ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Former PM Manmohan Singh) ಅವರ ಸ್ಮಾರಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ (Congress), ಬಿಜೆಪಿ (BJP) ನಡುವೆ ರಾಜಕೀಯ ಜಟಾಪಟಿ ನಡೆಯುತ್ತಿರುವ ಹೊತ್ತಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ರಾಜ್‌ಘಾಟ್‌ನಲ್ಲಿರುವ ಸಮಾಧಿ ಸ್ಥಳಗಳಿಗೆ ಭೇಟಿ ಸ್ಥಳ ಪರಿಶೀಲನೆ ಮಾಡಿದ್ದಾರೆ.
ರಾಷ್ಟ್ರೀಯ ಸ್ಮೃತಿಸ್ಥಳ, ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳ ಅಂತ್ಯಕ್ರಿಯೆಗೆ ಗೊತ್ತುಪಡಿಸಿದ ಸ್ಥಳ, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಸ್ಮಾರಕ ಕಿಸಾನ್ ಘಾಟ್, ಸಂಜಯ್ ಗಾಂಧಿ ಸಮಾಧಿ, ಪಿ.ವಿ.ನರಸಿಂಹರಾವ್ ಸಮಾಧಿ ಏಕತಾ ಸ್ಥಳದ ಬಳಿ ಮನಮೋಹನ್ ಸಿಂಗ್ ಸ್ಮಾರಕ ನಿರ್ಮಿಸುವ ಬಗ್ಗೆ ಅಧಿಕಾರಿಗಳಿಂದ ಪರಿಶೀಲನೆ ನಡೆದಿದೆ.ಇದನ್ನೂ ಓದಿ: ಕೈಯಲ್ಲಿ ಡೆತ್‌ನೋಟ್ ಹಿಡ್ಕೊಂಡು KSDL ಅಧಿಕಾರಿ ಆತ್ಮಹತ್ಯೆ
Advertisement
Advertisement
ದೇಶದ ಮೊದಲ ಸಿಖ್ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರಕ್ಕೆ ಕೇಂದ್ರ ಸರ್ಕಾರ ಸರಿಯಾದ ಮತ್ತು ಗೌರವಾನ್ವಿತ ಸ್ಥಳವನ್ನು ಒದಗಿಸಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಅವರ ಸ್ಮಾರಕವನ್ನು ನಿರ್ಮಿಸುವ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿತ್ತು. ಅದಾಗ್ಯೂ ಕೇಂದ್ರ ಸರ್ಕಾರ ನಿಗಮ್‌ಬೋಧ್ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಸಿತ್ತು.
Advertisement
ಈ ನಡುವೆ ಕೇಂದ್ರ ಸರ್ಕಾರ ಸ್ಮಾರಕಕ್ಕೆ ಸ್ಥಳ ನೀಡುವ ಭರವಸೆ ನೀಡಿದ್ದು, ಈ ಹಿನ್ನೆಲೆ ಸ್ಥಳ ಪರಿಶೀಲನೆ ಆರಂಭವಾಗಿದೆ. ಈ ನಡುವೆ 2000ನೇ ಇಸವಿಯಲ್ಲಿ ಯುಪಿಎ ಸರ್ಕಾರವು ರಾಜಧಾನಿಯಲ್ಲಿ ಭೂಮಿ ಕೊರತೆ ಹಿನ್ನೆಲೆ ಕಳವಳ ವ್ಯಕ್ತಪಡಿಸಿತ್ತು. ಇದರೊಂದಿಗೆ ಹೊಸ ಸ್ಮಾರಕಗಳನ್ನು ನಿರ್ಮಿಸದಿರಲು ನಿರ್ಧರಿಸಲಾಗಿತ್ತು. ಈ ನಿರ್ಧಾರ ಮನಮೋಹನ್ ಸಿಂಗ್ ಸ್ಮಾರಕಕ್ಕೆ ಅಡ್ಡಿಯಾಗಬಹುದು ಎನ್ನಲಾಗುತ್ತಿದೆ.ಇದನ್ನೂ ಓದಿ: ಅರ್ಚಕರಿಗೆ ಪ್ರತಿ ತಿಂಗಳು 18 ಸಾವಿರ ಸಹಾಯಧನ: ಕೇಜ್ರಿವಾಲ್ ಘೋಷಣೆ