ಮುಂಬೈ: ಆರು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ ಒಂದು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ಥಗೊಂಡ ಘಟನೆ ಮಹಾರಾಷ್ಟ್ರದ ಮುಂಬೈ-ಪುಣೆ ಎಕ್ಸ್ ಪ್ರೆಸ್ ರಸ್ತೆಯಲ್ಲಿ ಶನಿವಾರ ನಡೆದಿದೆ.
ಲೋನಾವಾಲದಿಂದ 15 ಕಿ.ಮೀ ದೂರದಲ್ಲಿನ ರಸ್ತೆಯಲ್ಲಿ ಘಟನೆ ನಡೆದಿದ್ದು, 9 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
Advertisement
Maharashtra: Traffic came to a standstill for half-an-hour on Mumbai-Pune Expressway after 6 vehicles rammed into each other near Khalapur Toll Naka. 1 person, who got injured, was taken to hospital. Movement of vehicles now resumed. pic.twitter.com/bkwvLfec4V
— ANI (@ANI) May 26, 2018
Advertisement
ಕಂಟೇನರ್ ಟ್ರಕ್ ಅನ್ನು ವೇಗವಾಗಿ ಚಾಲನೆ ಮಾಡುತ್ತಿದ್ದ ಚಾಲಕ ಟೋಲ್ ಗೇಟ್ ಬರುತ್ತಿದ್ದಂತೆ ಹಠಾತ್ ನಿಲ್ಲಿಸಿದ್ದಾರೆ. ಪರಿಣಾಮ 6 ವಾಹಗಳು ಒಂದಕ್ಕೊಂಡು ಡಿಕ್ಕಿ ಹೊಡೆದಿದ್ದು, 9 ಜನರು ಗಾಯಗೊಂಡಿದ್ದಾರೆ. ಅಲ್ಲದೇ ಒಂದು ಗಂಟೆಗಳ ಸಂಚಾರ ಅಸ್ತವ್ಯಸ್ಥವಾಗಿತ್ತು ಎಂದು ವರದಿಯಾಗಿದೆ.
Advertisement
ಗಾಯಾಳುಗಳನ್ನು ಪನವೇಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಬಂದ ಮುಂಬೈ ಸಂಚಾರ ಪೊಲೀಸರು ಸಂಚಾರ ಸುಗಮಗೊಳಿಸಿದ್ದಾರೆ.