ಮಂಡ್ಯದವರಾದ (Mandya) ಎಸ್‌ಎಂ ಕೃಷ್ಣ (SM Krishna) ಅವರು ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೂಡುಮಲ್ಲಿಗೆ ಗ್ರಾಮದ ಪ್ರೇಮಾ ಅವರನ್ನು 1966 ಏ.29 ರಂದು ವಿವಾಹವಾದರು. ಆದರೆ ಎಸ್‌ಎಂಕೆ ಅವರು ಮದುವೆಗೂ ಮುನ್ನ ಭಾವಿ ಪತ್ನಿಯ ಸಂದರ್ಶನ ಮಾಡಿದ್ದರು.ಇದನ್ನೂ ಓದಿ: ತಿಮ್ಮಪ್ಪನ ಹುಂಡಿಗೆ ವಾಚ್ ಹಾಕಿ ಬಂದ ಮೇಲೆ ಕೇಂದ್ರಮಂತ್ರಿಯಾಗಿದ್ದ ಎಸ್‌ಎಂಕೆ!
Advertisement
ಮೊದಲ ಬಾರಿಗೆ ಪ್ರೇಮಾ ಅವರನ್ನು ನೋಡಲು ಬಂದಾಗ, ಎಸ್‌ಎಂಕೆ ಕೇವಲ ಅವರನ್ನು ನೋಡಲು ಬಂದಿಲ್ಲ ನಾನು ಅವರ ಜೊತೆ ಮಾತನಾಡಬೇಕು ಎಂದು ಹೆಣ್ಣಿನ ಕುಟುಂಬಕ್ಕೆ ತಿಳಿಸಿದ್ದರು. ಅನುಮತಿ ಪಡೆದು ಬಳಿಕ ಅವರೊಟ್ಟಿಗೆ ಮಾತನಾಡಿದ್ದರು. ತಾವು ಏನು ಓದಿದ್ದೀರಿ? ಯಾವ ಪುಸ್ತಕ ಓದಿದ್ದೀರಿ? ನಾನು ಎಂಎಲ್‌ಎ ಅಂತಾ ಗೊತ್ತಾ? ಅದರಲ್ಲೂ ವಿರೋಧಪಕ್ಷದ ಎಂಎಲ್‌ಎ ಎಂಬುದು ಗೊತ್ತಾ? ಹೀಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಆ ಸಮಯದಲ್ಲಿಯೇ ಪ್ರೇಮಾ ಅವರೂ ಕೂಡ ಅಷ್ಟೇ ಬೋಲ್ಡ್ ಆಗಿ ಉತ್ತರ ನೀಡಿದ್ದರು. ತಮ್ಮ ವಿಚಾರವನ್ನು ಪೇಪರ್‌ನಲ್ಲಿ ಓದಿದ್ದೇನೆ. ತಮ್ಮ ಭಾಷಣಗಳಿಂದ ತಮ್ಮ ಬಗ್ಗೆ ಅಭಿಮಾನ ಹೊಂದಿರುವುದಾಗಿಯೂ ಪ್ರತಿಕ್ರಿಯಿಸಿದ್ದರು.
Advertisement
Advertisement
ಆಗ ಕೃಷ್ಣ ಅವರು ತಾವು ವಿರೋಧ ಪಕ್ಷದಲ್ಲಿರುವುದಾಗಿ ತಿಳಿಸಿ, ಹೋರಾಟವೇ ನನ್ನ ಮುಖ್ಯ ಗುರಿಯಾಗಿದೆ. ಜೀವನದಲ್ಲಿ ಸುಖ ಎನ್ನುವುದನ್ನು ನೀವು ಯಾವ ಪ್ರಮಾಣದಲ್ಲಿ ಬಯಸುವಿರೋ ಅದು ನಿಮಗೆ ಸಿಗದೇ ಹೋಗಬಹುದು. ನಾನು ಸದಾ ಹೋರಾಟದ ಗುಂಗಿನಲ್ಲೇ ಇರುತ್ತೇನೆ. ನಮ್ಮ ಸಂಸಾರದ ವಿಚಾರಗಳು ಅಪ್ರಸ್ತುತ ಆಗಬಹುದು. ಕೆಲವು ಬಾರಿ ಜೈಲಿಗೂ ಹೋಗಬಹುದು. ಇದನ್ನೆಲ್ಲಾ ಯೋಚನೆ ಮಾಡಿ ನನ್ನ ಜೊತೆ ಬಾಳ್ವೆ ನಡೆಸಬೇಕಾಗುತ್ತದೆ ಎಂದು ಹೇಳಿ, ನೀವು ಇದಕ್ಕೆಲ್ಲಾ ಸಿದ್ಧರಿದ್ದೀರಾ ಎಂದು ಪ್ರಶ್ನೆ ಮಾಡಿದ್ದರಂತೆ. ಕೃಷ್ಣ ಅವರಿಗೆ ಮನಸೋತಿದ್ದ ಪ್ರೇಮಾ ಅವರು ಎಲ್ಲಾ ಪ್ರಶ್ನೆಗಳಿಗೂ ಸಮರ್ಥವಾಗಿ ಉತ್ತರ ನೀಡಿದರು. ಮುಂದೆ ಪ್ರೇಮಾ ಕೃಷ್ಣ (Prema Krishna) ಅವರು ಕೃಷ್ಣರವರ ರಾಜಕೀಯ ಜೀವನದಲ್ಲಿ ಬೆಂಗಾವಲಾಗಿ ನಿಂತಿದ್ದು ಇತಿಹಾಸವೇ ಹೌದು.ಇದನ್ನೂ ಓದಿ: ಇಂದು ಸಂಜೆ ಹುಟ್ಟೂರಿನಲ್ಲಿ ಎಸ್‌ಎಂಕೆ ಅಂತ್ಯಕ್ರಿಯೆ – ಏನೇನು ಸಿದ್ಧತೆ ನಡೆದಿದೆ?