ಹಾಲಿವುಡ್ ನ ಖ್ಯಾತ ಗಾಯಕ ಆರ್.ಕೆಲ್ಲಿ ಮೇಲೆ ಸರಣಿ ಲೈಂಗಿಕ ಅಪರಾಧಗಳ ಆರೋಪವಿತ್ತು. ಈ ಆರೋಪಗಳೆಲ್ಲ ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಬರೋಬ್ಬರಿ ಮೂವತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ ಬ್ರೂಕ್ ಲೀನ್ ನ್ಯಾಯಾಲಯ. 30 ವರ್ಷ ಜೈಲು ಶಿಕ್ಷೆಯ ಜೊತೆಗೆ ಒಂದು ಲಕ್ಷ ಡಾಲರ್ ಹಣವನ್ನೂ ಜುಲ್ಮಾನೆಯಾಗಿ ಕೊಡಲು ಆದೇಶಿಸಲಾಗಿದೆ.
Advertisement
ಸಣ್ಣ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅಭಿಮಾನಿಗಳ ಮೇಲೂ ಲೈಂಗಿಕ ದೌರ್ಜನ್ಯ ಹಾಗೂ ಯುವತಿಯರನ್ನು ಲೈಂಗಿಕತೆಗಾಗಿ ಉದ್ಯೋಗಕ್ಕೆ ಸೇರಿಸಿಕೊಳ್ಳುವ ಆರೋಪ ಸೇರಿದಂತೆ ಒಂಬತ್ತು ಆರೋಪಗಳು ಕೆಲ್ಲಿ ಮೇಲಿದ್ದವು. ಶಿಕ್ಷೆ ಪ್ರಕಟಿಸುತ್ತಿದ್ದಂತೆಯೇ ಕೆಲ್ಲಿ ಪರ ವಕೀಲರು ಶಿಕ್ಷೆಯನ್ನು ಕಡಿಮೆಗೊಳಿಸುವಂತೆ ಮನವಿ ಮಾಡಿದರು. ನ್ಯಾಯಾಲಯವು ಕೆಲ್ಲಿ ವಕೀಲರ ಮನವಿಯನ್ನು ಪುರಸ್ಕರಿಸದೇ ಶಿಕ್ಷೆ ಪ್ರಕಟಿಸಿದೆ. ಇದನ್ನೂ ಓದಿ:ಪವಿತ್ರ ಲೋಕೇಶ್ ದೂರು : ತನಿಖೆ ಆರಂಭಿಸಿದ ಸೈಬರ್ ಪೊಲೀಸ್
Advertisement
Advertisement
ಕೆಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ 45 ಮಂದಿ ಸಾಕ್ಷಿ ನುಡಿದಿದ್ದರು. ಅದರಲ್ಲಿ 11 ಜನ ಸಂತ್ರಸ್ತೆಯರೂ ಇದ್ದರು. ಅಲ್ಲದೇ, ಮಾದಕ ವಸ್ತು ಸೇವನೆ, ಹಲ್ಲೆ, ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯದಂತಹ ಗಂಭೀರ ಆರೋಪಗಳನ್ನು ಅವರು ಎದುರಿಸುತ್ತಿದ್ದರು. ಅಚ್ಚರಿಯ ಸಂಗತಿ ಅಂದರೆ, ಕೆಲ್ಲಿಯ ಮೊದಲ ಪತ್ನಿ ಕೂಡ ದೂರು ದಾಖಲಿಸಿದ್ದರು.