Connect with us

Districts

ಸಿಎಂ ಹೋದ ಜಿಲ್ಲೆಯಲ್ಲೊಂದು ಹಿಂದೂ ಕಾರ್ಯಕರ್ತನ ಹೆಣ ಬೀಳತ್ತೆ- ಶೋಭಾ ಕಿಡಿ

Published

on

ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋದ ಜಿಲ್ಲೆಯಲ್ಲೊಂದು ಹಿಂದೂ ಕಾರ್ಯಕರ್ತನ ಹೆಣ ಬೀಳುತ್ತದೆ ಅಂತ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಕಾರವಾರದ ಶಿರಸಿಯಲ್ಲಿ ಪರೇಶ್ ಮೇಸ್ತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಸತ್ತ ದಿನವೇ ಮುಖ್ಯಮಂತ್ರಿಗಳು ಮಂಗಳೂರಿಗೆ ಹೋಗಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ವಾಪಾಸ್ ಬಂದ್ರು. ಅಂದೇ ಸಂಜೆ ಶರತ್ ಮಡಿವಾಳ ಸತ್ತ ಅನ್ನೋವಂಥದ್ದು ಘೋಷಣೆಯಾಯ್ತು ಅಂದ್ರು. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೋರ್ವ ಹಿಂದೂ ಕಾರ್ಯಕರ್ತನ ಕೊಲೆ

ಇದೇ ಡಿಸೆಂಬರ್ 7ರಂದು ಹೊನ್ನಾವರ, ಭಟ್ಕಳಕ್ಕೆ ಸಿಎಂ ಹೋಗ್ತಾರೆ, 8 ರಂದು ಬೆಳಗ್ಗೆ ಪರೇಶ್ ಮೇಸ್ತಾ ಸತ್ತ ಅಂತ ಹೇಳಿ ಘೋಷಣೆ ಮಾಡ್ತಾರೆ. ಹೀಗೆ ಯಾವ್ಯಾವ ಜಿಲ್ಲೆಗೆ ಮುಖ್ಯಮಂತ್ರಿಯವರು ಹೋಗ್ತಾರೋ, ಆ ಜಿಲ್ಲೆಯಲ್ಲಿ ಒಂದು ಹಿಂದೂ ಕಾರ್ಯಕರ್ತನ ಜೀವ ಉರುಳುತ್ತೆ ಅನ್ನುವಂತದ್ದು ಇಂದು ಹಲವಾರು ಕೊಲೆ ಪ್ರಕರಣಗಳ ಮೂಲಕ ಸಾಬೀತಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.  ಇದನ್ನೂ ಓದಿ: ಮರಣೋತ್ತರ ಪರೀಕ್ಷೆ ವರದಿ ಇನ್ನೂ ಬಂದಿಲ್ಲ, ಕೊಲೆ ಹೇಗೆ ಆಗುತ್ತೆ: ಸಿಎಂ ಸಿದ್ದರಾಮಯ್ಯ

ಪರೇಶ್ ಮೇಸ್ತಾ ಅವರ ಕೊಲೆಯನ್ನು ಮುಚ್ಚಿಹಾಕುವಂತಹ ಒಂದು ವ್ಯವಸ್ಥಿತ ಷಡ್ಯಂತ್ರವನ್ನು ಮುಖ್ಯಮಂತ್ರಿಯವರು ಮಾಡ್ತಾ ಇದ್ದಾರೆ. ಡಿಸೆಂಬರ್ 7ರಂದು ಮುಖ್ಯಮಂತ್ರಿಗಳು ಹೊನ್ನಾವರ ಭಟ್ಕಳದಲ್ಲಿ ಇದ್ದು, ಪರೇಶ್ ಮೇಸ್ತಾ ಅವರ ಹೆಣದ ಮೇಲೆ ಶಿಲಾನ್ಯಾಸವನ್ನು ಮಾಡಿ ಬಂದಿದ್ದಾರೆ ಅಂದ್ರು. ಇದನ್ನೂ ಓದಿ: ಸಹಜ ಸ್ಥಿತಿಯತ್ತ ಹೊನ್ನಾವರ- ಜಿಲ್ಲೆಯಾದ್ಯಂತ 3 ದಿನಗಳ ಕಾಲ ನಿಷೇಧಾಜ್ಞೆ ಜಾರಿ

ಮುಸಲ್ಮಾನ ಗೂಂಡಾಗಳು ದೇಶದ್ರೋಹಿ ಚಟುವಟಿಕೆಗಳನ್ನು ಮಾಡುತ್ತಾ, ನಿರಂತರವಾಗಿ ಇಲ್ಲಿ ಓಡಾಟ ಮಾಡಿ ತಲ್ವಾರ್, ಲಾಟಿ ಹಿಡ್ಕೊಂಡು ರಸ್ತೆಯಲ್ಲಿ ಓಡಾಡುತ್ತಿದ್ದರೂ ಕೂಡ ಸರ್ಕಾರ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳೂತ್ತಿಲ್ಲ. ಅದರ ಬದಲಾಗಿ ರಾತ್ರಿ 2, 3 ಗಂಟೆ ಹೊತ್ತಲ್ಲಿ ಹಿಂದೂಗಳ ಮನೆಗೆ ನುಗ್ಗಿ ಅವರನ್ನು ಬಂಧಿಸುಂತಹ ಕೆಲಸವನ್ನು ಹೊನ್ನಾವರದಲ್ಲಿ ಮಾಡಲಾಗಿದೆ ಅಂತ ಕಿಡಿಕಾರಿದ್ರು. ಇದನ್ನೂ ಓದಿ: ಪರೇಶ್ ಮೇಸ್ತ ದೇಹದ ಸ್ಥಿತಿ ಬಗ್ಗೆ ಪೊಲೀಸರು ಕೇಳಿದ ಪ್ರಶ್ನೆಗೆ ವೈದ್ಯರು ಉತ್ತರ ನೀಡಿದ್ದು ಹೀಗೆ

ಇಂದು ಜಿಹಾದಿಗಳಿಗೆ, ಪಿಎಫ್ ಐ ಕಾರ್ಯಕರ್ತರಿಗೆ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮುಖ್ಯಮಂತ್ರಿಗಳೇ ಗೃಹಸಚಿವರಿಗೆ ಕುಮ್ಮಕ್ಕು ಕೊಡ್ತಾ ಇದ್ದಾರೆ. ಈ ಕಾರಣದಿಂದ ಇಂದು ಕರ್ನಾಟಕದಲ್ಲಿ ಜಿಹಾದಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಒಟ್ಟಿನಲ್ಲಿ ಪರೇಶ್ ಮೇಸ್ತಾ ಅವರ ಕೊಲೆ ಪ್ರಕರಣವನ್ನು ಎನ್‍ಐಎ ಅಥವಾ ಸಿಬಿಐ ತನಿಖೆಗೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಇಂದು ಬಡ ಮೀನುಗಾರನೊಬ್ಬ ತನ್ನ ಮುಂದಿನ ಕುಟುಂಬವನ್ನು ಕಳೆದುಕೊಂಡಿದ್ದಾನೆ. 19 ವರ್ಷದ ಯುವಕ ತನ್ನ ಇಡೀ ಕುಟುಂಬವನ್ನೇ ತ್ಯಜಿಸಿದ್ದಾನೆ. ಹೀಗಾಗಿ ಆ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತಿದ್ದೇವೆ ಅಂತ ಶೋಭಾ ಕರಂದ್ಲಾಜೆ ಹೇಳಿದ್ರು. ಇದನ್ನೂ ಓದಿ:

Click to comment

Leave a Reply

Your email address will not be published. Required fields are marked *