Tuesday, 20th November 2018

Recent News

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಮೇಜರ್ ಟ್ವಿಸ್ಟ್!

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಇದೀಗ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಎಸ್‍ಐಟಿ ತನಿಖೆ ವೇಳೆ ಒಂದಾದಮೇಲೊಂದರಂತೆ ಸ್ಫೋಟಕ ಸತ್ಯಗಳು ಹೊರಬರುತ್ತಿವೆ.

ಗೌರಿ ಹತ್ಯೆಗೆ ಪರಶುರಾಮ್ ವಾಗ್ಮೋರೆ ಪಡೆದಿದ್ದು ಕೇವಲ 13 ಸಾವಿರ ರೂ. ಅಂತೆ. ಸಂಚುಕೋರರು ಪರಶುರಾಮ್ ಗೆ ಮೊದಲು 3 ಸಾವಿರ ಬಳಿಕ 10 ಸಾವಿರ ನೀಡಿದ್ದಾರೆ. ಹಾಗಿದ್ರೆ ಕೇವಲ 13 ಸಾವಿರಕ್ಕೆ ಹತ್ಯೆ ಮಾಡಲು ವಾಗ್ಮೊರೆ ಒಪ್ಪಿಕೊಂಡಿದ್ಯಾಕೆ ಎಂಬ ಪ್ರಶ್ನೆ ಮೂಡುತ್ತದೆ. ಇದನ್ನೂ ಓದಿ: ಗೌರಿ ಹಂತಕರ ಹಿಟ್‍ಲಿಸ್ಟಲ್ಲಿ ಇದ್ದದ್ದು ಐವರಲ್ಲ- 4 ಜನರಿಂದ 10 ಮಂದಿಯ ಟಾರ್ಗೆಟ್!

ಪರಶುರಾಮ್ ವಾಗ್ಮೊರೆ ಗೌರಿಯನ್ನು ಕೊಂದಿದ್ದು ಹಣಕ್ಕಲ್ಲ ಬದಲಾಗಿ ಸೈದ್ಧಾಂತಿಕ ವಿರೋಧದಿಂದ ಗೌರಿಯನ್ನು ಹತ್ಯೆ ಮಾಡಿರುವುದಾಗಿ ಆತ ಬಾಯ್ಬಿಟ್ಟಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ:  ಗೌರಿ ಲಂಕೇಶ್ ಹತ್ಯೆಯ ಮಾಸ್ಟರ್ ಮೈಂಡ್ ಅಮೋಲ್ ಕಾಳೆ

ಹಣಕ್ಕಾಗಿ ಕೊಲ್ಲೊದಾದರೆ ಆಗಲ್ಲ ಅಂತ ಹೇಳಿದ್ದೆ. ಆದ್ರೆ ಗೌರಿಯ ಸೈದ್ಧಾಂತಿಕ ವಿರೋಧಕ್ಕಾಗಿ ಕೊಂದೆ ಅಂತ ಹೇಳಿದ್ದಾನೆ. ಊಟ, ವಸತಿ, ಪ್ರಯಾಣಕ್ಕಾಗಿ ವಾಗ್ಮೋರೆಗೆ ಸಂಚುಕೋರರು ಮೊದಲ ಹಂತದಲ್ಲಿ 3 ಸಾವಿರ ಸೆಟ್ಲ್‍ಮೆಂಟ್ ಮಾಡಿದ್ದು, ಇನ್ನು ಕೊಲೆಯಾದ ಬಳಿಕ ವಾಗ್ಮೋರೆಗೆ ಎರಡನೇ ಹಂತದಲ್ಲಿ 10 ಸಾವಿರ ನೀಡಿರುವುದಾಗಿ ತನಿಖೆ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಗೌರಿ ಹತ್ಯೆ ನಡೆದಿದ್ದು ಹೇಗೆ? – ‘ಆ’ ಆರು ಗುಂಡುಗಳ ಕಥೆ ಇಲ್ಲಿದೆ

