ಮೂರು ದಿನಗಳ ಹಿಂದೆಯಷ್ಟೇ ಕನ್ನಡ ಸಿನಿಮಾ ರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಟೈಟಲ್ ತಮ್ಮ ಬಳಿ ಇದೆ. ಅದನ್ನು ಯಾರೂ ಬಳಸಬಾರದು ಎಂದು ತಮ್ಮ ವಕೀಲರ ಮೂಲಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರವೊಂದನ್ನು ಕಳುಹಿಸಿದ್ದರು. ಈ ಪತ್ರವು ಸ್ಯಾಂಡಲ್ ವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ, ಅಸಲಿಯಾಗಿ ವಿಷಯವೇ ಬೇರೆ ಆಗಿದೆ. ಈ ಟೈಟಲ್ ರಾಜೇಂದ್ರ ಸಿಂಗ್ ಬಾಬು ಅವರ ಬಳಿಯೇ ಇಲ್ಲವೆಂದು ಗೊತ್ತಾಗಿದೆ.
Advertisement
ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ಇರುವುದು ನಿರ್ಮಾಪಕ ಬಿ.ಕೆ. ಗಂಗಾಧರ್ ಅವರ ಬಳಿ. ಈಗಾಗಲೇ ರಮ್ಯಾ ಅವರು ಗಂಗಾಧರ್ ಅವರಿಂದ ಪತ್ರದ ಮೂಲಕ ಟೈಟಲ್ ಅನ್ನು ತಮಗೆ ವರ್ಗಾಯಿಸಿಕೊಂಡಿದ್ದಾರಂತೆ. ಗಂಗಾಧರ ಅವರು ಕೊಟ್ಟ ಪತ್ರವನ್ನು ವಾಣಿಜ್ಯ ಮಂಡಳಿಗೆ ಸಲ್ಲಿಸಿದರೆ, ಟೈಟಲ್ ರಮ್ಯಾ ಅವರ ಪಾಲಾಗಲಿದೆ. ಹಾಗಾಗಿ ಈ ಶೀರ್ಷಿಕೆಗೂ ಮತ್ತು ರಾಜೇಂದ್ರ ಸಿಂಗ್ ಬಾಬು ಅವರಿಗೂ ಯಾವುದೇ ಸಂಬಂಧವಿಲ್ಲವೆಂದು ಸ್ವತಃ ವಾಣಿಜ್ಯ ಮಂಡಳಿಯೇ ಹೇಳಿದೆ. ಇದನ್ನೂ ಓದಿ: ಮೊದಲ ಬಾರಿಗೆ ಮಗಳ ಮುಖ ಪರಿಚಯಿಸಿದ `ಯುವರತ್ನ’ ನಟಿ
Advertisement
Advertisement
ರಾಜೇಂದ್ರ ಸಿಂಗ್ ಬಾಬು ವಾಣಿಜ್ಯ ಮಂಡಳಿಗೆ ಬರೆದ ಪತ್ರದಲ್ಲಿ ‘ನನ್ನ ಕಕ್ಷಿದಾರರು ನಿರ್ಮಿಸುವ ಮೇಲ್ಕಂಡ ಸ್ವಾತಿ ಮುತ್ತಿನ ಮಳೆ ಹನಿಯೆ’ ಹೆಸರಿನ ಚಿತ್ರದ ತಾರಾಗಣದಲ್ಲಿ ಅಂಬರೀಶ್, ಸುಹಾಸಿನಿ ಮತ್ತು ಇತರ ಕಲಾವಿದರು ನಟಿಸಿದ್ದು. ಶೇಕಡಾ 80ರಷ್ಟು ಚಿತ್ರೀಕರಣ ಕೂಡ ಮುಗಿದಿದೆ. ಮೇಲ್ಕಂಡ ಚಿತ್ರದ ನಾಯಕ ನಟ ಅಂಬರೀಶ್ ನಿಧನ ಹೊಂದಿ ನಂತರ ಚಿತ್ರದ ಚಿತ್ರೀಕರಣವು ಕಾರಣಾಂತರಗಳಿಂದ ನಿಂತಿದೆ. ನನ್ನ ಕಕ್ಷಿದಾರರು ಹೇಳುವ ಹಾಗೆ ಮೇಲ್ಕಂಡ ಚಿತ್ರ ಶೀರ್ಷಿಕೆ ಅವರೇ ನಿರ್ದೇಶಿಸಿರುವ ಬಣ್ಣದ ಗೆಜ್ಜೆ ಚಿತ್ರದ ಹಾಡಿನ ಶೀರ್ಷಿಕೆಯಾಗಿರುತ್ತದೆ’ ಎಂದು ಸಿಂಗ್ ಬಾಬು ಪರ ವಕೀಲ ಎಸ್.ಆರ್. ಶ್ರೀನಿವಾಸ್ ಮೂರ್ತಿ ಪತ್ರ ಬರೆದಿದ್ದಾರೆ.
Advertisement
ಅಲ್ಲದೇ, ತಾವು ನಿರ್ಮಾಣ ಮಾಡುವ ಚಿತ್ರಕ್ಕೆ ಮೇಲ್ಕಂಡ ಶೀರ್ಷಿಕೆಯನ್ನು ಅಂದರೆ ಸ್ವಾತಿ ಮುತ್ತಿನ ಮಳೆ ಹನಿಯೇ ಶಿರ್ಷಿಕೆಯನ್ನಾಗಲಿ, ಹಾಡನ್ನಾಗಲು ಯಾವುದೇ ರೀತಿ ಉಪಯೋಗಿಸಲು ಅಥವಾ ನೋಂದಾಯಿಸಲು ನನ್ನ ಕಕ್ಷಿದಾರರ ವಿನಃ ಯಾರಿಗೂ ಯಾವುದೇ ವಿಧವಾದ ಹಕ್ಕು ಇರುವುದಿಲ್ಲ. ಒಂದು ವೇಳೆ ನಾನು ನೀಡಿರುವ ಈ ವಕೀಲರ ನೋಟಿಸಿನ ನಂತರವೂ ನೀವು ಬೇರೆ ನಿರ್ಮಾಪಕರಿಗೆ ಈ ಚಿತ್ರದ ಶೀರ್ಷಿಕೆಯನ್ನು ನೋಂದಾವಣೆ ಮಾಡಿಕೊಡಲು ಮತ್ತು ಚಿತ್ರ ನಿರ್ಮಾಣ ಮಾಡಲು ಅವಕಾಶ ಕೊಟ್ಟಿದ್ದೆ ಆದರೆ, ನನ್ನ ಕಕ್ಷಿದಾರರು ನೊಂದಾಣಿಕೆ ಮಾಡಿರುವ ಶೀರ್ಷಿಕೆಯ ಕೃತಿ ಚೌರ್ಯವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.