ನಟಿಯರ ಬಗ್ಗೆ ಗಾಯಕ ಎಸ್‍ಪಿಬಿ ಶಾಕಿಂಗ್ ಹೇಳಿಕೆ

Public TV
1 Min Read
sp balasubramanyam

ಹೈದಾರಾಬಾದ್: ಬಹುಭಾಷಾ ಗಾಯಕ, ನಟ ಎಸ್‍ಪಿ ಬಾಲಸುಬ್ರಮಣ್ಯಂ ಅವರು ಕಾರ್ಯಕ್ರಮವೊಂದರಲ್ಲಿ ನಟಿಯರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಎಸ್‍ಪಿಬಿ ಅವರು ನಟಿಯರು ಧರಿಸುವ ಉಡುಪಿನ ಬಗ್ಗೆ ಪ್ರಶ್ನಿಸಿದ್ದಾರೆ. ನಟಿಯರು ತಾವು ಧರಿಸುವ ಉಡುಪಿನಿಂದ ಅವರಿಗೆ ಕೆಲಸ ಸಿಗುತ್ತದೆ ಎಂದು ತಿಳಿದುಕೊಂಡಿರುತ್ತಾರೆ ಎಂದು ನನಗೆ ಅನ್ನಿಸುತ್ತದೆ ಎಂದು ಹೇಳುವ ಮೂಲಕ ನಟಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈಗಿನ ಕಾಲದಲ್ಲಿ ನಟಿಯರಿಗೆ ಸಿನಿಮಾ ಕಾರ್ಯಕ್ರಮಗಳಲ್ಲಿ ಯಾವ ರೀತಿಯ ಉಡುಪು ಧರಿಸಬೇಕು ಎಂದು ತಿಳಿದಿಲ್ಲ. ನಟಿಯರ ವರ್ತನೆ ನೋಡಿ ಇದು ಅವರ ಮುಗ್ಧತೆ ಎಂದು ತಿಳಿದುಕೊಳ್ಳಬೇಕೋ? ಅಥವಾ ಮೈ ಕಾಣುವಂತಹ ಬಟ್ಟೆ ಧರಿಸಿದ್ದರೆ ಮಾತ್ರ ನಾಯಕರು ಹಾಗೂ ನಿರ್ದೇಶಕರು ಸಿನಿಮಾಗಳಲ್ಲಿ ಅವಕಾಶ ನೀಡುತ್ತಾರೆ ಎಂದು ಅವರು ಭಾವಿಸುತ್ತಾರೋ? ಗೊತ್ತಿಲ್ಲ ಎಂದು ಎಸ್‍ಪಿಬಿ ಅವರು ಹೇಳಿದ್ದಾರೆ.

sp balasubramanyam 2

ನನ್ನ ಈ ಹೇಳಿಕೆಗೆ ನಟಿಯರು ನನ್ನ ಮೇಲೆ ಕೋಪ ಮಾಡಿಕೊಂಡರು ಪರವಾಗಿಲ್ಲ. ಏಕೆಂದರೆ ಇಲ್ಲಿ ಸಾಕಷ್ಟು ಜನರಿಗೆ ತೆಲುಗು ತಿಳಿಯಲ್ಲ. ಹಾಗಾಗಿ ಅವರಿಗೆ ನನ್ನ ಹೇಳಿಕೆ ಅರ್ಥವಾಗಿರುವುದಿಲ್ಲ ಎಂದು ಹೇಳಿದ್ದಾರೆ.

ಎಸ್‍ಪಿ ಬಾಲಸುಬ್ರಮಣ್ಯಂ ಅವರು ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ಅತಿ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಎಸ್‍ಪಿಬಿ ಒಟ್ಟು 16 ಭಾಷೆಯಲ್ಲಿ 40,000 ಹಾಡನ್ನು ಹಾಡಿದ್ದಾರೆ. ಎಸ್‍ಪಿಬಿ ಅವರಿಗೆ ಅತ್ಯುತ್ತಮ ಗಾಯಕನಾಗಿ ಒಟ್ಟು 6 ನ್ಯಾಷನಲ್ ಫಿಲ್ಮ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಾಲಿವುಡ್ ಹಾಡುಗಳಿಗೂ ಕೂಡ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article