ಬೇಸಿಗೆ ಕಾಲದಲ್ಲಿ ಎಲ್ಲರೂ ತಂಪು ಪಾನೀಯಗಳ ಮೊರೆ ಹೋಗುತ್ತಾರೆ. ಆದರೆ ಬೇಸಿಗೆ ಕಾಲದಲ್ಲಿ ಲಾಭ ಅಧಿಕ ಮಾಡಿಕೊಳ್ಳೋಣ ಎಂದು ಅಂಗಡಿ ಮಾಲೀಕರು ಎಲ್ಲ ಜ್ಯೂಸ್‍ಗಳ ಬೆಲೆಯನ್ನು ಏರಿಸಿರುತ್ತಾರೆ. ಬಿಸಿಲಿನ ತಾಪ ತಡೆಯಲಾರದೆ ಅಧಿಕ ಹಣವನ್ನು ಕೊಟ್ಟು ಪಾನೀಯ ಕುಡಿಯುತ್ತೀವಿ. ಆದರೆ ಕಡಿಮೆ ಖರ್ಚಿನಲ್ಲಿ ಮನೆಯಲ್ಲಿಯೇ ಆರೋಗ್ಯಕರವಾದ ತಂಪು ಪಾನೀಯ ಮಾಡಿಕೊಳ್ಳಬಹುದು. ಇದರಿಂದ ಕೂಲ್ ಕೂಲ್ ಆಗಿ ಇರಬಹುದು. ಜೊತೆಗೆ ಹಣವನ್ನು ಉಳಿತಾಯ ಮಾಡಬಹುದು. ಹೀಗೆ ಕಡಿಮೆ ಖರ್ಚು ಹಾಗೂ ಸಮಯದಲ್ಲಿ ಜ್ಯೂಸ್ ಮಾಡುವ ವಿಧಾನ ಇಲ್ಲಿವೆ….
1. ಕೂಲ್ ಪುದಿನಾ ಜ್ಯೂಸ್:
Advertisement
ಬೇಕಾಗುವ ಸಾಮಾಗ್ರಿಗಳು
1. ಸಕ್ಕರೆ – 2 ರಿಂದ 3 ಚಮಚ
2. ನೀರು- 3-4 ಚಮಚ
3. ನಿಂಬೆ ಹಣ್ಣು – 1
4. ಪುದಿನಾ – 10 ಎಲೆ
5. ಸೋಡ
6. ಐಸ್ ಕ್ಯೂಬ್
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬೌಲ್‍ಗೆ ಸಕ್ಕರೆ ಮತ್ತು ನೀರನ್ನು ಹಾಕಿ ಸಕ್ಕರೆ ಕರಗುವರೆಗೂ ಮಿಕ್ಸ್ ಮಾಡಿಕೊಳ್ಳಿ.
* ಬಳಿಕ ಒಂದು ಗ್ಲಾಸ್‍ಗೆ 8-10 ಪುದಿನ ಎಲೆ ಮತ್ತು ಸಣ್ಣಗೆ ಪೀಸ್ ಮಾಡಿದ್ದ ಒಂದು ನಿಂಬೆಹಣ್ಣು ಹಾಕಿ. ನಿಂಬೆ ರಸ ಬರೋವರೆಗೂ ಗ್ಲಾಸ್ ನಲ್ಲಿಯೇ ಜಜ್ಜಿ.
* ನಂತರ ಅದಕ್ಕೆ ಮಿಕ್ಸ್ ಮಾಡಿಕೊಂಡಿದ್ದ ಸಕ್ಕರೆ ನೀರನ್ನು 3 ಚಮಚ ಹಾಕಿ.
* ಈಗ 5-6 ಐಸ್ ಕ್ಯೂಬ್ ಹಾಕಿ, ಗ್ಲಾಸ್ ತುಂಬ ಸೋಡ ಹಾಕಿದರೆ ತಣ್ಣೆಗೆ ಕುಡಿಯಲು ಕೂಲ್ ಪುದಿನಾ ಪಾನೀಯ ಸಿದ್ಧ.
