ಭೋಪಾಲ್: ಜಮೀನು ವಿವಾದದ ಗಲಾಟೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಆರು ಸದಸ್ಯರನ್ನು ಗುಂಡಿಕ್ಕಿ (shoot) ಹತ್ಯೆ ಮಾಡಿದ ಘಟನೆ ಶುಕ್ರವಾರ ಮಧ್ಯಪ್ರದೇಶದ (Madhya Pradesh) ಮೊರೆನಾದಲ್ಲಿ (Morena) ನಡೆದಿದೆ.
ಘಟನೆಯ ಆಘಾತಕಾರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ವೀಡಿಯೋದಲ್ಲಿ ಇಬ್ಬರು ರೈಫಲ್‍ಗಳನ್ನು (Rifles) ಹಿಡಿದು ಇನ್ನೊಂದು ಗುಂಪಿನ ಕಡೆ ಗುಂಡು ಹಾರಿಸುವುದು ದಾಖಲಾಗಿದೆ. ನಂತರ ಕೆಲವರು ಅವರನ್ನು ಕೋಲುಗಳಿಂದ ಥಳಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ತಂದೆಗೆ ಬಿಜೆಪಿ ಟಿಕೆಟ್ ಸಿಕ್ಕ ಖುಷಿಗೆ ಗಾಳಿಯಲ್ಲಿ ಗುಂಡು ಪ್ರಕರಣ – ಅಭ್ಯರ್ಥಿ ಪುತ್ರನ ವಿರುದ್ಧ ಎಫ್‍ಐಆರ್
ಘಟನೆಯ ಹಿನ್ನೆಲೆ:
ಧೀರ್ ಸಿಂಗ್ ತೋಮರ್ ಮತ್ತು ಗಜೇಂದ್ರ ಸಿಂಗ್ ತೋಮರ್ ಕುಟುಂಬಗಳ ನಡುವೆ 2013ರಲ್ಲಿ ತ್ಯಾಜ್ಯ ಸುರಿಯುವ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳವಾಗಿತ್ತು. ಆಗ ಧೀರ್ ಸಿಂಗ್ ತೋಮರ್ ಕುಟುಂಬದ ಇಬ್ಬರು ಸಾವನ್ನಪ್ಪಿದ್ದರು. ಈ ವೇಳೆ ಗಜೇಂದ್ರ ಸಿಂಗ್ ತೋಮರ್ ಕುಟುಂಬವು ಗ್ರಾಮದಿಂದ ಪಲಾಯನ ಮಾಡಿತ್ತು.
ನಂತರ ಎರಡು ಕುಟುಂಬಗಳು ನ್ಯಾಯಾಲಯದ (Court) ಹೊರಗೆ ರಾಜಿ ಮಾಡಿಕೊಂಡಿದ್ದವು. ಶುಕ್ರವಾರ ಗಜೇಂದ್ರ ಸಿಂಗ್ ತೋಮರ್ ಕುಟುಂಬ ಗ್ರಾಮಕ್ಕೆ ಮರಳಿದೆ. ಈ ವೇಳೆ ಧೀರ್ ಸಿಂಗ್ ತೋಮರ್ ಕುಟುಂಬ ಅವರ ಮೇಲೆ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ.
ಹತ್ಯೆಯಲ್ಲಿ ಭಾಗಿಯಾಗಿರುವ ಎಂಟು ಮಂದಿಯನ್ನು ಗುರುತಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸೇನಾ ವಾಹನದ ಮೇಲೆ ದಾಳಿ ಪ್ರಕರಣ – ಉಗ್ರರನ್ನು ಸುತ್ತುವರಿದ ಸೇನೆ, ಇಬ್ಬರು ಯೋಧರು ಸಾವು