ಬೆಂಗಳೂರು: ಕುಮಾರಸ್ವಾಮಿ (HD Kumaraswamy) ವಿರುದ್ಧದ ಕೇಸ್ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡದೇ ನನ್ನ ವಿರುದ್ಧದ ಕೇಸ್‌ಗೆ ರಾಜ್ಯಪಾಲರು (Thawarchand Gehlot) ಆತುರವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಮತ್ತೆ ರಾಜ್ಯಪಾಲರ ವಿರುದ್ಧ ಕಿಡಿಕಾರಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ ಕೇಸ್‌ಗೆ ಜಾರ್ಜ್ ಶೀಟ್ ಸಲ್ಲಿಸಲು ರಾಜ್ಯಪಾಲರಿಗೆ ಅನುಮತಿ ನೀಡಲು ಎಸ್‌ಐಟಿ (SIT) ಇಂದ ಎರಡನೇ ಪತ್ರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಮೇಲೆ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕೇಸ್‌ನಲ್ಲಿ 2023ರ ನ.23ರಂದು ಲೋಕಾಯುಕ್ತದವರು ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದಾರೆ. ಆದರೆ ಇವತ್ತಿನವರೆಗೂ ರಾಜ್ಯಪಾಲರು ಅನುಮತಿ ಕೊಟ್ಟಿಲ್ಲ. ಹೀಗಾಗಿ ಮತ್ತೆ ಅನುಮತಿ ಕೇಳಿದ್ದಾರೆ ಎಂದರು. ಇದನ್ನೂ ಓದಿ: ರಾಜ್ಯಪಾಲರನ್ನು ನಮ್ಮ ನಾಯಕರು ನಿಂದನೆ ಮಾಡಿಲ್ಲ, ಇರೋದನ್ನೆ ಹೇಳಿದ್ದಾರೆ: ಸಿದ್ದರಾಮಯ್ಯ
ಜು.26 2024ರಂದು 11 ಗಂಟೆಗೆ ಅಬ್ರಾಹಂ ನನ್ನ ಮೇಲೆ ದೂರು ಕೊಡುತ್ತಾರೆ. ಕೂಡಲೇ 10 ಗಂಟೆಗೆ ನನ್ನ ಮೇಲೆ ಶೋಕಾಸ್ ನೋಟಿಸ್ ರೆಡಿ ಮಾಡಿ ನನಗೆ ನೋಟಿಸ್ ಕೊಡುತ್ತಾರೆ. ಇದು ತಾರತಮ್ಯ ಅಲ್ಲವಾ? ಇದಕ್ಕೆ ರಾಜ್ಯಪಾಲರಿಗೆ ಪಿಕ್ ಅಂಡ್ ಚ್ಯೂಸ್ ಮಾಡಬೇಡಿ ಎಂದು ಹೇಳೋದು ಅಂತ ರಾಜ್ಯಪಾಲರ ನಡೆ ಟೀಕಿಸಿದರು. ಇದನ್ನೂ ಓದಿ: ದೇವರಾಜ್ ಅರಸ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಲು ಕೇಂದ್ರಕ್ಕೆ ಶಿಫಾರಸು- ಸಿದ್ದರಾಮಯ್ಯ