ರಾಯಚೂರು: ಜಿಲ್ಲೆಯ ಮಸ್ಕಿ ಪಟ್ಟಣದ (Maski City) ಸ್ಲಂ ನಿವಾಸಿಗಳಿಗೆ (Slum People) ವಕ್ಫ್ ಬಿಸಿ ತಟ್ಟಿದ್ದು, ಇಲ್ಲಿನ ಕುಟುಂಬಗಳಿಗೆ ಸೇರಬೇಕಾದ ಹಕ್ಕುಪತ್ರಗಳು ಇನ್ನೂ ಅವರ ಕೈ ಸೇರುತ್ತಿಲ್ಲ.
ವಸತಿ ಇಲಾಖೆ ಹಾಗು ಸ್ಲಂ ಬೋರ್ಡ್ (Karnataka Slum Development Board) ನಿಗದಿಪಡಿಸಿದ್ದ 263 ಕುಟುಂಬಗಳ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಸಚಿವ ಜಮೀರ್ ಅಹ್ಮದ್ (Zameer Ahmed) ಮೌಖಿಕ ಸೂಚನೆಯಿಂದ ರದ್ದಾಗಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: Mandya | ರೈತರ ಜಮೀನು, ಹಿಂದೂ ದೇಗುಲ ಮಾತ್ರವಲ್ಲ ಸರ್ಕಾರಿ ಶಾಲೆಯೂ ವಕ್ಫ್ ಆಸ್ತಿ!
ಜುಲೈ 29 ರಂದು ಹಕ್ಕು ಪತ್ರ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಈ ಕಾರ್ಯಕ್ರಮ ಹಕ್ಕುಪತ್ರ ಹಂಚಿಕೆಯಾಗಿಲ್ಲ. ಸರ್ವೆ ನಂ 7/1 ರ 7 ಎಕರೆ ಪ್ರದೇಶದಲ್ಲಿ 300ಕ್ಕೂ ಅಧಿಕ ಬಡ ಕುಟುಂಬಗಳು ವಾಸವಾಗಿವೆ. ಈ ಭೂಮಿಯನ್ನು ಭೂ ಮಾಲೀಕ ಸಾಜೀದ್ ಸಾಬ್ ಖಾಜಿ ಮಾರಾಟ ಮಾಡಿದ್ದ. ಈಗ 7 ಎಕರೆಯ ಈ ಭೂಮಿ ಸ್ಲಂಬೋರ್ಡ್ ಹೆಸರಿನಲ್ಲಿ ನೋಂದಣಿಯಾಗಿದೆ.
ವಕ್ಫ್‌ಗೆ ಸೇರಿದ ಆಸ್ತಿ ಅಂತ ಸಚಿವ ಜಮೀರ್ ಅಹ್ಮದ್ ಕಾರ್ಯಕ್ರಮ ರದ್ದು ಮಾಡಿಸಿದ್ದಾರೆ. ಕೂಡಲೇ ನಮಗೆ ಹಕ್ಕು ಪತ್ರ ನೀಡಬೇಕು ಎಂದು 30 ವರ್ಷದಿಂದ ವಾಸವಿರುವ ನಿವಾಸಿಗಳು ಒತ್ತಾಯಿಸಿದ್ದಾರೆ.