ಅಣ್ಣ, ತಂಗಿ ಒಂದೇ ಬಾರಿಗೆ ಪಿಎಸ್‌ಐ ಹುದ್ದೆಗೆ ಆಯ್ಕೆ

Public TV
1 Min Read
raichur psi1

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆಶಿಹಾಳ ತಾಂಡದ ಅಣ್ಣ, ತಂಗಿ ಇಬ್ಬರೂ ಒಂದೇ ಬಾರಿಗೆ ಪಿಎಸ್‌ಐ ಹುದ್ದೆಗೆ ತೇರ್ಗಡೆಯಾಗುವ ಮೂಲಕ ತಾಂಡದ ಕೀರ್ತಿ ಹೆಚ್ಚಿಸಿದ್ದಾರೆ.

Karnataka State Police

ಕಾರ್ತಿಕ್ ರಾಠೋಡ್ ಹಾಗೂ ರೂಪಾ ರಾಠೋಡ್ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿರುವ ಸಹೋದರ, ಸಹೋದರಿ. ಇದನ್ನೂ ಓದಿ: ಮುಂಬೈನಲ್ಲಿ ಭಯೋತ್ಪಾದನಾ ನಿಗ್ರಹ ದಳ ಸ್ಥಾಪಿಸಿದ ಮಾಜಿ ಐಪಿಎಸ್ ಅಧಿಕಾರಿ ಇನ್ನಿಲ್ಲ

ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ಸಿವಿಲ್ ಹುದ್ದೆಗಳಿಗೆ 2021ರ ಅಕ್ಟೋಬರ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಕಾರ್ತಿಕ್ ರಾಠೋಡ್ ಹಾಗೂ ರೂಪಾ ರಾಠೋಡ್ ತೇರ್ಗಡೆಯಾಗಿದ್ದಾರೆ. ಬಿಎಸ್ಸಿ ಹಾರ್ಟಿಕಲ್ಚರ್ ಓದಿರುವ ರೂಪಾ ರಾಠೋಡ್ 46 ರ‍್ಯಾಂಕ್, ಬಿಎಸ್ಸಿ ಫಾರೆಸ್ಟ್ ಓದಿರುವ ಕಾರ್ತಿಕ್ ರಾಠೋಡ್ 78 ನೇ ರ‍್ಯಾಂಕ್ ಪಡೆದಿದ್ದಾರೆ.

police exam

ಗುರಗುಂಟಾ ಸರ್ಕಾರಿ ಕಿರಿಯ ಮಹಾವಿದ್ಯಾಲಯದ ಪ್ರಾಚಾರ್ಯರಾಗಿರುವ ಶಂಕರ್ ರಾಠೋಡ್ ತಮ್ಮ ಮಕ್ಕಳ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆಯ ಸಹೋದರನನ್ನೇ ಕಿಡ್ನಾಪ್ ಮಾಡಿದ ಭೂಪ

Share This Article
Leave a Comment

Leave a Reply

Your email address will not be published. Required fields are marked *