ಮುಂಬೈ: ಐಪಿಎಲ್ ನಲ್ಲಿ ಸೊನ್ನೆ ರನ್‌ಗಲಿಗೆ ಔಟಾಗಿದ್ದಕ್ಕೆ ಫ್ರಾಂಚೈಸಿ ತಂಡದ ಮಾಲೀಕರೊಬ್ಬರು ಮೂರ್ನಾಲ್ಕು ಬಾರಿ ಕಪಾಳಕ್ಕೆ ಬಾರಿಸಿದ್ದರು ಎಂದು ನ್ಯೂಜಿಲ್ಯಾಂಡ್ ಫೇಮಸ್ ಕ್ರಿಕೆಟಿಗ ರಾಸ್ ಟೇಲರ್ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ತಂಡದಲ್ಲಿ 2011ರ ಐಪಿಎಲ್ ಸೀಸನ್ ನಲ್ಲಿ ತಮಗೆ ಆದ ರೋಚಕ ಅನುಭವವನ್ನು ಬಹಿರಂಗಪಡಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಮಾಲಿಕರ ಪೈಕಿ, ಓರ್ವ ತಮಗೆ 3-4 ಬಾರಿ ಕಪಾಳ ಮೋಕ್ಷ ಮಾಡಿದ್ದರು ಎಂಬ ಅಘಾತಕಾರಿ ಅಂಶ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಸ್ಪೂರ್ತಿದಾಯಕ ಸಾಧನೆಯೊಂದಿಗೆ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕಾಲಿಡುತ್ತಿರುವುದು ವಿಶೇಷ: ಮೋದಿ
Advertisement
Advertisement
“ಪಂಜಾಬ್ ಕಿಂಗ್ಸ್ ವಿರುದ್ಧ ಮೊಹಾಲಿ ಪಂದ್ಯದಲ್ಲಿ ಡಕ್ ಔಟ್ ಆದ ಬೆನ್ನಲ್ಲೇ ಫ್ರಾಂಚೈಸಿ ಮಾಲಿಕರೊಬ್ಬರು ಕಪಾಳಮೋಕ್ಷ ಮಾಡಿದ್ದರು ಎಂದು ಟೇಲರ್ ತಮ್ಮ ಹೊಸ ಆತ್ಮಚರಿತ್ರೆ ʻರಾಸ್ ಟೇಲರ್; ಬ್ಲಾಕ್ ಅಂಡ್ ವೈಟ್ʼ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇದನ್ನೂ ಓದಿ: ಈ ಸಲ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಿಂದ ಪಿ.ವಿ.ಸಿಂಧು ಔಟ್ – ಕಾರಣ ಏನು?
Advertisement
195 ರನ್ ಗಳ ಚೇಸಿಂಗ್ ಸವಾಲು ಇತ್ತು, ನಾನು ಎಲ್ ಬಿಡಬ್ಲ್ಯೂಗೆ ಡಕ್ ಔಟ್ ಆದೆ, ನಾವು ಗುರಿಯ ಸಮೀಪ ಹೋಗಲು ಸಾಧ್ಯವಾಗಲಿಲ್ಲ ಎಂದು ಟೇಲರ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
Advertisement
ಪಂದ್ಯದ ಬಳಿಕ ಹೋಟೆಲ್‌ನ ಟಾಪ್ ಫ್ಲೋರ್ ಡ್ರೆಸ್ಸಿಂಗ್ ರೂಂ ನಲ್ಲಿದ್ದ ನನಗೆ ರಾಯಲ್ ಚಾಲೆಂಜರ್ಸ್ ನ ಮಾಲಿಕರ ಪೈಕಿ ಓರ್ವರು, ʻರಾಸ್ ಟೇಲರ್ ನಾವು ನಿಮಗೆ ಡಕ್ ಔಟ್ ಆಗುವುದಕ್ಕಾಗಿ ಮಿಲಿಯನ್ ಡಾಲರ್ಸ್ ಹಣ ನೀಡಿಲ್ಲ ಎಂದು 3-4 ಬಾರಿ ಕಪಾಳಕ್ಕೆ ಬಾರಿಸಿದ್ದರು ʼಎಂಬುದನ್ನು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.