ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಗೋವಾದಲ್ಲಿ ಅಕ್ರಮ ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿ, ಸ್ಮೃತಿ ಇರಾನಿ ಅವರನ್ನು ತಮ್ಮ ಸ್ಥಾನದಿಂದ ವಜಾ ಗೊಳಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶನಿವಾರ ಕಾಂಗ್ರೆಸ್ ಒತ್ತಾಯಿಸಿದೆ.
ಕಾಂಗ್ರೆಸ್ ವಕ್ತಾರ ಪವನ್ ಖೇರಾ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಇರಾನಿ ಅವರ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಅವರ ಮಗಳು ಗೋವಾದಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ನಕಲಿ ಪರವಾನಗಿ ಮೇಲೆ ಬಾರ್ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
Advertisement
Advertisement
ಸ್ಮೃತಿ ಇರಾನಿ ಅವರ ಮಗಳ ಪರವಾನಗಿಯು ಮೇ 2021 ರಲ್ಲಿ ನಿಧನರಾದ ವ್ಯಕ್ತಿಯ ಹೆಸರಿನಲ್ಲಿದೆ. ಆ ಪರವಾನಗಿಯನ್ನು 2022 ರ ಜೂನ್‌ನಲ್ಲಿ ಗೋವಾದಲ್ಲಿ ತೆಗೆದುಕೊಳ್ಳಲಾಗಿದೆ. ಆದರೆ ಪರವಾನಗಿಯಲ್ಲಿರುವ ಹೆಸರಿನ ವ್ಯಕ್ತಿ 13 ತಿಂಗಳ ಹಿಂದೆ ಸಾವನ್ನಪ್ಪಿದ್ದಾರೆ. ಇದು ಕಾನೂನುಬಾಹಿರ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕಸ ಹಾಕಿದ್ದಕ್ಕೆ ಸಿಎಂ ನಿವಾಸಕ್ಕೆ 10,000 ರೂ. ದಂಡ ವಿಧಿಸಿದ ಕಾರ್ಪೊರೇಷನ್
Advertisement
ಸ್ಮೃತಿ ಇರಾನಿ ಅವರ ಪುತ್ರಿ ಕಿರಾತ್ ನಾಗ್ರಾ ಗೋವಾದಲ್ಲಿ ಅಕ್ರಮ ಬಾರ್ ಹೊಂದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿದ್ದರೂ ಅವರ ಪರ ವಕೀಲರು ಇದು ಸುಳ್ಳು ಆರೋಪ ಎಂದು ಹೇಳಿಕೆ ನೀಡಿದ್ದಾರೆ.
Advertisement
ಕಿರಾತ್ ನಾಗ್ರಾ ಅವರ ಪರ ವಕೀಲರ ಪ್ರಕಾರ, ಈ ಆರೋಪ ಆಧಾರರಹಿತವಾದುದು. ನಿಜ ವಿಷಯವನ್ನು ತಿಳಿಯದೇ ನಾಗ್ರಾ ಅವರು ಒಬ್ಬ ಪ್ರಭಾವಿ ವ್ಯಕ್ತಿಯ ಮಗಳು ಎಂಬ ಕಾರಣಕ್ಕೆ ಇಂತಹ ಸುಳ್ಳು ಸುದ್ದಿ ಪ್ರಚಾರಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಮಾನದಲ್ಲಿದ್ದ ಪ್ರಯಾಣಿಕನ ಜೀವ ಉಳಿಸಿದ ತೆಲಂಗಾಣ ರಾಜ್ಯಪಾಲ
ಕಿರಾತ್ ನಾಗ್ರಾ ಗೊವಾದಲ್ಲಿರುವ ಸಿಲ್ಲಿ ಸೌಲ್ಸ್ ರೆಸ್ಟೋರೆಂಟ್‌ನ ಮಾಲಕಿ ಅಥವಾ ನಿರ್ವಾಹಕಿ ಆಗಿಲ್ಲ. ಅವರು ಈ ಬಗೆಗಿನ ವಿಚಾರದಲ್ಲಿ ಯಾವುದೇ ಪ್ರಾಧಿಕಾರದಿಂದಲೂ ಶೋಕಾಸ್ ನೋಟಿಸ್ ಅನ್ನು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.