ಬೆಂಗಳೂರು: ನಗರದ ಹೊರವಲಯ ನೆಲಮಂಗಲ ಪಟ್ಟಣದ ಹೊನ್ನಗಂಗಯ್ಯನ ಪಾಳ್ಯದಲ್ಲಿರುವ ಡಾ.ವಿಷ್ಣುವರ್ಧನ್ ಕಂಚಿನ ಪುತ್ಥಳಿಯಲ್ಲಿ ನಾಗರಹಾವೊಂದು ಪ್ರತ್ಯಕ್ಷ್ಯ ವಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.
ವಿಷ್ಣು ಅಭಿಮಾನಿಗಳು ಕಂಚಿನ ಪುತ್ಥಳಿ ಇರುವ ಮಂದಿರದಲ್ಲಿ ಇಂದು ಬೆಳಗ್ಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಈ ಸಂಧರ್ಭದಲ್ಲಿ ಐದೂವರೆ ಅಡಿ ಉದ್ದದ 8 ರಿಂದ 9 ವರ್ಷದ ದೈತ್ಯ ನಾಗರಹಾವು ಪ್ರತ್ಯಕ್ಷ್ಯವಾಗಿದೆ. ಈ ವೇಳೆ ಆತಂಕಗೊಂಡ ಸ್ಥಳೀಯರು ಉರಗ ರಕ್ಷಕರಿಗೆ ದೂರವಾಣಿ ಕೆರೆ ಮಾಡಿದ್ದು, ಸ್ಥಳಕ್ಕೆ ಬಂದ ಸ್ನೇಕ್ ಲೋಕೇಶ್ ಅವರು ಹಾವನ್ನ ರಕ್ಷಣೆ ಮಾಡಿದ್ದರೆ.
Advertisement
ನೆಲಮಂಗಲ ಪಟ್ಟಣದ ಹೊನ್ನಗಂಗಯ್ಯನ ಪಾಳ್ಯದಲ್ಲಿ ಅಭಿಮಾನಿಗಳು ಡಾ.ವಿಷ್ಣುವರ್ಧನ್ ಸೇವಾ ಸಮಿತಿ ಎಂಬ ಸಂಘವನ್ನ ನಿರ್ಮಾಣ ಮಾಡಿಕೊಂಡು ಕಂಚಿನ ಪುತ್ಥಳಿಯ ಮಂದಿರವನ್ನ ಕಳೆದ ಐದು ವರ್ಷದ ಹಿಂದೆಯೇ ನಿರ್ಮಿಸಿದ್ದರು. ಸೋಮವಾರ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 68ನೇ ಹುಟ್ಟು ಹಬ್ಬವಿದ್ದು, ಈ ನಾಗರಹಾವು ಪ್ರತ್ಯಕ್ಷ್ಯದಿಂದ ಸ್ಥಳೀಯರಲ್ಲಿ ಹಾಗೂ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
Advertisement
ಇದೇ ರೀತಿ ಈ ಪುತ್ಥಳಿಯ ಬಳಿ ನಾಲ್ಕೈದು ಬಾರಿ ನಾಗರಹಾವುಗಳು ಕಾಣಿಸಿಕೊಂಡಿವೆ. ಪೊದೆ ಹಾಗೂ ಹುತ್ತಗಳು ಇರುವ ಕಾರಣದಿಂದ ಉರಗಗಳು ಸರ್ವೇ ಸಾಮನ್ಯವಾಗಿ ಕಾಣಿಸುತ್ತವೆ ಎಂದು ಉರಗ ರಕ್ಷಕ ಸ್ನೇಕ್ ಲೋಕೇಶ್ ತಿಳಿಸಿದ್ದಾರೆ.