ಬಾಲಿವುಡ್ (Bollywood) ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಅವರು ಸದಾ ಒಂದಲ್ಲಾ ಒಂದು ವಿವಾದದ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಕಳೆದ ವರ್ಷ ನೀಲಿ ಸಿನಿಮಾ ನಿರ್ಮಾಣದ ಕುರಿತಾಗಿ ರಾಜ್ ಕುಂದ್ರಾ (Raj Kundra) ಅರೆಸ್ಟ್ ಆಗಿದ್ದರು. ಈ ವೇಳೆ ರಾಜ್ ಕುಂದ್ರಾ ವಿರುದ್ಧ ಶೆರ್ಲಿನ್ ಮಾತನಾಡಿದ್ದರು. ತಮ್ಮ ಹಳೆಯ ರಿಲೇಷನ್ಶಿಪ್ ಬಗ್ಗೆ ಅವರು ಮುಚ್ಚುಮರೆ ಇಲ್ಲದೇ ಸಂದರ್ಶನಗಳಲ್ಲಿ ಮಾತನಾಡಿದ್ದುಯಿದೆ. ಹಣಕ್ಕಾಗಿ ಹಲವರ ಜೊತೆ ಲೈಂಗಿಕ ಕ್ರಿಯೆ(Sex) ನಡೆಸಿದ್ದೆ ಎಂದು ಈ ಹಿಂದೆ ನಟಿ ಹೇಳಿದ್ದರು. ಇದರ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ.
Advertisement
ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ನೇರವಾಗಿ ಮಾತನಾಡುವ ಮೂಲಕ ಅನೇಕರ ಹುಬ್ಬೇರಿಸಿದ್ದಾರೆ. ಈ ಮೊದಲು ಹಣಕ್ಕಾಗಿ ನಾನು ಹಲವು ಜನರ ಜೊತೆ ಮಲಗಿದ್ದೆ. ಈಗ ನಿಮ್ಮನ್ನು ನಿರಾಸೆಗೊಳಿಸಿದ್ದಕ್ಕೆ ಕ್ಷಮೆ ಇರಲಿ. ಆದರೆ ಈಗ ಹಣಕ್ಕಾಗಿ ನಾನು ಅಂಥ ಕೆಲಸ ಮಾಡುತ್ತಿಲ್ಲ ಎಂದು ಶೆರ್ಲಿನ್ ಚೋಪ್ರಾ ಹೇಳಿದ್ದರು. ಆ ಹೇಳಿಕೆಯ ಬಗ್ಗೆ ಈಗ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಸಿಂಗಂ’ ಖ್ಯಾತಿಯ ನಟ ಜಯಂತ್ ಸಾವರ್ಕರ್ ವಿಧಿವಶ
Advertisement
Advertisement
ಈ ಹಿಂದೆ ಅವರು ರಾಜಕಾರಣಿಯ ಮಗನೊಬ್ಬನ ಜೊತೆ ರಿಲೇಷನ್ಶಿಪ್ನಲ್ಲಿ ಇದ್ದರು. ಆತನ ಜೊತೆ ತಮಗೆ ಇದ್ದ ಸಂಬಂಧದ ಬಗ್ಗೆ ಹೇಳಿಕೆ ನೀಡುವಾಗ ಶೆರ್ಲಿನ್ ಚೋಪ್ರಾ ಅವರು ಮುಚ್ಚುಮರೆ ಇಲ್ಲದೇ ಮಾತನಾಡಿದ್ದರು. ಆದರೆ ತಮ್ಮ ಹೇಳಿಕೆ ಬೇರೆ ರೀತಿಯಲ್ಲಿ ಬಿಂಬಿತವಾಗಿದೆ ಎಂಬುದು ಶೆರ್ಲಿನ್ ಚೋಪ್ರಾ ಅವರು ಹೇಳಿದ್ದಾರೆ.
Advertisement
ತನ್ನ ಬಾಯ್ ಫ್ರೆಂಡ್ ತನಗೆ ಲೈಂಗಿಕತೆಗಾಗಿ ದುಬಾರಿ ಉಡುಗೊರೆಗಳನ್ನು ನೀಡುತ್ತಿದ್ದನು. ರಾಜಕಾರಣಿಯ ಪುತ್ರನ ನಡವಳಿಕೆ ಬಗ್ಗೆ ನಟಿ ಬಾಯ್ಬಿಟ್ಟಿದ್ದಾರೆ. ಇನ್ನೂ ಸಿನಿಮಾ ಆಡಿಷನ್ ನೀಡುವಾಗ ಅನೇಕ ನಿರ್ದೇಶಕ-ನಿರ್ಮಾಪಕರು ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಹೇಳಿದ್ದಾರೆ.