್ಟೋರಿಯೇ ಸಾಕ್ಷಿ. ಕರೋಡ್‍ಪತಿ ಆಸೆ ತೋರಿಸಿ ನಕಲಿ ನಾಗಮಣಿಯನ್ನು ಮಾರುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾತ್ರೋರಾತ್ರಿ ಕರೋಡ್‍ಪತಿ ಆಗಬೇಕು ಅಂದರೆ ಮನೆಯಲ್ಲಿ ನಾಗಮಣಿ ಇಟ್ಟು ಪೂಜೆ ಮಾಡಬೇಕು ಎಂದು ಸುಳ್ಳು ಹೇಳಿ ಜನರಿಗೆ ಇಲ್ಲ ಸಲ್ಲದ ಆಸೆ ಹುಟ್ಟಿಸಿ ನಕಲಿ ನಾಗಮಣಿಯನ್ನು ಕೋಟ್ಯಂತರ ರೂಪಾಯಿಗೆ ಮಾರುತ್ತಿದ್ದ ಆರೋಪಿಗಳನ್ನ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ.
Advertisement
Advertisement
ಭಾನುವಾರ ರಾತ್ರಿ ಆರೋಪಿಗಳು ಇಸ್ಕಾನ್ ಬಳಿ ಇರುವ ಇಂದಿರಾ ಕ್ಯಾಂಟಿನ್ ಬಳಿ ಕಾರಿನಲ್ಲಿ ಕೂತು ಡೀಲ್ ಮಾಡುತ್ತಿದ್ದರು. ಆರೋಪಿಗಳ ವಂಚನೆಯ ಬಗ್ಗೆ ಮಾಹಿತಿ ತಿಳಿದ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಆರೋಪಿಗಳನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಕೃಷ್ಣಪ್ಪ, ಶಿವಣ್ಣ ಸೇರಿ ಮೂವರನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ನಕಲಿ ನಾಗಮಣಿ, ಹಾವು ಮತ್ತು ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.
Advertisement
ಆರೋಪಿಗಳು ನಕಲಿ ನಾಗಮಣಿಯ ಜೊತೆಯಲ್ಲಿ ಬೋ ಎಂಬ ಹೆಸರಿನ ಹಾವನ್ನು 30, 40 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು ಎಂದು ಎಸಿಪಿ ಧನಂಜಯ್ಯ ಹೇಳಿದ್ದಾರೆ.
Advertisement