-ಉಳಿದ 12 ಜನರನ್ನು ವಿಚಾರಣೆ ಬಳಿಕ ಬಿಡುಗಡೆ ಸಾಧ್ಯತೆ
ಕಾರವಾರ: ಇರಾನ್ ಭದ್ರತಾ ಸಿಬ್ಬಂದಿ ಬಂಧಿಸಲ್ಪಟ್ಟಿದ್ದ ಉತ್ತರ ಕನ್ನಡ ಜಿಲ್ಲೆಯ ಆರು ಜನ ಮೀನುಗಾರರನ್ನು ಇರಾನ್ ನ್ಯಾಯಾಲಯ ಬಿಡುಗಡೆಗೊಳಿಸಿದ್ದು, ಉಳಿದ 12 ಜನರನ್ನು ಇಂದು ವಿಚಾರಣೆ ನಡೆಸಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
ಬಂಧನಕ್ಕೆ ಒಳಗಾಗಿದ್ದ ಮೀನುಗಾರರರು ಕುಮಟಾ ಹಾಗೂ ಭಟ್ಕಳದ ಮೂಲದವರಾಗಿದ್ದು, ದುಬೈನಿಂದ ಮೀನುಗಾರಿಕೆಗೆ ತೆರಳುತ್ತಿದ್ದರು. ಇವರಲ್ಲಿ ಆರು ಜನರು 50 ದಿನಗಳ ಕಾಲ ಜೈಲಿನಲ್ಲಿದ್ದು, ಶನಿವಾರ ಇರಾನ್ ನ್ಯಾಯಾಲಯಲ್ಲಿ ವಿಚಾರಣೆ ಬಳಿಕ ಬಂಧನ ಮುಕ್ತರಾಗಿದ್ದಾರೆ.
Advertisement
ಆಗಿದ್ದೇನು?:
ಒಟ್ಟು ಎರಡು ತಂಡವಾಗಿ ಜುಲೈ 27ರಂದು 11 ಜನ ಹಾಗೂ ಆಗಸ್ಟ್ 25ರಂದು ಏಳು ಜನ ಮೀನುಗಾಗರರು ದುಬೈನಿಂದ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಸೀಮಾ ಉಲ್ಲಂಘನೆ ಮಾಡಿದ್ದು, ನಿಷೇಧಿತ ಪ್ರದೇಶದಲ್ಲಿ ಟೈಗರ್ ಫಿಷ್ ಬೇಟೆ ಆಡಿದ್ದರು. ಇದರಿಂದಾಗಿ ಮೀನುಗಾರರನ್ನು ಬೋಟ್‍ನೊಂದಿಗೆ ಇರಾನ್ ಭದ್ರತಾ ಸಿಬ್ಬಂದಿ ಮೀನುಗಾರರನ್ನು ವಶಕ್ಕೆ ಪಡೆದಿದ್ದರು.
Advertisement
Advertisement
ಬಂಧಿತರಲ್ಲಿ ಆರು ಜನರನ್ನು ಜೈಲಿಗೆ ಕಳುಹಿಸಲಾಗಿತ್ತು. ಉಳಿದ 12 ಜನರನ್ನು ಬೋಟ್‍ನಲ್ಲಿ ಇರಿಸಲಾಗಿತ್ತು. ಅವರಲ್ಲಿ ಒಬ್ಬರು ಮೊಬೈಲ್‍ನಲ್ಲಿ ವಿಡಿಯೋ ಮಾಡಿ, ಇರಾನ್ ಸಿಬ್ಬಂದಿ ಬಂಧಿಸಿದ್ದಾರೆ. ನೀವು ನಮ್ಮನ್ನ ರಕ್ಷಿಸಬೇಕು ಅಂತಾ ಹೇಳಿ ವಿಡಿಯೋವನ್ನು ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಕಳುಹಿಸಿದ್ದರು.
Advertisement
ಈ ವಿಡಿಯೋ ನೋಡಿದ ಅವರು ಸಾಂಜೀಮ್ ಸಂಘಟನೆ ಮುಖಂಡ ಗಮನಕ್ಕೆ ತಂದಿದ್ದಾರೆ. ಬಳಿಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ವಿಡಿಯೋ ನೀಡಿ, ಮೀನುಗಾರರನ್ನು ಬಿಡುಗಡೆಗೊಳಿಸಿ ಅಂತಾ ಮನವಿ ಮಾಡಿಕೊಂಡಿದ್ದಾರೆ. ಇರಾನ್ ಸರ್ಕಾರದೊಂದಿಗೆ ಮಾತುಕತೆ ಸುಷ್ಮಾ ಸ್ವರಾಜ್ ನಡೆಸಿದ್ದರು. ಪರಿಣಾಮ ಈಗ 6 ಜನರನ್ನು ಇರಾನ್ ನ್ಯಾಯಾಲಯ ಬಿಡುಗಡೆ ಮಾಡಿದ್ದು, ಉಳಿದ 12 ಜನರನ್ನು ವಿಚಾರಣೆಗೆ ಒಳಪಡಿಸಿ, ಬಂಧನ ಮುಕ್ತಗೊಳಿಸುವ ಸಾಧ್ಯ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv