ತಿರುವನಂತಪುರಂ: ಹಾವುಗಳು ಚಿಕ್ಕ ಸ್ಥಳ ಸಿಕ್ಕರೂ ಸಾಕು ಸೇರಿಕೊಳ್ಳುತ್ತವೆ. ಬೈಕ್, ಕಾರ್ ಡಿಕ್ಕಿ, ಗ್ಯಾಸ್ ಸಿಲಿಂಡರ್ ಕೆಳಗೆ, ಶೂಗಳಲ್ಲಿ ಹೀಗೆ ಹಾವುಗಳು ಎಲ್ಲೆಂದರಲ್ಲಿ ಸೇರಿಕೊಳ್ಳುತ್ತವೆ. ಇದೀಗ ಕೇರಳದ ಕಣ್ಣೂರಿನ ಮತಗಟ್ಟೆಯ ವಿವಿ ಪ್ಯಾಟ್‍ನಲ್ಲಿ ಹಾವು ಸೇರಿಕೊಂಡು ಕೆಲಕಾಲ ಆತಂಕದ ವಾತಾವರಣ ಸೃಷ್ಟಿ ಮಾಡಿತ್ತು.
ಕಣ್ಣೂರು ಲೋಕಸಭಾ ಕ್ಷೇತ್ರದ ಮಯ್ಯಿಲ್ ಕಂದಕ್ಕಯಿ ನಿರ್ವಾಚನದ ಬೂತ್ ನಲ್ಲಿ ಇಂದು ಬೆಳಗ್ಗೆ ವಿವಿ ಪ್ಯಾಟ್ ತೆರೆಯುತ್ತಿದ್ದಂತೆ ಚಿಕ್ಕ ಹಾವು ಕಾಣಿಸಿಕೊಂಡಿತ್ತು. ಕೂಡಲೇ ಚುನಾವಣಾ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಹಾವನ್ನು ಓಡಿಸಿ ಮತದಾನಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
Advertisement
Advertisement
ಕನ್ನೂರು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದೆ ಪಿ.ಕೆ.ಶ್ರೀಮತಿ (ಸಿಪಿಐ+ಎಲ್‍ಡಿಎಫ್) ಮತ್ತು ಕೆ.ಸುರೇಂದ್ರನ್ (ಕಾಂಗ್ರೆಸ್+ಯುಡಿಎಫ್) ಸ್ಪರ್ಧೆ ಮಾಡಿದ್ದಾರೆ. ಕೇರಳದ ಎಲ್ಲ 20 ಲೋಕಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.