ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ನಗರದ ಸೊಂಡೇಕೊಪ್ಪ ರಸ್ತೆಯಲ್ಲಿ ನಾಗರ ಹಾವೊಂದು ರಸ್ತೆ ಬದಿ ನಿಂತಿದ್ದ ಸ್ಕೂಟರ್ ಒಳಗೆ ಸೇರಿಕೊಂಡು ಕೆಲ ಕಾಲ ಆತಂಕ ಮೂಡಿಸಿತ್ತು.
Advertisement
ಬಿಸಿಲಿನ ತಾಪಕ್ಕೆ ರಸ್ತೆಯಲ್ಲಿ ಹೋಗಲಾರದೇ ರಸ್ತೆ ಬದಿ ನಿಂತಿದ್ದ ಡಿಯೋ ಬೈಕ್ ಮುಂಭಾಗ ಸೇರಿದ ನಾಗರ ಹಾವು ಹೆಡ್ ಲೈಟ್ ಬಳಿ ಸೇರಿ ಶಬ್ಧ ಮಾಡಲು ಶುರುಮಾಡಿತ್ತು. ಈ ಸ್ಕೂಟರ್ ಒಳಗೆ ಸೇರಿದ್ದ ಹಾವನ್ನು ನೋಡಲು ಸೊಂಡೇಕೊಪ್ಪ ರಸ್ತೆಯಲ್ಲಿ ಸಂಚರಿಸುತ್ತಿದ್ದ ದಾರಿಹೋಕರು ಮುಗಿಬಿದ್ದಿದ್ದರು.
Advertisement
Advertisement
ನಂತರ ವಿಷಯ ತಿಳಿದು ಸ್ಥಳಕ್ಕೆ ಬಂದ ಉರಗ ತಜ್ಞ ಅರುಣ್ ಸ್ಕೂಟರ್ ಒಳಗೆ ಸೇರಿಕೊಂಡಿದ್ದ ನಾಗರ ಹಾವಿಗೆ ಯಾವುದೇ ತೊಂದರೆಯಾಗದಂತೆ ಸುಮಾರು ಅರ್ಧ ಗಂಟೆ ಕಾಲ ಎಚ್ಚರವಹಿಸಿ ಹಾವನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಕಳಪೆ ಗುಣಮಟ್ಟದ ಆಹಾರ ನೀಡಿದ್ದಕ್ಕೆ ಕೇಟರರ್ಸ್‍ಗೆ ಶಿವಸೇನೆ ಶಾಸಕನಿಂದ ಕಪಾಳಮೋಕ್ಷ
Advertisement
ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ನಾಗರ ಹಾವು ಈ ಸ್ಕೂಟರ್‌ನಲ್ಲಿ ಆಶ್ರಯ ಪಡೆದಿದೆ ಎಂದು ತಿಳಿಸಿದ ಉರಗ ತಜ್ಞ ಅರುಣ್ ಸಾರ್ವಜನಿಕರು ವಾಹನ ರಸ್ತೆ ಬದಿ ನಿಲ್ಲಿಸುವಾಗ ಎಚ್ಚರವಹಿಸುವಂತೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ತಿಲಕ ಇಟ್ಟುಕೊಂಡಿದ್ದಕ್ಕೇ ಚಾಕು ಇರಿತ – ಶಿವಮೊಗ್ಗ ಪ್ರಕರಣಕ್ಕೆ ಟ್ವಿಸ್ಟ್