ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಯುಪಿ ವಾರಿಯರ್ಸ್ ಹಾಗೂ ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಆರ್‌ಸಿಬಿ 23 ರನ್‌ಗಳ ಭರ್ಜರಿ ಜಯ ಗಳಿಸಿದೆ.
ಆರ್‌ಸಿಬಿ ನೀಡಿದ್ದ 199 ರನ್‌ಗಳ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್‌ಗೆ 20 ಓವರ್‌ಗಳಲ್ಲಿ 175 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಇದನ್ನೂ ಓದಿ: ಸ್ಮೃತಿ, ಪೆರ್ರಿ ಸ್ಫೋಟಕ ಫಿಫ್ಟಿ; ಆರ್‌ಸಿಬಿ ಅಬ್ಬರಕ್ಕೆ ಸುಸ್ತಾದ ವಾರಿಯರ್ಸ್ – ಯುಪಿ ಗೆಲುವಿಗೆ 199 ರನ್‌ಗಳ ಗುರಿ
Advertisement
Advertisement
ಉತ್ತರಪ್ರದೇಶದ ಪರ ಅಲಿಸ್ಸಾ ಹೀಲಿ 38 ಎಸೆತಗಳಿಗೆ 7 ಫೋರ್ ಹಾಗೂ 3 ಸಿಕ್ಸ್ ಸೇರಿ 55 ರನ್‌ಗಳಿಸಿದರು. ಕಿರಣ್ ನವಿಗೆರೆ 11 ಎಸೆತಗಳಿಗೆ 18 ರನ್ ಕಲೆಹಾಕಿದರು. ಉಳಿದಂತೆ ಚಾಮರಿ ಅಥಾಪತ್ತು 8, ಗ್ರೇಸ್ ಹ್ಯಾರೀಸ್ 5, ಶ್ವೇತಾ ಶೆರಾವತ್ 1, ದೀಪ್ತಿ ಶರ್ಮಾ 33, ಪೂನಮ್ ಕೆಮ್ನಾರ್ 31, ಸೋಫಿ ಎಕ್ಲೆಸ್ಟೋನ್ 4 ಹಾಗೂ ಅಂಜಲಿ ಸರ್ವಾಣಿ 3 ರನ್ ಗಳಿಸಿದರು.
Advertisement
Advertisement
ಆರ್‌ಸಿಬಿ ಪರ ಬ್ಯಾಟ್ ಬೀಸಿದ್ದ ನಾಯಕಿ ಸ್ಮೃತಿ ಮಂಧಾನ ಹಾಗೂ ಎಲ್ಲಿಸ್ ಪೆರ‍್ರಿ ಅವರ ಸ್ಫೋಟಕ ಅರ್ಧಶತಕದೊಂದಿಗೆ ಆರ್‌ಸಿಬಿ ನಿಗದಿತ ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ ರನ್ ಗಳಿಸಿತ್ತು. ಈ ಮೂಲಕ ಎದುರಾಳಿ ತಂಡದ ಗೆಲುವಿಗೆ 199 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿತ್ತು. ಇದನ್ನೂ ಓದಿ: T20 World Cup: ಅಬ್ಬಬ್ಬಾ! ಇಂಡೋ-ಪಾಕ್ ಪಂದ್ಯದ ಟಿಕೆಟ್ ಬೆಲೆ ಕೇಳಿದ್ರೆ ಎದೆಬಡಿತ ಜೋರಾಗುತ್ತೆ