Advertisement
Advertisement
2. ಮ್ಯಾಂಗೋ ಜ್ಯೂಸ್:
ಬೇಕಾಗುವ ಸಾಮಾಗ್ರಿಗಳು
1. ಮಾವಿನ ಕಾಯಿ – 2
2. ಪುದಿನ ಎಲೆ -5
3. ಸಕ್ಕರೆ – 3 ಚಮಚ
4. ಬ್ಲಾಕ್ ಸಾಲ್ಟ್- ಚಿಟಿಕೆ
5. ಜೀರಿಗೆ ಪುಡಿ – ಅರ್ಧ ಚಮಚ
6. ಐಸ್ ಕ್ಯೂಬ್
ಮಾಡುವ ವಿಧಾನ
* ಎರಡು ಮಾವಿನ ಕಾಯಿ ತೆಗೆದುಕೊಂಡು ಅದರ ಸಿಪ್ಪೆಯನ್ನು ತೆಗೆದು ಹಾಕಿರಿ.
* ಕುಕ್ಕರ್ ಗೆ ಅರ್ಧ ಕಪ್ ನೀರು, ಸಿಪ್ಪೆ ತೆಗೆದ ಮಾವಿನ ಕಾಯಿ ಹಾಕಿ 3-4 ವಿಶಲ್ ಕೂಗಿಸಿಕೊಳ್ಳಿ.
* ಈಗ ಬೇಯಸಿದ ಮಾವಿನ ಕಾಯಿಯಲ್ಲಿನ ಬೀಜ ತೆಗೆದು ಸ್ಮ್ಯಾಶ್ ಮಾಡಿಕೊಳ್ಳಿ. ಅದಕ್ಕೆ 5 ಎಲೆ ಪುದಿನ, 3 ಚಮಚ ಸಕ್ಕರೆ, ಚಿಟಿಕೆ ಉಪ್ಪು ಹಾಕಿ, ನೀರು ಹಾಕದೆ ರುಬ್ಬಿಕೊಳ್ಳಿ.
* ಈಗ ಒಂದು ಗ್ಲಾಸ್‍ಗೆ 3-4 ಐಸ್ ಕ್ಯೂಬ್, ಅರ್ಧ ಚಮಚ ಜೀರಿಗೆ ಪುಡಿ, ಚಿಟಿಕೆ ಬ್ಲಾಕ್ ಸಾಲ್ಟ್ ಹಾಕಿ ಬಳಿಕ ರುಬ್ಬಿಕೊಂಡಿದ್ದ 3 ಚಮಚ ಮ್ಯಾಂಗೋ ಪೇಸ್ಟ್ ಹಾಕಿ ನೀರು ಹಾಕಿದರೆ ಜ್ಯೂಸ್ ಸಿದ್ಧ.
3. ಜೀರಾ ಸೋಡ:
ಬೇಕಾಗುವ ಸಾಮಾಗ್ರಿಗಳು
1. ಜಲ್ಜೀರ ಪುಡಿ -ಕಾಲು ಚಮಚ
2. ಐಸ್ ಕ್ಯೂಬ್
3. ಬ್ಲಾಕ್ ಸಾಲ್ಟ್ – ಕಾಲು ಚಮಚ
ಮಾಡುವ ವಿಧಾನ
* ಮೊದಲಿಗೆ ಒಂದು ಗ್ಲಾಸ್‍ಗೆ ಒಂದು ಬೌಲ್ ಐಸ್ ಕ್ಯೂಬ್ ಹಾಕಿ. ಅದಕ್ಕೆ ಕಾಲು ಚಮಚ ಜಲ್ಜೀರ ಪುಡಿ, ಬ್ಲ್ಯಾಕ್ ಸಾಲ್ಟ್ ಹಾಕಿ.
* ಇದಕ್ಕೆ ಸ್ಪ್ರೈಟ್ ಅಥವಾ 7 ಅಪ್ ಮಿಕ್ಸ್ ಮಾಡುವ ಮೂಲಕ ಜ್ಯೂಸ್ ಮಾಡಿಕೊಳ್ಳಿ.
