ತಿರುವನಂತಪುರಂ: ಕೊರೊನಾ ವೈರಸ್‍ಗೆ ಇಡೀ ಜಗತ್ತಿನಾದ್ಯಂತ ಹರಡಿದ್ದು, ಜನರು ಭಯಭೀತಾಗಿದ್ದಾರೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಕೇರಳದಲ್ಲಿ ವೃದ್ಧ ದಂಪತಿ ಕೊರೊನಾ ವೈರಸ್‍ನಿಂದ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಇದೀಗ ಕೇರಳದಿಂದ ಮತ್ತೊಂದು ಸಿಹಿ ಸುದ್ದಿ ಬಂದಿದೆ.
ಇಡೀ ದೇಶದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದರಿಂದ ಕೇರಳ ‘ಕೊರೊನಾ ಹಾಟ್‍ಸ್ಟಾಟ್’ ಎನ್ನಿಸಿಕೊಂಡಿತ್ತು. ಆದರೆ ಈಗ ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ.
Advertisement
Advertisement
ಇಷ್ಟು ದಿನ ಕೇರಳದಲ್ಲಿ ಒಂದೇ ದಿನಕ್ಕೆ ಅನೇಕ ಕೊರೊನಾ ಪಾಸಿಟಿವ್ ಕಂಡುಬರುತ್ತಿತ್ತು. ಆದರೆ ಸೋಮವಾರ ಮೂರು ಕೊರೊನಾ ಪ್ರಕರಣ ದಾಖಲಾಗಿವೆ. ಇನ್ನೂ ಭಾನುವಾರ ಕೇವಲ ಎರಡು ಪ್ರಕರಣ ಮಾತ್ರ ದೃಢಪಟ್ಟಿತ್ತು. ಈ ಮೂಲಕ ಕೇರಳದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 378 ಇದೆ. ಇವರಲ್ಲಿ ಈಗಾಗಲೇ 200 ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ಕೇರಳದಲ್ಲಿ ಈಗ ಕೇವಲ 178 ಮಂದಿ ಕೊರೊನಾ ರೋಗಿಗಳಿದ್ದಾರೆ.
Advertisement
ಪ್ರತಿದಿನ ಕೊರೊನಾ ಪಾಸಿಟಿವ್ ಪ್ರಕರಣಗಳಿಂತ ವೈರಸ್‍ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕೇರಳದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.
Advertisement
ಕೊರೊನಾ ನಿಯಂತ್ರಿಸಿದ್ದು ಹೇಗೆ?
1. ಈ ಹಿಂದೆ ಕೇರಳದಲ್ಲಿ ನಿಫಾ ವೈರಸ್ ಕಂಡು ಬಂದಿತ್ತು. ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಿತ್ತು. ಹೀಗಾಗಿ ಕೇರಳ ಭಾರತದಲ್ಲಿ ಕೊರೊನಾ ವೈರಸ್ ಕಾಣಿಸಿಕೊಳ್ಳುವ ಮೊದಲೇ ಅಗತ್ಯ ಪೂರ್ವ ಯೋಜನೆಗಳನ್ನು ಕೈಗೊಂಡಿತ್ತು.
2. ಕೊರೊನಾ ಸೋಂಕಿತರ ಸಂಖ್ಯೆ 100ಕ್ಕೆ ಏರಿಕೆಯಾದ ತಕ್ಷಣ ಸರ್ಕಾರ ಅಪಾಯಕಾರಿ ಪ್ರದೇಶಗಳನ್ನು ಸಂಪೂರ್ಣ ಲಾಕ್‍ಡೌನ್ ಮಾಡಿತ್ತು. ಅಲ್ಲಿಂದ ಇತರಿಗೆ ಸೋಂಕು ತಗುಲದಂತೆ ಕ್ರಮಕೈಗೊಂಡಿತ್ತು.
3. ಕೊರೊನಾ ವೈರಸ್ ವಿದೇಶದಿಂದ ಬಂದವರಿಂದಲೇ ಹೆಚ್ಚಾಗಿ ಹರಡುತ್ತದೆ ಎನ್ನಲಾಗಿತ್ತು. ಹೀಗಾಗಿ ಎಚ್ಚೆತ್ತ ಕೇರಳ ಸರ್ಕಾರ ವಿಮಾನ ನಿಲ್ದಾಣದಲ್ಲೇ ವಿದೇಶದಿಂದ ಬಂದವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿತ್ತು. ಅಲ್ಲದೇ 5 ಸಾವಿರ ಐಸೋಲೇಷನ್ ವಾರ್ಡ್ ತೆರೆದಿತ್ತು.
COVID-19 curve of Kerala has started to flatten. The active cases for the last one week has declined. The recovered cases (green curve) will cross the yellow curve soon.#COVID2019 #COVID pic.twitter.com/G9nja0UYCU
— Thomas Isaac (@drthomasisaac) April 12, 2020
4. ವಿದೇಶ ಹಾಗೂ ಬೇರೆ ರಾಜ್ಯ ಪ್ರಯಾಣ ಮಾಡಿದ್ದವರ ಮಾಹಿತಿಯನ್ನು ಕೊಡದೆ ಮುಚ್ಚಿಟ್ಟವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.
5. ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿತ್ತು. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಿತು.
6. ಆ್ಯಪ್ ಮೂಲಕ ಕೊರೊನಾ ವೈರಸ್ ಬಗ್ಗೆ ಜನರಿಗೆ ಮಾಹಿತಿ ನೀಡಿತ್ತು.