ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕೇಸ್‍ನಲ್ಲಿ ಆರೋಪಿಯಾಗಿರುವ ಪರುಶುರಾಮ್ ವಾಗ್ಮೋರೆಯ ಆಸೆಯನ್ನು ಎಸ್‍ಐಟಿ ಪೊಲೀಸರು ಈಡೇರಿಸಿದ್ದಾರೆ. ಇದರಿಂದ ವಾಗ್ಮೋರೆ ಫುಲ್ ಖುಷ್ ಆಗಿದ್ದಾನೆ. ಇದನ್ನೂ ಓದಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಮೇಜರ್ ಟ್ವಿಸ್ಟ್!
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿರುವ ಪರುಶುರಾಮ್ ವಾಗ್ಮೋರೆ, ಎಸ್‍ಐಟಿ ಪೊಲೀಸರ ತನಿಖೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸ್ತಿರೋದು ಎಸ್‍ಐಟಿ ಪೊಲೀಸರಿಗೆ ಖುಷಿ ತಂದಿದೆ ಅಂತೆ. ಇದರ ಬೆನ್ನಲ್ಲೆ ಪರುಶುರಾಮ್ ತನ್ನ ತಾಯಿಯನ್ನು ಒಮ್ಮೆ ನೋಡಬೇಕು ಅನ್ನೋ ಆಸೆಯನ್ನು ಎಸ್‍ಐಟಿ ಪೊಲೀಸರ ಮುಂದೆ ಹೇಳಿಕೊಂಡಿದ್ದನು. ಈ ಬೇಡಿಕೆಗೆ ಸ್ಪಂದಿಸಿದ ಎಸ್‍ಐಟಿ ಅಧಿಕಾರಿಗಳು ಭಾನುವಾರ ಬೆಂಗಳೂರಿನ ಸಿಐಡಿ ಕಚೇರಿಯಲ್ಲಿರುವ ಎಸ್‍ಐಟಿಯಲ್ಲಿ ಪರುಶುರಾಮ್ ತಾಯಿ ಮತ್ತು ತಂದೆಯನ್ನು ಭೇಟಿಗೆ ಅವಕಾಶ ಮಾಡಿಕೊಟ್ಟಿದ್ರು. ಇದನ್ನೂ ಓದಿ: ಫೋಟೋ ತೆಗಿಸಿಕೊಂಡವರೆಲ್ಲಾ ಸಂಘಟನೆ ಕಾರ್ಯಕರ್ತರಲ್ಲ – ಗೌರಿ ಲಂಕೇಶ್ ಹತ್ಯೆಗೂ ಸಂಘಟನೆಗೂ ಸಂಬಂಧವಿಲ್ಲ: ಪ್ರಮೋದ್ ಮುತಾಲಿಕ್
Advertisement
Advertisement
ತನ್ನ ತಾಯಿಯನ್ನು ನೋಡಿದ ಮಗ ಪರುಶುರಾಮ್, ನಾನು ತಪ್ಪು ಮಾಡಿಬಿಟ್ಟೆ ಅಂತಾ ತಾಯಿಯನ್ನು ತಬ್ಬಿ ಕಣ್ಣೀರು ಹಾಕಿದ್ದಾನೆ. ತಾಯಿ ಜಾನಕಿಬಾಯಿ ಕೂಡ ಮಗನನ್ನು ನೋಡಿ ಅಪ್ಪಿ ಮುದ್ದಾಡಿ ಖುಷಿಯಾದ್ರು. ಇದೇ ವೇಳೆ ಮಾತಾನಾಡಿದ ಪರುಶುರಾಮ್ ಪೋಷಕರು, ನನ್ನ ಮಗನನ್ನು ಪೊಲೀಸರು ತುಂಬಾ ಚನ್ನಾಗಿ ನೋಡಿಕೊಂಡಿದ್ದಾರೆ. ಅವನಿಗೆ ಹೊಡೆದಿಲ್ಲ. ನನ್ನ ಮಗ ನಿರ್ದೋಷಿಯಾಗಿ ಹೊರ ಬರ್ತಾನೆ ಅಂತಾ ಭರವಸೆ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಗೆ ಹಂತಕರು ಇಟ್ಟಿದ್ದ ಹೆಸರು `ಅಮ್ಮ’ – ಇನ್ನಿಬ್ಬರು ಹತ್ಯೆಗೂ ಎರಡಕ್ಷರದ ಕೋಡ್‍ವರ್ಡ್
Advertisement
ಸದ್ಯ ತಾಯಿ ತಂದೆಯನ್ನು ಭೇಟಿಯಾದ ಖುಷಿಯಲ್ಲಿರುವ ವಾಗ್ಮೋರೆ, ಎಸ್‍ಐಟಿ ಪೊಲೀಸರಿಗೆ ಇನ್ನಷ್ಟು ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾನೆ ಅನ್ನೋ ಭರವಸೆ ಎಸ್‍ಐಟಿ ಅಧಿಕಾರಿಗಳಲ್ಲಿ ಮೂಡಿದೆ. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ಹಿಡಿಯಲು ಸುಳಿವು ನೀಡಿತ್ತು ಕಾಯಿನ್ ಬಾಕ್ಸ್!
Advertisement