ಘಟನೆ ವಿವರ:
ಸೆಪ್ಟಂಬರ್ 5ರಂದು ಕಚೇರಿಯಿಂದ ಮನೆಗೆ ಬಂದ ಗೌರಿ ಅವರು ಕಾರ್ ನಿಲ್ಲಿಸಿ ಗೇಟ್ ತೆಗೆದು ಒಳಗಡೆ ಹೊರಟ್ಟಿದ್ದರು. ಈ ವೇಳೆ ಗೌರಿ ತಲೆಗೆ ಹಿಂಬದಿಯಿಂದ ಫೈರ್ ಮಾಡಲು ಹಂತಕ ರೆಡಿಯಾಗಿದ್ದನು. ಹಿಂದೆ ಯಾರೋ ಬಂದಿದ್ದಾರೆಂದು ಗೊತ್ತಾದ ಕೂಡಲೇ ಗೌರಿ ಹಿಂದಿರುಗಿ ನೋಡಿದಾಗ ಹಂತಕನನ್ನು ನೋಡಿದ್ದಾರೆ. ಕೂಡಲೇ ಯಾರು? ಯಾರು ನೀನು? ಅಂತ ಗಾಬರಿಯಿಂದ ಗೌರಿ ಅವರು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆಗೆ ತಬ್ಬಿಬ್ಬಾದ ಹಂತಕ ತಕ್ಷಣ ಕೈಯಲ್ಲಿದ್ದ ರಿವಾಲ್ವರ್ ಮೂಲಕ ತಲೆಗೆ ಗುಂಡು ಹೊಡೆಯಲು ಫೈರ್ ಮಾಡಿದ್ದ, ಆದ್ರೆ ಅದು ಗುರಿ ತಪ್ಪಿ ಗೋಡೆಗೆ ಸಿಡಿದಿತ್ತು.  ಇದನ್ನೂ ಓದಿ:  ಗೌರಿ ಲಂಕೇಶ್ ಹತ್ಯೆ ಕೇಸ್ – ಎಸ್‍ಐಟಿ ಮುಂದೆ ತಪ್ಪೊಪ್ಪಿಕೊಂಡು ಕಣ್ಣೀರಿಟ್ಟ ವಾಗ್ಮೋರೆ!

ಗೌರಿ ತಪ್ಪಿಸಿಕೊಳ್ತಾರೆ ಅಂತ ಗೊತ್ತಾದಾಗ ಹಂತಕ, ಕ್ಷಣಾರ್ಧದಲ್ಲಿ ಟಾರ್ಗೆಟ್ ಚೇಂಜ್ ಮಾಡಿ, ತಲೆಗೆ ಗುಂಡು ಹೊಡೆಯುವ ಬದಲು, ಹೊಟ್ಟೆ ಮತ್ತು ಎದೆಯ ಭಾಗಕ್ಕೆ ನಾಲ್ಕು ಗುಂಡು ಹೊಡೆದಿದ್ದಾನೆ. ಕೊನೆಯ ಗುಂಡು ಮತ್ತೆ ಗುರಿ ತಪ್ಪಿತ್ತು. ಅಷ್ಟರಲ್ಲಿ ಪತ್ರಕರ್ತೆ ಗೌರಿಯವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಹಂತಕ ಸಿಡಿಸಿದ ಮೂರನೇ ಗುಂಡು ನೇರವಾಗಿ ಎದೆಗೆ ನುಗ್ಗಿ ಹೃದಯವನ್ನೇ ಹೊಕ್ಕಿತ್ತು. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಗೆ ಹಂತಕರು ಇಟ್ಟಿದ್ದ ಹೆಸರು `ಅಮ್ಮ’ – ಇನ್ನಿಬ್ಬರು ಹತ್ಯೆಗೂ ಎರಡಕ್ಷರದ ಕೋಡ್‍ವರ್ಡ್

Leave a Reply

Your email address will not be published. Required fields are marked *