ಸಿಡ್ನಿ: ಪುರುಷರ ಪಿಂಕ್ ಬಾಲ್ ಟೆಸ್ಟ್ ಕ್ರಿಕೆಟ್‍ನಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಮೊದಲ ಭಾರತೀಯ ಬ್ಯಾಟ್ಸ್‌ಮ್ಯಾನ್ ಆದರೆ, ಇದೀಗ ಮಹಿಳಾ ಕ್ರಿಕೆಟ್‍ನಲ್ಲಿ ಸ್ಮೃತಿ ಮಂಧಾನ ಪಿಂಕ್‍ಬಾಲ್ ಟೆಸ್ಟ್‌ನಲ್ಲಿ ಮೊದಲ ಶತಕ ಸಿಡಿಸಿದ ಭಾರತದ ಮಹಿಳಾ ಬ್ಯಾಟರ್ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.
Advertisement
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ತನ್ನ ಮೊದಲ ಪಿಂಕ್‍ಬಾಲ್ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ತನ್ನ ಮೊದಲ ಟೆಸ್ಟ್ ಶತಕ 127ರನ್(216 ಎಸೆತ, 22 ಬೌಂಡರಿ, 1 ಸಿಕ್ಸ್) ಬಾರಿಸಿ ಆಸ್ಟ್ರೇಲಿಯಾ ನೆಲದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ್ತಿಯಾಗಿ ಮಿಂಚಿದ್ದಾರೆ. ಈ ಮೂಲಕ ಮಂಧಾನ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದ ಭಾರತದ ಎರಡನೇ ಮಹಿಳಾ ಅಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಮೊದಲು 1984ರಲ್ಲಿ ಸಂಧ್ಯಾ ಅಗರ್ವಾಲ್ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದ್ದರು, ಬಳಿಕ ಇದೀಗ ಮಂಧಾನ ಶತಕ ಸಿಡಿಸಿ ಮಿಂಚಿದ್ದಾರೆ. ಇದನ್ನೂ ಓದಿ: 14ನೇ ಐಪಿಎಲ್‍ಗೆ ಗುಡ್‍ಬೈ ಹೇಳಿದ ಗೇಲ್
Advertisement
Advertisement
ಪುರಷರ ವಿಭಾಗದ ಕ್ರಿಕೆಟ್‍ನಲ್ಲಿ 18 ನಂಬರ್ ಜೆರ್ಸಿಧಾರಿ ವಿರಾಟ್ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಮೊದಲ ಶತಕ ಸಿಡಿಸಿದ್ದರೆ, ಕಾಕತಾಳಿಯವೆಂಬಂತೆ ಮಹಿಳಾ ಕ್ರಿಕೆಟ್‍ನಲ್ಲಿ 18 ನಂಬರ್ ಜೆರ್ಸಿ ತೊಡುವ ಸ್ಮೃತಿ ಮಂಧಾನ ಆಸ್ಟ್ರೇಲಿಯಾ ವಿರುದ್ಧ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಮೊದಲ ಶತಕ ಸಿಡಿಸಿ ಮೆರೆದಿದ್ದಾರೆ. ಇದನ್ನೂ ಓದಿ: ಆರ್ಸಿಬಿಗೆ ಹರ್ಷ ತಂದ ಅನ್ಕ್ಯಾಪ್ಡ್ ಪ್ಲೇಯರ್
Advertisement
???? to Smriti Mandhana!
A brilliant century coming off 170 deliveries, with 18 fours and one six #AUSvIND pic.twitter.com/NiVLlgQ4UQ
— 7Cricket (@7Cricket) October 1, 2021
ಭಾರತದ ಪುರುಷರ ತಂಡದಲ್ಲಿ ವಿರಾಟ್ ಕೊಹ್ಲಿ ರನ್ ಮೆಷಿನ್ ಆಗಿ ಗುರುತಿಸಿಕೊಂಡರೆ, ಮಹಿಳಾ ಕ್ರಿಕೆಟ್‍ನಲ್ಲಿ ಸ್ಮೃತಿ ಮಂಧಾನ ರನ್ ಮೆಷಿನ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಇಬ್ಬರೂ ಕೂಡ ಸ್ಟೈಲಿಷ್ಟ್ ಬ್ಯಾಟರ್ ಗಳಾಗಿದ್ದು, ಭಾರತಕ್ಕಾಗಿ ಇನ್ನಷ್ಟು ರನ್ ಸಿಡಿಸಿ ದಾಖಲೆಗಳ ಒಡೆಯರಾಗಲಿ ಎಂಬುದು ಅಭಿಮಾನಿಗಳ ಆಶಯ.