ಚಿಕ್ಕಬಳ್ಳಾಪುರ: ಜೀವಂತ ಹಾವು (Snake) ಕೈಯಲ್ಲಿ ಹಿಡಿದು ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಇಶಾ ಫೌಂಡೇಶನ್ (Isha Foundation) ಸಂಸ್ಥಾಪಕ ಜಗ್ಗಿ ವಾಸುದೇವ್ (Jaggi Vasudev) ವಿರುದ್ಧ ಅರಣ್ಯಾಧಿಕಾರಿಗೆ ದೂರು ನೀಡಲಾಗಿತ್ತು. ಇದನ್ನು ಪಬ್ಲಿಕ್ ಟಿವಿ ಡಿಜಿಟಲ್‌ನಲ್ಲಿ ವರದಿ ಮಾಡಲಾಗಿದ್ದು, ಈ ಬಗ್ಗೆ ಇಶಾ ಫೌಂಡೇಶನ್ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದೆ.
ತಾಲೂಕಿನ ನರಸಿಂಹದೇವರ ಬೆಟ್ಟದ ತಪ್ಪಲಿನಲ್ಲಿರುವ ಇಶಾ ಕೇಂದ್ರದಲ್ಲಿ ನಾಗಮಂಟಪ ಪ್ರತಿಷ್ಠಾಪನೆ ಕಾರ್ಯಕ್ರಮದ ವೇಳೆ ಸಾವಿರಾರು ಜನರ ಮುಂದೆಯೇ ಜಗ್ಗಿ ವಾಸುದೇವ್ ಅವರು ಹಾವನ್ನು ಕೈಯಲ್ಲಿ ಹಿಡಿದು ಪ್ರದರ್ಶನ ಮಾಡಿದ್ದರು. ಈ ಬಗ್ಗೆ ಜಗ್ಗಿ ವಾಸುದೇವ್ ವಿರುದ್ಧ ಎಸ್‌ಪಿಸಿಎ ಸದಸ್ಯ ಹಾಗೂ ಉರಗರಕ್ಷಕ ಪ್ರಥ್ವಿರಾಜ್ ಚಿಕ್ಕಬಳ್ಳಾಪುರ ಜಿಲ್ಲಾ ಉಪ ಸಂರಕ್ಷಣಾಧಿಕಾರಿಗೆ ದೂರು ನೀಡಿದ್ದರು.
Advertisement
Advertisement
ಪಬ್ಲಿಕ್ ಟಿವಿ ವರದಿ ಹಿನ್ನೆಲೆ ಇಶಾ ಫೌಂಡೇಶನ್ ಕಡೆಯಿಂದ ಸ್ಪಷ್ಟನೆ ನೀಡಲಾಗಿದೆ. ಟ್ವಿಟರ್ ಮೂಲಕ ಪಬ್ಲಿಕ್ ಟಿವಿ ಟ್ವಿಟರ್ ಖಾತೆಗೆ ಮಾಧ್ಯಮ ಪ್ರಕಟಣೆಯನ್ನು ಇಶಾ ಫೌಂಡೇಶನ್ ಟ್ಯಾಗ್ ಮಾಡಿದೆ. ಮಾಧ್ಯಮ ಪ್ರಕಟಣೆಯಲ್ಲಿ ಹಾವನ್ನು ಹಿಡಿದು ಪ್ರದರ್ಶನ ಮಾಡಿರುವ ಬಗೆಗಿನ ಅಸಲಿ ವಿಚಾರವನ್ನು ಸವಿಸ್ತಾರವಾಗಿ ವಿವರಿಸಲಾಗಿದೆ. ಇದನ್ನೂ ಓದಿ: ಹಾವು ಹಿಡಿದು ಪ್ರದರ್ಶನ – ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ಅರಣ್ಯಾಧಿಕಾರಿಗೆ ದೂರು
Advertisement
Advertisement
ಟ್ವೀಟ್‌ನಲ್ಲೇನಿದೆ?
ಹಾವಿಗೆ ತೊಂದರೆ ಕೊಟ್ಟಿದ್ದಾರೆ ಎಂಬುದು ತಪ್ಪು ಮಾಹಿತಿಯಿಂದ ಕೂಡಿರುವ ದೂರಾಗಿದೆ. ನಾಗಮಂಟಪ ಪ್ರತಿಷ್ಠಾಪನೆ ವೇಳೆ ಸ್ವತಃ ಹಾವೇ ಇಶಾ ಯೋಗ ಕೇಂದ್ರದ ಸಮೀಪ ಆಗಮಿಸಿತ್ತು. ಹಾವಿನ ಹಾಗೂ ಜನರ ಸುರಕ್ಷತೆಯ ಹಿತದೃಷ್ಟಿಯಿಂದ ಹಾವನ್ನು ರಕ್ಷಣೆ ಮಾಡಲಾಗಿದೆ ಹೊರತು, ಹಾನಿ ಮಾಡಿಲ್ಲ. ಇದನ್ನೂ ಓದಿ: ಅಪ್ಪು ಅಭಿಮಾನಿಗಳಿಂದ ಆವಲಬೆಟ್ಟಕ್ಕೆ `ಗಂಧದಗುಡಿ ರೈಡ್’ – ಆಲದ ಗಿಡ ನೆಟ್ಟು ಪುನೀತ್ ನಾಮಕರಣ
A snake entered at Chikkaballapur during Naga Pratishtha. For the snake’s & people’s safety, Sadhguru handled it gently & asked it be left safely in a nearby forest. It was neither trapped/transported/ harmed in any way.Police at the venue were aware of the incident.#PressRelease pic.twitter.com/aaVD8cBQWz
— Isha Foundation (@ishafoundation) October 16, 2022
ಸ್ವಯಂ ಸೇವಕರೊಬ್ಬರು ಹಾವು ಆಗಮಿಸಿರುವ ಬಗ್ಗೆ ಸದ್ಗುರುಗಳ ಗಮನಕ್ಕೆ ತಂದಿದ್ದರು. ದೂರಿನಲ್ಲಿ ಉಲ್ಲೇಖಿಸಿರುವಂತೆ ಹಾವಿಗೆ ಯಾವುದೇ ರೀತಿಯ ಹಾನಿ ಮಾಡಲಾಗಿಲ್ಲ. ಮೃದುವಾಗಿ ಹಾವು ಹಿಡಿದು ಕಾಡಿನೊಳಗೆ ಬಿಡಲಾಗಿದೆ ಎಂದು ಇಶಾ ಫೌಂಡೇಶನ್ ಸ್ಪಷ್ಟನೆ ನೀಡಿದೆ.