ಯಾದಗಿರಿ: ತಂಗಿಯ ಗಂಡನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಅಕ್ಕ ತನ್ನ ಗಂಡನಿಗೆ ದೇವರ ಪ್ರಸಾದವೆಂದು ನಂಬಿಸಿ ನಿದ್ದೆ ಮಾತ್ರೆ ಕೊಟ್ಟು ಕೊಲೆಗೆ ಯತ್ನಿಸಿದ ಅಮಾನವೀಯ ಘಟನೆ ಯಾದಗಿರಿಯಲ್ಲಿ ನಡೆದಿದೆ.
Advertisement
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೂವಿನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಚಂದ್ರಕಲಾ ತನ್ನ ತಂಗಿಯ ಗಂಡ ಬಸನಗೌಡ ಜೊತೆ ಸೇರಿ ಪತಿ ವಿಶ್ವನಾಥ್ ರೆಡ್ಡಿ ಕೊಲೆಗೆ ಯತ್ನಿಸಿದ ಪಾಪಿ ಪತ್ನಿ. ಚಂದ್ರಕಲಾ ಮತ್ತು ಬಸನಗೌಡ ಹಲವಾರು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದರು. ಈ ವಿಷಯ ಗಂಡನಿಗೆ ಗೊತ್ತಾಗುತ್ತೆಂಬ ಭಯದಿಂದ ಮಧ್ಯ ರಾತ್ರಿ ನಿದ್ದೆ ಮಾತ್ರೆ ಕೊಟ್ಟು ತನ್ನ ಗಂಡನ ಕೊಲೆಗೆ ಚಂದ್ರಕಲಾ ಸ್ಕೆಚ್ ಹಾಕಿದ್ದಾಳೆ. ತಡರಾತ್ರಿ ದೇವರ ಪ್ರಸಾದವೆಂದು ನೀರಿನಲ್ಲಿ ನಿದ್ದೆ ಮಾತ್ರೆ ಪುಡಿ ಹಾಕಿ ತನ್ನ ಗಂಡನಿಗೆ ಕುಡಿಸಿದ್ದಾಳೆ. ಇದನ್ನೂ ಓದಿ: ದುಬೈನಿಂದ ಬಂದು ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಮತಚಲಾಯಿಸಿ ಕನ್ನಡಾಭಿಮಾನ ಮೆರೆದ ಮಹಿಳೆ
Advertisement
Advertisement
ಬಳಿಕ ಬಸನಗೌಡನನ್ನು ಮನೆಗೆ ಕರೆಸಿ ಇಬ್ಬರು ವಿಶ್ವನಾಥ್ ರೆಡ್ಡಿಯ ಕತ್ತು ಹಿಸುಕಲು ಮುಂದಾಗಿದ್ದಾರೆ. ಈ ವೇಳೆ ವಿಶ್ವನಾಥ್ ಎಚ್ಚರಗೊಂಡಿದ್ದಾರೆ. ಚಂದ್ರಕಲಾ ಬಸನಗೌಡ ಕೊಲೆ ಮಾಡುವ ಬಗ್ಗೆ ಮಾತಾಡಿರುವ ಆಡಿಯೋದಿಂದ ಸತ್ಯ ಹೊರಬಿದ್ದಿದೆ. ಸದ್ಯ ಚಂದ್ರಕಲಾ ಹಾಗೂ ಬಸನಗೌಡ ಇಬ್ಬರನ್ನು ಸಹ ಪೊಲೀಸರು ಬಂಧಿಸಿದ್ದು, ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಹಂಸಲೇಖಾ ವಿರುದ್ಧ ನೀಡಿದ್ದ ದೂರನ್ನು ಹಿಂಪಡೆದ ಕೃಷ್ಣರಾಜ್
Advertisement