LatestMain PostNational

ಕಳಪೆ ಗುಣಮಟ್ಟದ ಆಹಾರ ನೀಡಿದ್ದಕ್ಕೆ ಕೇಟರರ್ಸ್‍ಗೆ ಶಿವಸೇನೆ ಶಾಸಕನಿಂದ ಕಪಾಳಮೋಕ್ಷ

ಮುಂಬೈ: ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಳಪೆ ಗುಣಮಟ್ಟದ ಆಹಾರ ನೀಡಿದ್ದಕ್ಕೆ ಏಕನಾಥ್ ಶಿಂಧೆ ಬಣದ ಶಿವಸೇನೆ ಶಾಸಕ ಸಂತೋಷ್ ಬಂಗಾರ್ ಅವರು ಕೇಟರಿಂಗ್ ಕಂಪನಿ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂತೋಷ್ ಬಂಗಾರ್ ಅವರು, ಕಾರ್ಮಿಕರಿಗೆ ಗುತ್ತಿಗೆದಾರರು ನೀಡುತ್ತಿರುವ ಆಹಾರ ಕಳಪೆ ಗುಣಮಟ್ಟದಾಗಿದೆ. ಅಲ್ಲದೇ ಅವರು ನೀಡುತ್ತಿರುವ ಆಹಾರದಲ್ಲಿ ನೊಣಗಳು ಕಂಡು ಬಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೊಂದು ವಿವಾದ – ಮಾಣಿಕ್ ಷಾ ಮೈದಾನದ ದ್ವಾರಗಳ ಮೇಲಿದ್ದ ಟಿಪ್ಪು, ಚೆನ್ನಮ್ಮ ಹೆಸರಿಗೆ ಬಣ್ಣ!

ಸಂತೋಷ್ ಬಂಗಾರ್ ಅವರು ಮಹಾರಾಷ್ಟ್ರದ ಕಳಮ್ನೂರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಆರಂಭದಲ್ಲಿ ಬಂಗಾರ್ ಉದ್ಧವ್ ಠಾಕ್ರೆ ಪಾಳಯದಲ್ಲಿದ್ದರು. ಆದರೆ ವಿಶ್ವಾಸ ಮತದ ವೇಳೆ ಏಕನಾಥ್ ಶಿಂಧೆ ಅವರ ಬಣಕ್ಕೆ ಹಾರಿದರು. ಇದೀಗ ಕೇಟರಿಂಗ್ ಕಂಪನಿ ಮ್ಯಾನೇಜರ್‌ಗೆ ಸಂತೋಷ್ ಬಂಗಾರ್ ಅವರು ಕಪಾಳಮೋಕ್ಷ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಗುಜರಾತ್‌ನ 6 ಕೈ ಶಾಸಕರು ಶೀಘ್ರವೇ ಬಿಜೆಪಿಗೆ ಸೇರ್ಪಡೆ

Live Tv

Leave a Reply

Your email address will not be published.

Back to top button