`ಸೀತಾ ರಾಮಂ’ (Sita Ramam) ಚಿತ್ರದ ಸಕ್ಸಸ್ ಖುಷಿಯಲ್ಲಿರುವ ಮೃಣಾಲ್ ಠಾಕೂರ್ (Mrunal Thakur) ಈಗ ಮದುವೆಯ ಸಂಭ್ರಮದಲ್ಲಿದ್ದಾರೆ. ಅರಿಶಿನ ಶಾಸ್ತ್ರದಲ್ಲಿ ನಟಿ ಮಿಂಚಿದ್ದಾರೆ. ಸದ್ಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
View this post on Instagram
Advertisement
ಮರಾಠಿ ಚಿತ್ರ ಮತ್ತು ಹಿಂದಿ ಸೀರಿಯಲ್ ಮತ್ತು ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟಿ ಮೃಣಾಲ್ ಠಾಕೂರ್ ಈಗ `ಸೀತಾ ರಾಮಂ’ ಚಿತ್ರದ ಸಕ್ಸಸ್ ಖುಷಿಯಲ್ಲಿದ್ದಾರೆ. ನಟಿಗೆ ಭರ್ಜರಿ ಆಫರ್ಸ್ ಇದೀಗ ಅರಸಿ ಬರುತ್ತಿದೆ. ಸದ್ಯ ನಟಿ ಮೃಣಾಲ್ ಸ್ನೇಹಿತೆಯ ಮದುವೆಯ ಸಂಭ್ರಮದಲ್ಲಿದ್ದಾರೆ. ಸ್ನೇಹಿತೆ ಅನನ್ಯಾ ಮದುವೆಯಲ್ಲಿ ನಟಿ ಕುಣಿದು ಕುಪ್ಪಳಿದ್ದಾರೆ.
Advertisement
View this post on Instagram
Advertisement
ಅರಿಶಿನ, ಮೆಹೆಂದಿ, ಪ್ರತಿಯೊಂದು ಶಾಸ್ತçದಲ್ಲೂ ನಟಿ ಏಂಜಾಯ್ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಸಂಭ್ರಮದ ವೀಡಿಯೋ ಮತ್ತು ಫೋಟೋಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:ಚಂದನವನದ ‘ಐಶೂ’ ಅಮೂಲ್ಯ ಬರ್ತ್‌ಡೇ: ಮತ್ತೆ ಸಿನಿಮಾ ಮಾಡುವಂತೆ ಫ್ಯಾನ್ಸ್ ಮನವಿ
Advertisement
View this post on Instagram
ಇತ್ತೀಚೆಗಷ್ಟೇ `ಸೀತಾ ರಾಮಂ’ ದುಲ್ಕರ್ ಸಲ್ಮಾನ್‌ಗೆ ನಾಯಕಿಯಾಗಿ ಮನೋಜ್ಞವಾಗಿ ನಟಿಸಿ ಮೃಣಾಲ್ ಸೈ ಎನಿಸಿಕೊಂಡಿದ್ದಾರೆ. ಸೀತಾ ರಾಮನ ಕಥೆಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದರು. ಈ ಚಿತ್ರದ ಸಕ್ಸಸ್ ನಂತರ `ಎನ್‌ಟಿಆರ್ 30′ (Ntr 30) ಚಿತ್ರಕ್ಕೆ ಎನ್‌ಟಿಆರ್‌ಗೆ ನಾಯಕಿಯಾಗುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ದಕ್ಷಿಣದ ಸಾಕಷ್ಟು ಸಿನಿಮಾಗೆ ನಟಿಸಲು ಭರ್ಜರಿ ಅವಕಾಶವನ್ನ ನಟಿ ಗಿಟ್ಟಿಸಿಕೊಳ್ಳುತ್ತಿದ್ದಾರೆ.