Bengaluru CityDakshina KannadaDistrictsKarnatakaLatestLeading NewsMain Post

ಕರ್ನಾಟಕ, ತಮಿಳುನಾಡಿನಲ್ಲಿ ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ PFI

ಬೆಂಗಳೂರು: ಪಿಎಫ್‍ಐ ಬ್ಯಾನ್(PFI Ban) ನಂತರವೂ ತನಿಖಾ ಸಂಸ್ಥೆಗಳಿಗೆ ದಿನಕ್ಕೊಂದು ಸ್ಟೋಟಕ ಮಾಹಿತಿಗಳು ಲಭ್ಯವಾಗುತ್ತಿವೆ. ದಾಳಿ ಮಾಡುವುದು ಒಂದೆರಡು ವಾರಗಳ ಕಾಲ ತಡವಾಗಿದ್ದರೂ ದೊಡ್ಡ ಮಟ್ಟದ ಅಪಾಯವೊಂದು ಎದುರಾಗುವ ಸಾಧ್ಯತೆಗಳಿದ್ದವು.

ಹೌದು. ತನಿಖೆಯ ವೇಳೆ ಕರ್ನಾಟಕ(Karnataka) ಮತ್ತು ತಮಿಳುನಾಡಿನ(Tamil Nadu) ಹಲವು ಭಾಗಗಳಲ್ಲಿ ಕೋಮುಗಲಭೆ ಸೃಷ್ಟಿಸಲು ಭರ್ಜರಿ ತಯಾರಿ ಮಾಡಿಕೊಳ್ಳಲಾಗಿತ್ತು ಎನ್ನುವ ಬಗ್ಗೆ ಪೊಲೀಸರಿಗೆ ಮಹತ್ವದ ಸಾಕ್ಷಿಗಳು ಲಭ್ಯವಾಗಿವೆ.

ಕರ್ನಾಟಕ ಸೇರಿದಂತೆ ದೇಶಾದ್ಯಂತ ನಡೆದ ಕೆಲ ಘಟನೆಗಳಿಂದ ಆಕ್ರೋಶಗೊಂಡಿದ್ದ ಪಿಎಫ್‍ಐ ಸಂಘಟನೆ ಹಿಂದೂ ಸಮುದಾಯದ ಸಾಮರಸ್ಯ ಹಾಳು ಮಾಡಿ ದೊಡ್ಡ ಮಟ್ಟದಲ್ಲಿ ಗಲಭೆ ಸೃಷ್ಟಿಗೆ ಸಿದ್ದತೆ ನಡೆಸಿತ್ತು. ಯಾರ್ಯಾರು ಏನೇನ್ ಕೆಲಸ ಮಾಡಬೇಕು? ನಂತರ ಏನು ಮಾಡಬೇಕು ಎನ್ನುವ ಬಗ್ಗೆ ಬ್ಲೂಪ್ರಿಂಟ್ ರೆಡಿ ಮಾಡಿತ್ತು. ಇದನ್ನೂ ಓದಿ: ಕರಾವಳಿಯಲ್ಲಿ PFI ಟೆರರ್ ಟ್ರೈನಿಂಗ್- ಸ್ಫೋಟಕ ಸತ್ಯ ಬಯಲು

ಯುವಕರನ್ನು ಗುಪ್ತವಾಗಿ ಟ್ರೈನಿಂಗ್ ಕ್ಯಾಂಪ್‍ಗಳಿಗೆ ಬಿಟ್ಟು ಅಲ್ಲಿ ತಯಾರಿ ಆರಂಭಿಸಿಲಾಗಿತ್ತು. ಪ್ರಮುಖವಾಗಿ ದಕ್ಷಿಣ ಕನ್ನಡದ ಪುತ್ತೂರಿನ ಕಾಡಿನ ಮಧ್ಯೆ ಯುವಕರಿಗೆ ಟ್ರೈನಿಂಗ್ ಕ್ಯಾಂಪ್‍ಗಳನ್ನು ಆಯೋಜನೆ ಮಾಡಿದ್ದ ವಿಚಾರ ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

ಸದ್ಯ ಪೊಲೀಸರ ವಶದಲ್ಲಿರುವ ಕೆಲ ಆರೋಪಿಗಳ ಬಳಿ ಈ ಬಗ್ಗೆ ಸಾಕ್ಷಿಗಳು ಸಿಕ್ಕಿದ್ದು, ಪೊಲೀಸರು ಕೂಡ ಸ್ಥಳ ಮಹಜರು ಮಾಡಿದ ವೇಳೆ ಪೂರಕ ದಾಖಲೆಗಳು, ಸಾಕ್ಷಿಗಳು ಸಿಕ್ಕಿವೆ.

Live Tv

Leave a Reply

Your email address will not be published. Required fields are marked *

Back to top button