‘ಕಹಿ’ ಮತ್ತು ‘ಅಳಿದು ಉಳಿದವರು’ ಸಿನಿಮಾ ನಿರ್ದೇಶಿಸಿದ್ದ ಅರವಿಂದ್ ಶಾಸ್ತ್ರಿ ‘ಬಿಸಿ ಬಿಸಿ ಐಸ್ ಕ್ರೀಮ್’ (Bisi Bisi Ice Cream) ತಿನಿಸೋದಿಕ್ಕೆ ಬರ್ತಿದ್ದಾರೆ. ಈ ವಿಭಿನ್ನ ಟೈಟಲ್ ನ ಚಿತ್ರದ ಟ್ರೈಲರ್ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನಿನ್ನೆ ಬಿಡುಗಡೆ ಮಾಡಲಾಗಿತು. ಈ ಸಂದರ್ಭದಲ್ಲಿ ಚಿತ್ರತಂಡ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ:‘ಬಿಗ್ ಬಾಸ್’ನಲ್ಲಿ ಭಾರೀ ಟ್ವಿಸ್ಟ್: ಫಿನಾಲೆಗೆ ಟಿಕೆಟ್ ಪಡೆದ ಸಂಗೀತ
Advertisement
ನಿರ್ದೇಶಕ ಅರವಿಂದ್ ಶಾಸ್ತ್ರಿ ಮಾತನಾಡಿ, ಕ್ಯಾಬ್ ಡ್ರೈವರ್ ವೃತ್ತಿ ಬಗ್ಗೆ ನಾವು ಹೇಳಲು ಹೊರಟಿಲ್ಲ. ಆ ವ್ಯಕ್ತಿಯ ಕಥೆಯನ್ನು ನಾವು ಸಿನಿಮಾದಲ್ಲಿ ಹೇಳಲು ಹೊರಟಿದ್ದೇವೆ. ಶೂಟಿಂಗ್ ಕಳೆದು ವರ್ಷ ಮುಗಿಸಿದ್ದೇವೆ. ಒಬ್ಬ ಒಂಟಿ ಕ್ಯಾಬ್ ಡ್ರೈವರ್ ಲೈಫ್‌ನಲ್ಲಿ ಹುಡುಗಿ ಬಂದಾಗ ಅಡ್ವೆಂಚರ್ಸ್, ಮಿಸ್ ಅಡ್ವೆಂಚರ್ಸ್ ಆಗುತ್ತದೆ ಅನ್ನೋದು ಸಿನಿಮಾ ಕಥೆಯಾಗಿದ್ದು, ಇದೀಗ ಸಿನಿಮಾದ ಶೂಟಿಂಗ್ ಮುಗಿದಿದೆ.
Advertisement
ನಟ ಅರವಿಂದ್ ಅಯ್ಯರ್ (Aravind Iyer) ಮಾತನಾಡಿ, ನನ್ನದು ವಿಭಿನ್ನ ಪಾತ್ರ. ಈ ಪಾತ್ರಕ್ಕಾಗಿ ವರ್ಕೌಟ್ ಬಿಟ್ಟಿದ್ದೇನೆ. ನಟನೆ ಮಾಡಲು ಒಳ್ಳೆಯ ಅವಕಾಶ ಸಿಕ್ಕಿದೆ. ಬಹಳ ಮಜಾ ಮಾಡಿಕೊಂಡು ಕೆಲಸ ಮಾಡಿದ್ದೇನೆ ಎಂದರು.
Advertisement
Advertisement
ನಾಯಕಿ ಸಿರಿ ರವಿಕುಮಾರ್ ಮಾತನಾಡಿ, ನಾನು ಅರವಿಂದ್ ಶಾಸ್ತ್ರಿ ಅವರ ಕಹಿ ಸಿನಿಮಾ ಸಮಯದಲ್ಲಿ ಮಾತನಾಡಿದ್ವಿ. ಮತ್ತೆ ಬಹಳ ವರ್ಷಗಳ ನಂತರ ಕಾಲ್ ಮಾಡಿದಾಗ ಖುಷಿಪಟ್ಟೆ. ಇವರ ‘ಕಹಿ ಮತ್ತು ಅಳಿದುಳಿದವರು’ ಸಿನಿಮಾ ನನಗೆ ಇಷ್ಟ. ಕಾಮಿಡಿ, ಥ್ರಿಲ್ಲರ್, ಅಡ್ವೆಂಚರ್ ಎಲ್ಲವೂ ಕಥೆಯಲ್ಲಿ ಇದೆ. ಇದನ್ನು ನಾನು ಮಾಡಲು ರೆಡಿಯಾದೆ. ಶೂಟಿಂಗ್ ಮಾಡಲು ಮಜವಾಗಿತ್ತು. ಸಿನಿಮಾ ನೋಡಿದಾಗ ಖುಷಿ ಎನಿಸಿತು ಎಂದರು.
ಕ್ಯಾಬ್ ಡ್ರೈವರ್ ಕಥೆ ಹೇಳುವ ಸಿನಿಮಾಗಳು ಈಗಾಗಲೇ ಬಂದಿವೆ. ಆದರೆ ಬಿಸಿ ಬಿಸಿ ಐಸ್ ಕ್ರೀಮ್, ಅನಾರೋಗ್ಯದಲ್ಲಿರುವ ಕ್ಯಾಬ್ ಡ್ರೈವರ್ ಜೀವನದಲ್ಲಿ ನಿಗೂಢ ಮಹಿಳೆಯೊಬ್ಬಳು ಬಂದಾಗ, ಅವಳು ಅವನ ದುಃಖಗಳಿಗೆ ಔಷಧ ಮತ್ತು ಅನೇಕ ಸಾಹಸಗಳಿಗೆ ನಾಂದಿಯಾಗುತ್ತಾಳೆ ಎಂಬ ಕಥೆ ಎಳೆಯನ್ನು ಇಟ್ಟುಕೊಂಡು ಅರವಿಂದ್ ಶಾಸ್ತ್ರಿ ಸಿನಿಮಾ ಮಾಡಿದ್ದಾರೆ. ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಡಾರ್ಕ್ ಕಾಮಿಡಿ ರೊಮ್ಯಾನ್ಸ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಅರವಿಂದ್ ಅಯ್ಯರ್- ಸಿರಿ ರವಿಕುಮಾರ್ ಜೋಡಿಯಾಗಿ ನಟಿಸುತ್ತಿದ್ದು, ಗೋಪಾಲಕೃಷ್ಣ ದೇಶಪಾಂಡೆ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ, ಎನೋಷ್ ಒಲಿವೇರಾ ಛಾಯಾಗ್ರಹಣ ಚಿತ್ರಕ್ಕಿದೆ. ಅಕ್ಷರ ಭಾರಧ್ವಾಜ್ ‘ಬಿಸಿ ಬಿಸಿ ಐಸ್ ಕ್ರೀಮ್’ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.