ವಾಷಿಂಗ್ಟನ್: ಸ್ವಯಂ ಘೋಷಿತ ದೇವಮಾನವ ಹಾಗೂ ಭಾರತದಿಂದ ಪಲಾಯನಗೈದ ನಿತ್ಯಾನಂದನ (Nithyananda) ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ (United States of Kailasa) ಅಮೆರಿಕದ (America) 30 ಕ್ಕೂ ಹೆಚ್ಚು ನಗರಗಳ ಜೊತೆ ಸ್ನೇಹಪೂರ್ವಕವಾಗಿ ಸೇರಿರುವ ನಗರಗಳೆಂಬ ಒಪ್ಪಂದವನ್ನು ಮಾಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ನ್ಯೂಜೆರ್ಸಿಯ ನೆವಾರ್ಕ್ ನಗರ ನಿತ್ಯಾನಂದನ ನಕಲಿ ರಾಷ್ಟ್ರದೊಂದಿಗೆ ಸಿಸ್ಟರ್ ಸಿಟಿ (Sister City) ಒಪ್ಪಂದವನ್ನು ರದ್ದುಗೊಳಿಸಿದೆ. ಇದಾದ ಬಳಿಕ ಅಮೆರಿಕದ ರಿಚ್ಮಂಡ್, ವರ್ಜೀನಿಯಾ, ಡೇಟನ್, ಬಹಿಯೊ, ಬುಯೆನಾ ಪಾರ್ಕ್, ಫ್ಲೋರಿಡಾ ಮುಂತಾದ ನಗರಾಡಳಿತಗಳು ಕೈಲಾಸದೊಂದಿಗೆ ಒಪ್ಪಂದ ಮಾಡಿಕೊಂಡು ತಾವೂ ಕೈಲಾಸದ ಭಾಗವಾಗಿರುವುದಾಗಿ ಹಾಗೂ ಉಪನಗರಗಳ ಮಾದರಿಯಲ್ಲಿ ಇರುವುದಾಗಿ ಘೋಷಿಸಿಕೊಂಡಿದೆ.
Advertisement
Advertisement
Advertisement
ನೆವಾರ್ಕ್ ಹಾಗೂ ಕೈಲಾಸ ನಡುವಿನ ಸಿಸ್ಟರ್ ಸಿಟಿ ಒಪ್ಪಂದಕ್ಕೆ ಈ ವರ್ಷ ಜನವರಿ 12 ರಂದು ಸಹಿ ಹಾಕಲಾಗಿತ್ತು. ಈ ಒಪ್ಪಂದದ ಸಮಾರಂಭವನ್ನು ಕೂಡಾ ನೆವಾರ್ಕ್ನ ಸಿಟಿ ಹಾಲ್ನಲ್ಲಿ ನಡೆಸಲಾಗಿತ್ತು. ಇದನ್ನೂ ಓದಿ: ಭದ್ರತಾ ಪಡೆಯಿಂದ ಉಗ್ರರ ಮೇಲೆ ಗುಂಡಿನ ದಾಳಿ
Advertisement
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಅಮೆರಿಕದ ಫಾಕ್ಸ್ ನ್ಯೂಸ್ ಸಂಸ್ಥೆ ತನಿಖಾ ವರದಿಯೊಂದನ್ನು ಸಿದ್ಧಪಡಿಸಿದ್ದು, ಅದರಲ್ಲಿ ನಿತ್ಯಾನಂದ ಎಂಬ ನಕಲಿ ಸ್ವಾಮೀಜಿ ವಾಸ್ತವದಲ್ಲಿ ಅಸ್ತಿತ್ವದಲ್ಲಿಯೇ ಇಲ್ಲದ ಕೇವಲ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಬಹುದಾದಂತಹ ದೇಶವೊಂದನ್ನು ಸೃಷ್ಟಿಸಿದ್ದಾನೆ. ಅದಕ್ಕೆ ಕೈಲಾಸ ಎಂಬ ಹೆಸರು ಕೂಡಾ ಇಟ್ಟಿದ್ದಾನೆ. ಆ ದೇಶಕ್ಕೆ ಕರೆನ್ಸಿ, ಪಾಸ್ಪೋರ್ಟ್, ರಾಷ್ಟ್ರ ಲಾಂಛನ ಎಲ್ಲವೂ ಇರುವುದಾಗಿ ಘೋಷಿಸಿದ್ದಾನೆ. ಇಂತಹ ನಕಲಿ ಗುರುವಿನ ಜೊತೆ ಅಮೆರಿಕದ ಈ ಮಹಾನಗರಗಳು ಒಪ್ಪಂದ ಮಾಡಿಕೊಂಡಿರುವುದು ಹಾಸ್ಯಾಸ್ಪದ, ಇದು ತನಿಖೆಗೆ ಅರ್ಹವಾದ ವಿಚಾರ ಎಂದು ತಿಳಿಸಿದೆ.
ಈ ತನಿಖಾ ವರದಿ ಪ್ರಕಟಗೊಳ್ಳುತ್ತಲೇ ನ್ಯೂಜೆರ್ಸಿ ನಗರ ಕೈಲಾಸದೊಂದಿಗೆ ಮಾಡಿಕೊಂಡಿದ್ದ ಸಿಸ್ಟರ್ ಸಿಟಿ ಒಪ್ಪಂದವನ್ನು ರದ್ದುಗೊಳಿಸಿದೆ. ಇದನ್ನೂ ಓದಿ: ಉರಿಗೌಡ-ನಂಜೇಗೌಡ ಚಿತ್ರ : ಫಿಲ್ಮ್ ಚೇಂಬರ್ ಗೆ ಪತ್ರ ಬರೆದ ಒಕ್ಕಲಿಗರ ಸಂಘ