4. ಕಲ್ಲಂಗಡಿ ಜ್ಯೂಸ್:
ಬೇಕಾಗುವ ಸಾಮಾಗ್ರಿಗಳು
1. ಕಲ್ಲಂಗಡಿ – ಒಂದು ಬೌಲ್
2. ಪುದಿನ – 5 ಎಲೆ
3. ಸಕ್ಕರೆ – 2 ಚಮಚ
4. ಚಾಟ್ ಮಸಾಲ
5. ಬ್ಲಾಕ್ ಸಾಲ್ಟ್
ಮಾಡುವ ವಿಧಾನ
* ಕಟ್ ಮಾಡಿದ್ದ ಕಲ್ಲಂಗಡಿ, 5 ಪುದಿನ ಎಲೆ, 2 ಚಮಚ ಸಕ್ಕರೆ, ಅರ್ಧ ಚಮಚ ಚಾಟ್ ಮಸಾಲ, ಬ್ಲಾಕ್ ಸಾಲ್ಟ್ ಹಾಕಿ ರುಬ್ಬಿಕೊಳ್ಳಿ. (ನೀರು ಹಾಕಿಕೊಳ್ಳಬೇಡಿ)
* ಈಗ ಅದನ್ನು ಸೋಸಿಕೊಂಡು, ಒಂದು ಗ್ಲಾಸ್‍ಗೆ 4-5 ಐಸ್ ಕ್ಯೂಬ್ ಹಾಕಿ ಸ್ವಲ್ಪ ಚಾಟ್ ಮಸಾಲ ಹಾಕಿ ಸೋಸಿಕೊಂಡ ರಸವನ್ನು ಮಿಕ್ಸ್ ಮಾಡಿ.
5. ಲೆಮನ್ ಜ್ಯೂಸ್:
ಬೇಕಾಗುವ ಸಾಮಾಗ್ರಿಗಳು
1. ಐಸ್ ಕ್ಯೂಬ್ -4-5
2. ನಿಂಬೆ ರಸ – 2 ಚಮಚ
3. ಸಕ್ಕರೆ – 3 ಚಮಚ
4. ಜೀರಾ ಪುಡಿ -ಅರ್ಧ ಚಮಚ
5. ಬ್ಲಾಕ್ ಸಾಲ್ಟ್ -ಚಿಟಿಕೆ
6. ಉಪ್ಪು -ಚಿಟಿಕೆ
ಮಾಡುವ ವಿಧಾನ
* ಐಸ್ ಕ್ಯೂಬ್, 2 ಚಮಚ ನಿಂಬೆ ರಸ, 3 ಚಮಚ ಸಕ್ಕರೆ, ಅರ್ಧ ಚಮಚ ಜೀರಾ ಪುಡಿ, ಚಿಟಿಕೆ ಬ್ಲಾಕ್ ಸಾಲ್ಟ್ ಮತ್ತು ಉಪ್ಪು ಹಾಕಿ.
* ಈಗ ಒಂದು ಕಪ್ ನೀರು ಹಾಕಿಕೊಂಡು ರುಬ್ಬಿಕೊಳ್ಳಿ.
* ಒಂದು ಗ್ಲಾಸ್‍ಗೆ ಐಸ್ ಕ್ಯೂಬ್, ಸಣ್ಣಗೆ ಕತ್ತರಿಸಿದ 4 ಪೀಸ್ ನಿಂಬೆ ಹಣ್ಣು, 3 ಎಲೆ ಪುದೀನ ಹಾಕಿ, ಅದಕ್ಕೆ ರುಬ್ಬಿದ ರಸವನ್ನು ಹಾಕಿದರೆ ನಿಂಬು ಜ್ಯೂಸ್ ರೆಡಿ.
6. ಮಸಾಲ ತಮ್ ಸಪ್:
ಬೇಕಾಗುವ ಸಾಮಾಗ್ರಿಗಳು
1. ಐಸ್ ಕ್ಯೂಬ್ -5-6
2. ನಿಂಬೆ ರಸ – 1 ಚಮಚ
3. ಬ್ಲಾಕ್ ಸಾಲ್ಟ್ -ಅರ್ಧ ಚಮಚ
4. ಜೀರಾ ಪುಡಿ – ಅರ್ಧ ಚಮಚ
5. ಚಾಟ್ ಮಸಾಲ – ಅರ್ಧ ಚಮಚ
ಮಾಡುವ ವಿಧಾನ
* ಒಂದು ಗ್ಲಾಸ್‍ಗೆ 5-6 ಐಸ್ ಕ್ಯೂಬ್, 1 ಚಮಚ ನಿಂಬೆ ರಸ, ಬ್ಲಾಕ್ ಸಾಲ್ಟ್, ಜೀರಾ ಪೌಡರ್, ಚಾಟ್ ಮಸಾಲ ಹಾಕಿ ಅದಕ್ಕೆ ತಮ್ ಸಪ್ ಮಿಕ್ಸ್ ಮಾಡಿದರೆ ಮಸಾಲ ತಮ್ ಸಪ್ ಕುಡಿಯಲು ಸಿದ್ಧ.