ಶಿರಸಿ: ಉತ್ತರಕನ್ನಡದ ಕುಮಟಾದಲ್ಲಿ ಯುವಕ ಪರೇಶ್ ಮೇಸ್ತಾ ಸಾವು ಖಂಡಿಸಿ ಇಂದು ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ಉತ್ತರ ಕನ್ನಡದ ಶಿರಸಿ ಪಟ್ಟಣ ಧಗಧಗಿಸಿದೆ.
ಬಂದ್ ಹಿನ್ನೆಲೆಯಲ್ಲಿ ಉದ್ರಿಕ್ತರು ಪೊಲೀಸ್ ವಾಹನಗಳಿಗೆ ಕಲ್ಲು ತೂರಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಸೇರಿ ಇತರೆ ಹಿಂದೂ ಸಂಘಟನೆಗಳ ಪ್ರಮುಖರನ್ನು ಬಂಧಿಸುತ್ತಿದ್ದಂತೆ ಪ್ರತಿಭಟನೆ ಹಿಂಸಾ ಸ್ವರೂಪ ಪಡೆದುಕೊಂಡಿತ್ತು. ಉದ್ರಿಕ್ತ ಗುಂಪು ಕಂಡಕಂಡ ಕಡೆ ಕಲ್ಲು ತೂರಿದೆ. ಘಟನೆಯಲ್ಲಿ ಮಾಧ್ಯಮದವರನ್ನೂ ಒಳಗೊಂಡು ಪೊಲೀಸರಿಗೂ ಕಲ್ಲೇಟು ಬಿದ್ದಿದೆ. ಶಿರಸಿಯ ವಿವಿಧ ಭಾಗಗಳಲ್ಲಿ ಉದ್ರಿಕ್ತರ ಗುಂಪು ಟೈಯರ್‍ಗಳಿಗೆ ಬೆಂಕಿ ಹಚ್ಚಿದೆ.
Advertisement
ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅಲ್ಲದೆ, ಲಾಠಿಬೀಸಿ ಗುಂಪು ಚದುರಿಸುವ ಕಾರ್ಯ ಮಾಡುತ್ತಿದ್ದಾರೆ. ಜೊತೆಗೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲೂ ಸಹ ಎಚ್ಚರಿಕೆ ವಹಿಸಲಾಗಿದೆ. ಶಿರಸಿ ಗಲಾಟೆ ಹಿನ್ನೆಲೆಯಲ್ಲಿ 70ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದು, 200ಕ್ಕೂ ಹೆಚ್ಚು ಬೈಕ್‍ಗಳನ್ನು ಪೊಲೀಸರ ವಶಪಡಿಸಿಕೊಂಡಿದ್ದಾರೆ. 50 ಲಕ್ಷ ರೂ. ಹೆಚ್ಚು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದ್ದು, 30ಕ್ಕೂ ಹೆಚ್ಚು ಅಂಗಡಿಗಳಿಗೆ ಹಾನಿಯಾಗಿದೆ. ಇದನ್ನೂ ಓದಿ: ಸಿಎಂ ಹೋದ ಜಿಲ್ಲೆಯಲ್ಲೊಂದು ಹಿಂದೂ ಕಾರ್ಯಕರ್ತನ ಹೆಣ ಬೀಳತ್ತೆ- ಶೋಭಾ ಕಿಡಿ
Advertisement
7 ಪೊಲೀಸ್ ವಾಹನಗಳು ಜಖಂಗೊಂಡಿದ್ದು, 5 ಬೈಕ್‍ಗಳು ಬೆಂಕಿಗಾಹುತಿಯಾಗಿ 13 ಜನರು ಗಂಭೀರ ಗಾಯಗೊಂಡಿದ್ದಾರೆ. ಮೂರು ಮಂದಿ ಪತ್ರಕರ್ತರು ಗಾಯಗೊಂಡಿದ್ದು, ಭದ್ರತೆಗಾಗಿ ಬೆಂಗಳೂರು, ರಾಮನಗರ, ಬೆಳಗಾವಿ, ಧಾರವಾಡ, ಮಂಡ್ಯ ಮತ್ತು ಬಳ್ಳಾರಿಯಿಂದ ಹೆಚ್ಚುವರಿ ಪೊಲೀಸರ ಆಗಮಿಸಿದ್ದಾರೆ. ಸಿವಿಲ್, ಡಿಆರ್, ಕೆಎಸ್‍ಆರ್‍ಪಿ, ಅಗ್ನಿಶಾಮಕ ದಳದ ತುಕಡಿ ಸೇರಿ ಒಟ್ಟು 2500ಕ್ಕೂ ಹೆಚ್ಚು ಪೊಲೀಸರು ಶಿರಸಿಯಲ್ಲಿ ಮೊಕ್ಕಾಂ ಈಗ ಮೊಕ್ಕಾಂ ಹೂಡಿದ್ದಾರೆ. ಇದನ್ನೂ ಓದಿ:ರಾಜಕೀಯ ಪಕ್ಷದ ಪ್ರಕಟಣೆಯಿಂದ ಈ ಸ್ಥಿತಿ – ಪಬ್ಲಿಕ್ ಟಿವಿಗೆ ಐಜಿಪಿ ಹೇಮಂತ್ ನಿಂಬಾಳ್ಕರ್ ಸ್ಪಷ್ಟನೆ
Advertisement
Advertisement
https://youtu.be/u0TrJMSPqUo
https://youtu.be/N94xeWb2ryM
https://youtu.be/YWp8oHGTKro
https://youtu.be/wMhoBywNC5w
https://youtu.be/x3vVxPF2Axk
https://youtu.be/62mjLPAgh5k
https://youtu.be/6gDTIt2kztg
https://youtu.be/COKcmFatyhQ