Bengaluru CityKarnatakaLatestMain Post

ನಿಷೇಧಿತ ಪ್ಲಾಸ್ಟಿಕ್ ಬಳಸುವ ಗ್ರಾಹಕರಿಗೆ ಕಾದಿದೆ ಹಬ್ಬ – ದಂಡ ಪ್ರಯೋಗಕ್ಕೆ ಮಾರ್ಷಲ್ಸ್ ಎಂಟ್ರಿ

ಬೆಂಗಳೂರು: ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ (Plastic)  ಬಳಸುವ ಗ್ರಾಹಕರು 200 ರೂ. ನಿಮ್ಮೊಂದಿಗೆ ಇಟ್ಟುಕೊಂಡಿರಿ. ಯಾಕೆಂದರೆ ಇನ್ಮುಂದೆ ನೀವು ನಿಷೇಧಿತ ಪ್ಲಾಸ್ಟಿಕ್ ಬಳಕೆ ವೇಳೆ ಸಿಕ್ಕಿ ಬಿದ್ದರೆ ದಂಡ ಪ್ರಯೋಗಿಸಲು ಬಿಬಿಎಂಪಿ (BBMP) ಮಾರ್ಷಲ್ಸ್‌ (Marshalls) ಅಖಾಡಕ್ಕಿಳಿದಿದ್ದಾರೆ.

ಪ್ಲಾಸ್ಟಿಕ್ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆ. ಬೆಂಗಳೂರಿನಲ್ಲಿ (Bengaluru) ವ್ಯಾಪಾರಿಗಳು, ಗ್ರಾಹಕರು ಪ್ಲಾಸ್ಟಿಕ್ ಮೇಲೆ ಅವಲಂಬಿತರಾಗಿದ್ದಾರೆ. ತರಕಾರಿ, ಹಣ್ಣು ಖರೀದಿ ವೇಳೆ 20 ರೂ.ಗೆ ಬೇಕಾದ ಸಾಮಾಗ್ರಿ ಸಿಕ್ಕರೆ 5 ರೂ. ಕೈ ಚೀಲಕ್ಕೆ ಖರ್ಚು ಮಾಡಬೇಕಾಗಿದೆ. ಇದನ್ನು ತಪ್ಪಿಸಲು ವ್ಯಾಪಾರಿಗಳು, ಗ್ರಾಹಕರು ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಇದನ್ನೂ ಓದಿ: ಇಂದು ಮಧ್ಯಾಹ್ನ ಸಿಇಟಿ ಪರಿಷ್ಕೃತ ರ್‍ಯಾಂಕಿಂಗ್ ಪಟ್ಟಿ ಪ್ರಕಟ

ಇನ್ಮುಂದೆ ಪ್ಲಾಸ್ಟಿಕ್ ಕೈ ಚೀಲ ಬಳಸಿದ್ದು ಕಂಡು ಬಂದರೆ ಗ್ರಾಹಕರಿಗೂ 200 ರೂ. ದಂಡ ಫಿಕ್ಸ್. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮದಡಿ ಮಾಲಿನ್ಯ ನಿಯಂತ್ರಣ ಮಂಡಳಿ ದಂಡದ ಪ್ರಮಾಣ ಕುರಿತು ಆದೇಶ ಹೊರಡಿಸಿದೆ. ಈ ದಂಡವನ್ನು ಬಿಬಿಎಂಪಿ ಯಥಾವತ್ತಾಗಿ ಜಾರಿಗೆ ತರಲು ಸಜ್ಜಾಗಿದೆ. ಮಾರ್ಷಲ್ಸ್ ಫೀಲ್ಡ್‌ನಲ್ಲಿ ಹಲವೆಡೆ ಪ್ಲಾಸ್ಟಿಕ್ ಬಲ್ಕ್ ಜನರೇಟರ್ ವಿರುದ್ಧ ದಂಡ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಕರ್ನಾಟಕ, ತಮಿಳುನಾಡಿನಲ್ಲಿ ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ PFI

ಪ್ಲಾಸ್ಟಿಕ್ ದಂಡಾಸ್ತ್ರ:
ನಗರದಲ್ಲಿ ವ್ಯಾಪಾರಿಗಳಿಂದ ಗ್ರಾಹಕರು ಖರೀದಿಸುವ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಬ್ಯಾನರ್ ಬಂಟಿಂಗ್ಸ್, ಫ್ಲೆಕ್ಸ್, ಪ್ಲಾಸ್ಟಿಕ್ ಕಪ್, ಸ್ಪೂನ್, ಡೈನಿಂಗ್ ಟೇಬಲ್ ಮೇಲೆ ಹಾಕುವ ಪ್ಲಾಸ್ಟಿಕ್ ಹಾಳೆ ಕಂಡು ಬಂದಲ್ಲಿ ಕೂಡಲೇ ದಂಡ ಪ್ರಯೋಗಕ್ಕೆ ಮಾರ್ಷಲ್ಸ್ ಸಜ್ಜಾಗಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button